ಸುಳ್ಯದ ಪೈಚಾರಿನಲ್ಲಿ ಅನ್ಯ ಕೋಮಿನ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಹಲವರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಿಂದು ಪರ ಸಂಘಟನೆಗಳ ಕಾರ್ಯಕರ್ತರಾದ ವರ್ಷಿತ್ , ಮಿಥುನ್, ಕಿರಣ್ ಸೇರಿದಂತೆ ಕೆಲ ಯುವಕರನ್ನು ಠಾಣೆಗೆ ಬರಹೇಳಿ ಪೋಲಿಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಹಲ್ಲೆಗೊಳಗಾದ ವ್ಯಕ್ತಿ ಮತ್ತು ಕಿರುಕುಳಕ್ಕೆ ತುತ್ತಾದ ಯುವತಿ ಯಾವುದೇ ದೂರು ನೀಡಿಲ್ಲವೆನ್ನಲಾಗಿದ್ದು, ಪೋಲಿಸ್ ಇಲಾಖೆಯ ಉನ್ನತಾಧಿಕಾರಿಗಳು ಸುಳ್ಯಕ್ಕೆ ಆಗಮಿಸಿ ಪ್ರಕಣದ ಬಗ್ಗೆ ನಿಗವಹಿಸಿದ್ದಾರೆಂದು ತಿಳಿದುಬಂದಿದೆ.