ಸುಳ್ಯದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ತನ್ನ ಮನೆ ಸಕಲೇಶಪುರದಿಂದ ಬಿಸಿಲೆ, ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿರುವ ವೇಳೆ ತಾನು ಕುಳಿತ ಸೀಟಿನ ಇನ್ನೊಂದು ಬದಿಯಲ್ಲಿ ಕುಳಿತಿದ್ದ ಅಬ್ದುಲ್ ನಿಯಾಜ್ ಕಿರುಕುಳ ನೀಡಿ ಕೊನೆಗೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವಿಷಯವನ್ನು ಬಸ್ ಚಾಲಕನಿಗೆ ಹಾಗೂ ತನ್ನ ಸುಳ್ಯದ ಸಹಪಾಠಿಗಳಿಗೆ ತಿಳಿಸಿದ್ದಳು. ವಿದ್ಯಾರ್ಥಿನಿ ಚಾಲಕನಿಗೆ ದೂರು ನೀಡಿದ್ದರಿಂದ ಆ ಬಸ್ ನಿಂದ ಇಳಿದು ಇನ್ನೊಂದು ಬಸ್ ನಲ್ಲಿ ಸುಳ್ಯಕ್ಕೆ ಬಂದ. ವಿದ್ಯಾರ್ಥಿನಿಗೆ ಸಮಸ್ಯೆಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸಹಪಾಠಿಗಳು ಹಿಂದೂ ಸಂಘಟನೆಯ ಪ್ರಮುಖರಿಗೆ ತಿಳಿಸಿದ್ದರು. ಕೂಡಲೇ ಸಂಘಟನೆಯಲ್ಲಿ ಗುರುತಿಸಿಕೊಂಡ ವರ್ಷಿತ್, ಮಿಥುನ್ ಮತ್ತಿತರರು ನಿಯಾಜ್ ಬರುತ್ತಿದ್ದ ಬಸ್ಸನ್ನು ಪೈಚಾರಿನಲ್ಲಿ ತಡೆದು ಕಾರಿನಲ್ಲಿ ಕರೆ ತಂದು ಸುಳ್ಯ ಬಸ್ ನಿಲ್ದಾಣದ ಬಳಿ ಕಾಯುತ್ತಿದ್ದ ವಿದ್ಯಾರ್ಥಿಯ ಸಹಪಾಠಿಗಳ ಬಳಿ ಕರೆ ತಂದಿದ್ದರು. ಅಲ್ಲಿ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದಿದೆ ಎನ್ನಲಾಗಿದೆ. ವಿದ್ಯಾರ್ಥಿನಿ ಸುಳ್ಯ ಠಾಣೆಗೆ ತೆರಳಿ ದೂರು ನೀಡಿದಳು. ಪ್ರಕರಣ ಕೋಮ ಬಣ್ಣ ಪಡೆದುಕೊಂಡ ಬಳಿಕ ಮುಸ್ಲಿಂ ಸಂಘಟನೆಯ ಕೆಲವರು ನಿಯಾಜ್ ನನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಸೇರಿಸುವ ಮತ್ತೆ ಅಲ್ಲಿಂದ ಮುಳ್ಳೇರಿಯದ ಆಸ್ಪತ್ರೆಗೆ ಸೇರಿಸುವ ಕೆಲಸ ನಡೆದಿತ್ತು. ನಿಯಾಜ್ ಕೇರಳಕ್ಕೆ ತೆರಳಿದೊಡನೆ ಪ್ರಕರಣ ಗಂಭೀರತೆ ಪಡೆದುಕೊಂಡಿತು. ಅಲ್ಲಿ ತನ್ನ ಮೇಲೆ ಗಂಭೀರ ಹಲ್ಲೆಯಾಗಿದೆ ಎಂದು ದೂರು ನೀಡಿದ್ದರಿಂದ ಸುಳ್ಯ ಠಾಣೆಗೂ ಮಾಹಿತಿ ಬಂದಿದ್ದರಿಂದ ಸಂಘಟನೆಯ ಕೆಲವರು ವಿಚಾರಣೆ ನೆಪದಲ್ಲಿ ಕರೆದು ಕೇಸು ದಾಖಲಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು.ಅಲ್ಲಿ ವರ್ಷಿತ್ ಹಾಗೂ ಮಿಥುನ್ ಎಂಬವರಿಗೆ ನ್ಯಾಯಾಂಗ ಬಂಧನದ ಆದೇಶವಾಗಿತ್ತು.
