ಶ್ರೀ ವಿಷ್ಣು ಸೇವಾ ಸಮಿತಿ ಉದಯಗಿರಿ ಮಾವಿನಕಟ್ಟೆ ಇದರ ಆಶ್ರಯದಲ್ಲಿ ಸೆ.22 ರಂದು ಓಣಂ ಆಚರಣೆಯು ಶ್ರೀ ವಿಷ್ಣು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಿತಿಯ ಗೌರವ ಸಲಹೆಗಾರರಾದ ಗಂಗಾಧರ ಕೇಪಳಕಜೆ ನೆರವೇರಿಸಿದರು.
ಸಮುದಾಯದ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಮುದಾಯದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಓಣಂ ಹಬ್ಬದ ವಿಶೇಷ “ತಿರುವಾದಿರ ನೃತ್ಯ” ವು ಆಕರ್ಷಣೀಯವಾಗಿತ್ತು. 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳನ್ನು ಹಾಗೂ ಸಮಾಜರತ್ನ ಸೇವಾ ಪುರಸ್ಕೃತ ಲೀಲಾ ಭಾಸ್ಕರ್ ಅಡ್ಯಾರ್ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಶ್ರೀ ವಿಷ್ಣು ಸೇವಾ ಸಮಿತಿಯ ಅಧ್ಯಕ್ಷರಾದ ಹರಿಶ್ಚಂದ್ರ ಕೇಪಳಕಜೆ, ಮುಖ್ಯ ಅತಿಥಿಗಳಾಗಿ ಸಮುದಾಯದ ಹಿರಿಯರಾದ ಬಾಲಕೃಷ್ಣ ಮರೀಲ್, ನಾಲ್ಕೂರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಚಾರ್ಮತ, ಕೆ.ಎಸ್.ಆರ್.ಟಿ.ಸಿ ನಿವೃತ್ತ ಚಾಲಕರಾದ ಕುಮಾರ್ ಅಡ್ಡನಪಾರೆ, ಉದ್ಯಮಿಗಳಾದ ಅನಿಲ್ ಗುತ್ತಿಗಾರು ಹಾಗೂ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಕುಮಾರ್ ನಾರ್ಣಕಜೆ ಉಪಸ್ಥಿತರಿದ್ದರು. ವಿವೇಕ ಕಲ್ಲುಪಣೆ ಸ್ವಾಗತಿಸಿ, ಕು.ಕಾರ್ತಿಕಾ ಕೇಪಳಕಜೆ ವಂದಿಸಿದರು.
- Friday
- November 1st, 2024