ಭಾರತೀಯ ಅಂಚೆ ಇಲಾಖೆಯಲ್ಲಿ ಕಳೆದ 42 ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಚೆನ್ನಕೇಶವ ಪಾರೆಪ್ಪಾಡಿಯವರು ಗುತ್ತಿಗಾರು ಆರಂತೋಡು, ಸುಳ್ಯ, ದೊಡ್ಡತೋಟ, ನೆಟ್ಟಣ, ಸುಬ್ರಹ್ಮಣ್ಯ ಹಾಗೂ ಪ್ರಸ್ತುತ ಸಂಪಾಜೆ ಅಂಚೆಕಛೇರಿಯಲ್ಲಿ ಸೆ.30 ರಂದು ಸೇವಾ ನಿವೃತ್ತರಾಗಲಿದ್ದಾರೆ.
ಚೆನ್ನಕೇಶವ ರವರು ನಾಲ್ಕೂರು ಗ್ರಾಮದ ಮೆಟ್ಡಿನಡ್ಕದ ಪಾರೆಪ್ಪಾಡಿ ದಿ. ಸುಂದರ ಗೌಡ ಮತ್ತು ಶ್ರೀಮತಿ ಬಾಲಕಿ ದಂಪತಿಗಳ 4 ಜನ ಮಕ್ಕಳ ಪೈಕಿ ದ್ವಿತೀಯ ಪುತ್ರನಾಗಿ 1964 ಸೆ.23 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕಿರಿಯ ಪ್ರಾಥಮಿಕ ಮೆಟ್ಟಿನಡ್ಕ ಮಾಧ್ಯಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಬೊಬ್ಬೆಕೇರಿ ಶಾಲೆ ಪುತ್ತೂರು, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು, ಪದವಿ ಶಿಕ್ಷಣವನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ಪೂರೈಸಿರುತ್ತಾರೆ.
ದಿನಾಂಕ :27/05/1983ರಲ್ಲಿ ಭಾರತೀಯ ಅಂಚೆ ಕಛೇರಿ ಗುತ್ತಿಗಾರಿನಲ್ಲಿ ಇಲಾಖೇತರ ನೌಕರನಾಗಿ ಸೇರಿ ತದ ನಂತರದಲ್ಲಿ ನೇರ ನೇಮಕಾತಿಗೊಂಡು ಆರಂತೋಡು, ಸುಳ್ಯ ಪ್ರಧಾನ ಅಂಚೆ ಕಚೇರಿ, ದೊಡ್ಡತೋಟ, ನೆಟ್ಟಣ, ಸುಬ್ರಹ್ಮಣ್ಯ,ಗುತ್ತಿಗಾರು ಹಾಗೂ ಪ್ರಸ್ತುತ ಸಂಪಾಜೆ ಸೇವೆ ಸಲ್ಲಿಸುತ್ತಿದ್ದಾರೆ. ಸೆ.30 ರಂದು ಸಂಪಾಜೆ ಉಪ ಅಂಚೆ ಕಚೇರಿಯಲ್ಲಿ LSG-SPM ಆಗಿ ವೃತ್ತಿಯಿಂದ ನಿವೃತ್ತಿಯಾಗಲಿದ್ದಾರೆ. 42 ವರ್ಷಗಳ ಕಾಲ ಸುದೀರ್ಘ ಸೇವಾವಧಿಯಲ್ಲಿ ಭಾರತೀಯ ಅಂಚೆ ಕಚೇರಿಯಲ್ಲಿ ಕೊಡ ಮಾಡುವ RPLI/PLI ಪ್ರಶಸ್ತಿಗಳನ್ನು 7 ಬಾರಿ ಪಡೆದಿರುತ್ತಾರೆ. 2012-13 ಆರ್ಥಿಕ ವರ್ಷದಲ್ಲಿ ನೆಟ್ಟಣ ಅಂಚೆ ಕಚೇರಿಯ ಸೇವೆಯ ಸಂದರ್ಭ ದಿನಾಂಕ :11/06/2013 ರಂದು ಬೆಂಗಳೂರು G.P.O ನ “AWARD FUNCTION “ನಲ್ಲಿ ಆಗಿನ” PMG” ಶ್ರೀಮತಿ ವೀಣಾ ಶ್ರೀನಿವಾಸ್ ಅವರಿಂದ ಚಿನ್ನದ ಪದಕ ಪಡೆದಿರುತ್ತಾರೆ.
ಇವರು1989 ಜೂನ್26 ರಂದು ಸಂಕೇಶ ಸಂಕಪ್ಪ ಮಾಸ್ತರ್ ಮತ್ತು ಶ್ರೀಮತಿ ಗಿರಿಜಾ ದಂಪತಿಗಳ ಪುತ್ರಿ ಶ್ರೀಮತಿ ಯಶೋಧ ಅವರನ್ನು ವಿವಾಹವಾಗಿದ್ದಾರೆ. ಮಕ್ಕಳಾದ ದೇಶಿತ್. ಪಿ. BAMS, MD ಶಿಕ್ಷಣ ಪೂರೈಸಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಚಿತ್ರದುರ್ಗ ಆಯುರ್ವೇದಿಕ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ಬೆಂಗಳೂರಿನಲ್ಲಿ ಆಯುರ್ ಸ್ಪೂರ್ತಿ ಎಂಬ ಎರಡು ಪಂಚಕರ್ಮ ಸೆಂಟರ್ ಗಳನ್ನು ನಡೆಸುತ್ತಿದ್ದಾರೆ. ಸೊಸೆ ಕೃತಿ ದೇಶಿತ್ ಬೆಂಗಳೂರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದಾಳೆ. ಮೊಮ್ಮಗ ಕೆಯಾನ್ಸ್.
ಇವರ ಎರಡನೇ ಪುತ್ರ ನಿಶಿತ್.ಪಿ ಡಿಪ್ಲೋಮೊ ಇಂಜಿನಿಯರಿಂಗ್ ಪದವೀಧರನಾಗಿದ್ದು,ಭಾರತೀಯ ಅಂಚೆ ಇಲಾಖೆ ಬೆಂಗಳೂರು ಜೆ ಪಿ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೊಸೆ ಸೌಮ್ಯ ನಿಶಿತ್ ಬೆಂಗಳೂರಿನ ವೈಟ್ ಫೀಲ್ಡ್ ಐ. ಟಿ. ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಇವರ ಮೂರನೇ ಮಗ ವಿನೀತ್. ಪಿ. Bsc. Nursing ಪದವೀಧರನಾಗಿದ್ದು , ಸಿಂಗಾಪುರ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೊಸೆ ತೀರ್ಥಕುಮಾರಿ ವಿನೀತ್ ರವರು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ” CHO “ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಚೆನ್ನಕೇಶವ ಪಾರೆಪ್ಪಾಡಿಯವರು ಸುಬ್ರಹ್ಮಣ್ಯದ ಪರ್ವತಮುಖಿ ಎಂಬಲ್ಲಿ “ಮಿಥಿಲಾ ಪಾರೆಪ್ಪಾಡಿ” ಮನೆಯಲ್ಲಿ ನೆಲೆಸಿದ್ದಾರೆ.