ವಿದ್ಯಾರ್ಥಿನಿ ತನ್ನ ಮೇಲೆ ನಿಯಾಜ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ದೂರು ನೀಡಿದ್ದರೂ ಕೇಸು ದಾಖಲಿಸದೇ ಧರ್ಮದೇಟು ನೀಡಿದ ಯುವಕರನ್ನು ಮಾತ್ರ ರಾಜಕೀಯ ಕಾರಣಗಳಿಗೋಸ್ಕರ ಬಂಧನ ಮಾಡುತ್ತಿದ್ದಾರೆಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುವ ಬಗ್ಗೆ ಘೋಷಣೆ ಮಾಡಿದ್ದರು. ಅದರಂದೆ ಸೆ.24 ರಂದು ಸುಳ್ಯ ಪ್ರತಿಭಟನೆ ನಡೆದು ಪೋಲೀಸ್ ಪ್ರಕಾಶ್ ವಿರುದ್ಧ ಘೋಷಣೆ ಕೂಗಿ ಹಿಂದೂ ಕಾರ್ಯಕರ್ತರು ವರ್ಗಾವಣೆ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಅತ್ಯಾಚಾರಕ್ಕೆ ಯತ್ನಿಸಿದ ನಿಯಾಜ್ ವಿರುದ್ಧವು ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿಸರು. ವರ್ಗಾವಣೆ ಮಾಡದಿದ್ದರೇ ತಾನೇ ಬಂದು ಸ್ಟೇಷನ್ ನಲ್ಲಿ ಧರಣಿ ಕುಳಿತುಕೊಳ್ಳುತ್ತೇನೆಂದು ಶಾಸಕಿ ಭಾಗೀರಥಿ ಮುರುಳ್ಯ ಕೂಡ ಹೇಳಿದ್ದರು.
ಪ್ರತಿಭಟನೆಯ ವೇಳೆ ಡಿ ವೈ ಎಸ್ ಪಿ ಯವರು ಮಾತನಾಡಿ ನಿಯಾಜ್ ವಿರುದ್ಧವು ಪ್ರಕರಣ ದಾಖಲಾಗಿದೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
ವಿದ್ಯಾರ್ಥಿನಿ ನೀಡಿದ ದೂರಿನಲ್ಲೇನಿದೆ ?
ನಾನು ಸುಳ್ಯದ ಕವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ದಿನಾಂಕ 23.09.2024 ರಂದು ಬೆಳಿಗ್ಗೆ, 4.45 ರ ಸಮಯ ತನ್ನ ಮನೆಯಿಂದ ಹೊರಟು ಸುಳ್ಯಕ್ಕೆ ಬರುವ ಕೆಎಸ್‌ಆರ್ ಟಿಸಿ ಬಸ್ಸನ್ನು ಹತ್ತಿದ್ದು ಬಸ್ಸಿನಲಿ ಟಿಕೆಟು ಪಡೆದು ಸುಳ್ಯಕ್ಕೆ ಹೊರಟಿರುತ್ತೇನೆ. ಬಸ್ಸಿನ ಮಧ್ಯ ಭಾಗದಲ್ಲಿ. ಕುಳಿತುಕೊಂಡಿದ್ದು ಸದ್ರಿ ಸೀಟಿನ ಒಂದು ಬದಿಯಲ್ಲಿ ಆರೋಪಿ ಅಬ್ದುಲ್ ನಿಯಾಜ್ ಕುಳಿತುಕೊಂಡಿರುತ್ತಾನೆ. ನಾನು ಪ್ರಯಾಣಿಸುತ್ತಿದ್ದ ಬಸ್ಸು ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಎಂಬಲ್ಲಿಗೆ ಸಮಯ ಸುಮಾರು 5.50 ರ ಹೊತ್ತಿಗೆ ತಲುಪಿದಾಗ ಆರೋಪಿಯು ತನ್ನ ಬ್ಯಾಗನ್ನು ತೆಗೆದು ದೂಡಿ ತನ್ನೊಂದಿಗೆ ಮಾತನಾಡಲು ಪ್ರಯತ್ನಿಸಿ, ಮೊಬೈಲ್ ನಂಬರನ್ನು ಕೇಳಿದ್ದ. ನಾನು ಮಾತನಾಡದೇ ಇದ್ದಾಗ ಆರೋಪಿ ಆತನ ಕಾಲನ್ನು ತಾಗಿಸಿ ತನ್ನ ಮೈಗೆ ಕೈ ಹಾಕಿ ತಬ್ಬಿ ಹಿಡಿದು ಮಾನಭಂಗಕ್ಕೆ ಪ್ರಯತ್ನಿಸಿರುತ್ತಾನೆ. ಆರೋಪಿಯ ಕಿರುಕುಳ ತಾಳಲಾರದೆ ಬೇರೆ ಸೀಟಿನಲಿ ಕುಳಿತು ಬಸ್ಸು ಸುಬ್ರಹ್ಮಣ್ಯ ಬಸ್ಸು ನಿಲ್ದಾಣಕ್ಕೆ ತಲುಪಿದಾಗ ಬಸ್ಸಿನ ಚಾಲಕನಿಗೆ ದೂರನ್ನು ನೀಡಿದ್ದೇನೆ. ಬಸ್ಸಿನ ಚಾಲಕರು ವಿಚಾರಿಸಿದ ನಂತರ ಆರೋಪಿ ಬಸ್ಸು ನಿಲ್ದಾಣದಿಂದ ತೆರಳಿದ್ದ. ನಾನು ಅದೇ ಬಸ್ಸಿನಲ್ಲಿ ಸುಳ್ಯಕ್ಕೆ ಹೋಗಲು ಕುಳಿತುಕೊಂಡಿದ್ದಾಗ ಆರೋಪಿಯು ಪುನಃ ನಾನು ಕುಳಿತುಕೊಂಡಲ್ಲಿಗೆ ಬಂದು ನೀನು ನನ್ನ ವಿರುದ್ಧ ದೂರು ನೀಡಿದರೆ ನಿನಗೆ ಏನು ಮಾಡಬೇಕೆಂದು ನನಗೆ ಗೊತ್ತಿದೆ, ನನ್ನಲ್ಲಿ ಜನ ಇದ್ದಾರೆ, ನಿನಗೆ ನಾನು ಸರಿಯಾಗಿ ಬುದ್ಧಿ ಕಲಿಸುತ್ತೇನೆ ಎಂದೆಲ್ಲಾ ಹೇಳುತ್ತಾ, ಜೀವ ಬೆದರಿಕೆಯೊಡ್ಡಿ, ಬಸ್ಸಿನಿಂದ ಇಳಿದು ಹೋಗಿರುತ್ತಾನೆ. ತನ್ನ ಮೈ ಕೈಯನ್ನು ಮುಟ್ಟಿ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿ ಮಾನಭಂಗಕ್ಕೆ ಪ್ರಯತ್ನಿಸಿ ಜೀವ ಬೆದರಿಕೆಯೊಡ್ಡಿದ ಆರೋಪಿಯ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ವಿದ್ಯಾರ್ಥಿನಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಹಲ್ಲೆಗೊಳಗಾದ ಅಬ್ದುಲ್ ನಿಯಾಝ್ ನಿಂದ ನಾಲ್ವರು ಯುವಕರು ಸಹಿತ ಇತರರ ಮೇಲೆ ದೂರು – ಹಲ್ಲೆ , ಕೊಲೆಯತ್ನ ಆರೋಪದಡಿ ದೂರು ದಾಖಲು
ಅಬ್ದುಲ್ ನಿಯಾಜ್ ನ ದೂರಿನಲ್ಲೇನಿದೆ ?
ಸುಳ್ಯ: ದೂರುದಾರನಾದ ಅಬ್ದುಲ್ ನಿಯಾಝ್ ಎಂಬವರು ದಿನಾಂಕ 22.09.2024 ರಂದು ಬೆಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುವ ಕೆಎಸ್ ಆರ್‌ಟಿಸಿ ಬಸಿನಲಿ.. ಹೊರಟಿದ್ದು, ಈ ದಿನ ದಿನಾಂಕ 23.09.2024 ರಂದು ಬೆಳಿಗ್ಗೆ,, 05.00 ಗಂಟೆಗೆ ಬಿಸಿಲಿ ಫಾಟ್ ನಲ್ಲಿ ವಿದ್ಯಾರ್ಥಿಯೊಬ್ಬಳು ಬಸಿಗೆ ಹತ್ತಿ ಪಿರ್ಯಾದಿದಾರರ ಬಳಿ ಖಾಲಿ ಇದ್ದ ಸೀಟಿನಲ್ಲಿ ಕುಳಿತುಕೊಂಡಿದ್ದು ಬಳಿಕ ಅವರು ಪರಸ್ಪರ ಪರಿಚಯ ಮಾಡಿಕೊಂಡಿದ್ದು ಸ್ವಲ್ಪ ಸಮಯದ ಬಳಿಕ ಹುಡುಗಿಯು ದೂರುದಾರರಲ್ಲಿ ಕಿಟಕಿಯ ಬದಿಯ ಸೀಟನ್ನು ಬೇಕೆಂದು ಕೇಳಿದಾಗ ದೂರುದಾರ ಬಿಟ್ಟು ಕೊಟ್ಟು ವಿದ್ಯಾರ್ಥಿನಿ ಕುಳಿತ್ತಿದ್ದ ಸೀಟಿನಲಿ ಕುಳಿತುಕೊಂಡಿದ್ದು ಬೆಳಿಗ್ಗೆ, ಸಮಯ ಸುಮಾರು 06.00 ಗಂಟೆಗೆ ಬಸ್ಸು ಸುಬ್ರಹ್ಮಣ್ಯ ಬಳಿ ತಲುಪಿದಾಗ ದೂರುದಾರ ನಿದ್ರೆಯಲ್ಲಿ ಆರಿಯದೇ ವಿದ್ಯಾರ್ಥಿನಿಯ ಭುಜದ ಮೇಲೆ ವಾಲಿದ್ದು ಆ ಸಮಯ ವಿದ್ಯಾರ್ಥಿನಿ ಬೊಬ್ಬೆ ಹಾಕಿ ಫೋಟೊ ತೆಗೆದು ಬಸ್ಸಿನ ಕಂಡಕ್ಷರ್ ಗೆ ಈ ವಿಚಾರವನ್ನು ತಿಳಿಸಿದಳು ನಂತರ ಬೆಳಿಗ್ಗೆ ಸಮಯ ಸುಮಾರು 09.00 ಗಂಟೆಗೆ ಜಾಲ್ಲೂರು ಗ್ರಾಮದ ಪ್ರಯಾಣಿಕರ ಬಸ್ಸು ತಂಗುದಾಣದ ಬಳಿ ತಲುಪಿ ಬಸ್ಸಿನಿಂದ ಇಳಿದಾಗ ರಸ್ತೆ ಬದಿಯಲ್ಲಿ ನಿಂತಿದ್ದ ಸ್ವಿಫ್ಟ್ ಕಾರಿನೊಳಗೆ 5 ಜನ ಎಳೆದು ಕೂರಿಸಿಕೊಂಡು “ನಡಿ ನೀನು ಹಳೆ ಬಸ್ ನಿಲ್ದಾಣದ ಬಳಿಗೆ ಹೋಗೋಣ ಎಂದು ಹೇಳುತ್ತಾ ಹಳೆ ಬಸ್ ನಿಲ್ದಾಣದ ಬಳಿಗೆ ಕರೆದುಕೊಂಡು ಬಂದು ಮನಬಂದಂತೆ ಕೈಗಳಿಂದ ಹಲೈ ಮಾಡಿದರು ಬಳಿ ಸುಕ್ತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಗೆ ಅದೇ ಕಾರಿನಲಿ ಕರೆದುಕೊಂಡು ಬಂದು ವಾಹನಗಳು ನಿಲ್ಲಿಸುವ ಜಾಗದಲ್ಲಿ ಕಾರನ್ನು ನಿಲಿಸಿ ಬಸಿನಲ್ಲಿ ಪರಿಚಯವಾಗಿದ್ದ ಹುಡುಗಿಯನ್ನು ಕಾರಿನ ಬಳಿಗೆ ಕರೆದುಕೊಂಡು ಬಂದಿದ್ದು ಆ ಹುಡುಗಿ ಇದೇ ಹುಡುಗನು ನನ್ನ ಜೊತೆ ಬಸಿನಲ್ಲಿ ಪ್ರಯಾಣಿಸಿದವನು ಎಂದು ಹೇಳಿ ಅಲ್ಲಿಂದ ಹೋಗಿದ್ದು ಬಳಿಕ ಐದು ಜನರು ಪಿರ್ಯಾದಿದಾರರನ್ನು ಕೆಳಗಿಳಿಸಿ ಕೊಲ್ಲುವ ಉದ್ದೇಶದಿಂದ ಮನಬಂದಂತೆ ಕೈಗಳಿಂದ ಹೊಡೆದುದಲ್ಲದೇ ನೆಲಕ್ಕೆ ದೂಡಿ ಈತನನ್ನು ಕೊಂದೆ ಬಿಡೋಣ ಎಂದು ಪರಸ್ಪರ ಹೇಳಿಕೊಳ್ಳುತ್ತಾ ಪಿರ್ಯಾದಿದಾರರ ತಲೆಗೆ ಹೊಟ್ಟೆಗೆ ಎದೆಗೆ ಹಾಗೂ ಕಿಬೊಟ್ಟೆಗೆ ಕಾಲುಗಳಿಂದ ತುಳಿದಿದ್ದು ಬಳಿಕ ಜನ ಸೇರುವುದನ್ನು ಕಂಡು ಪಿರ್ಯಾದಿದಾರರನ್ನು ಉದ್ದೇಶಿಸಿ ಇನ್ನು ಮುಂದಕ್ಕೆ ಹಿಂದೂ ಹುಡುಗಿಯರ ಸಹವಾಸಕ್ಕೆ ಬಂದರೆ ನಿನ್ನನ್ನು ಕೊಂದು ಬಿಡುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಲಾಗಿದ್ದು ನಂತರ ಅಲ್ಲಿ ಸೇರಿದ ಜನರು ದೂರುದಾರನನ್ನು ಉಪಚರಿಸಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆ ಬಗ್ಗೆ ಕಾಸರಗೋಡು ಜಿಲೆಯು ಮುಳ್ಳೇರಿಯಾ ಕೋ ಆಪರೇಟಿವ್ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದೆನೆ ಆರೋಪಿತರ ಪೈಕಿ ಅವರುಗಳು ಪರಸ್ಪರ ಮಾತನಾಡುತ್ತಿರುವ ಸಮಯ ಹೆಸರು ತಿಳಿಯಲಾಗಿ ವರ್ಷಿತ್ , ಮಿಥುನ್, ಹರ್ಷಿತ್ , ಸುಶ್ಮಿತ್ ಎಂಬುದಾಗಿ ತಿಳಿದಿದ್ದು, ಮೊದಲು ಹಳಿ ನಿಲ್ದಾಣದ ಬಳಿ ಹಲ್ಲೆ ಮಾಡಿದ ಬಳಿಕ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇತರ ಹತ್ತು ಜನರು ಹಲ್ಲೆ ಮಾಡಿರುವುದಾಗಿ ಪೋಲಿಸರಿಗೆ ದೂರಿನಲ್ಲಿ ತಿಳಿಸಿದ್ದಾನೆ.
ಅದರಂತೆ ಭಾರತೀಯ ದಂಡ ಸಂಹಿತೆ BNS), 2023 (U/s-189(2), 191(2),127(2),137(2),115(2),109,351(2), 190) ರಂತೆ ಪ್ರಕರಣ ದಾಖಲಾಗಿದ್ದು ಆರೋಪಿತರ ಪೈಕಿ ಇಬ್ಬರನ್ನು ಈಗಾಗಲೇ ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದ್ದು ಉಳಿದ ಆರೋಪಿಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.