ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ನಡೆಯಿತು. ಸಭೆಯ ಅದ್ಯಕ್ಢತೆಯನ್ನು ಜಿಲ್ಲಾ ಅಧ್ಯಕ್ಷರಾದ ಡಾ. ಶ್ರೀನಾಥ ಎಮ್ ಪಿ. ಇವರು ವಹಿಸಿ ಸಭೆಯನ್ನು ನಡೆಸಿಕೊಟ್ಟರು. ಸಭೆಯಲ್ಲಿ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಾಗು ಮಂಡ್ಯದಲ್ಲಿ ನಡೆಯುವ ರಾಜ್ಯ ಸಾಹಿತ್ಯ ಸಮ್ಮೇಳನದ ಬಗ್ಗೆ ದಕ ಜಿಲ್ಲೆಗೆ ಆಗಮಿಸುವ ರಥಯಾತ್ರೆಗಳನ್ನು ಎಲ್ಲಾ ತಾಲೂಕುಗಳಲ್ಲಿ ಸ್ವಾಗತಿಸುವ ಬಗ್ಗೆ ಚರ್ಚೆ ನಡೆಯಿತು. ಹಾಗು ಎಲಾ ತಾಲುಕು ಪದಾಧಿಕಾರಿಗಳು ಈ ಸಂಭ್ರಮದಲ್ಲಿ ಭಾಗವಹಿಸಲು ಕರೆ ಇತ್ತರು. ಕನ್ನಡ ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜೇಶ್ ಇವರು ಕಾರ್ಯಕ್ರಮದ ಬಗ್ಗೆ ವಿವರ ನೀಡಿ ರಥ ಆಗಮನದ ವೇಳೆ ಸಹಕರಿಸಲು ಮನವಿ ಮಾಡಿದರು. ಇದರ ಜೊತೆಗೆ ತಾಲೂಕು ಸಾಹಿತ್ಯ ಸಮ್ಮೇಳನ, ದತ್ತಿ ನಿಧಿ ಕಾರ್ಯಕ್ರಮ ಗಳು ಹಾಗು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಕೇಂದ್ರ ಸಾಹಿತ್ಯ ಪರಿಷತ್ತು ಸದಸ್ಯ ಡಾ. ಮಾಧವ ಎಮ್. ಕೆ, ಮಂಗಳೂರು ತಾಲೂಕು ಅಧ್ಯಕ್ಷ ಶ್ರೀ ಮಂಜುನಾಥ್ ರೇವಣ್ಕರ್, ಬೆಳ್ಥಂಗಡಿ ಅಧ್ಯಕ್ಷ ಶ್ರೀ ಯದುಪತಿ ಗೌಡ, ಪುತ್ತೂರು ತಾಲೂಕು ಅದ್ಯಕ್ಷ ಉಮೇಶ್ ನಾಯಕ್, ಕಡಬ ತಾಲೂಕು ಅದ್ಯಕ್ಷ ಶೇಷಪ್ಪ ರೈ ಜಿಲ್ಲಾ ಕೋಶಾಧಿಕಾರಿ ಶ್ರೀ ಐತಪ್ಪ ನಾಯ್ಕ್, ಸದಸ್ಯರಾದ ಸನತ್ ಕುಮಾರ್ ಹೆಗ್ಡೆ, ಶ್ರೀಮತಿ ತೇಜಸ್ವಿ ಅಂಬೆಕಲ್ಲು, ಪೂವಪ್ಪ ನೇರಳಕಟ್ಟೆ, ಶ್ರೀ ರಾಮಚಂದ್ರ ಪಳ್ಳತಡ್ಕ, ಶ್ರೀ ದುರ್ಗಾಪ್ರಸಾದ್ ರೈ ಕುಂಬ್ರ, ಶ್ರೀ ಖಾಲಿದ್ ಉಜಿರೆ, ಶ್ರೀ ಹರೀಶ್ ಬಂಟ್ವಾಳ ಇವರು ಉಪಸ್ತಿತರಿದ್ದರು. ಗೌರವ ಕಾರ್ಯದರ್ಶಿ ಶ್ರೀಮತಿ ರಾಜೇಶ್ವರಿ ವರದಿ ಮಂಡಿಸಿದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಅಧ್ಯಕ್ಢರಾದ ಚಂದ್ರಶೇಖರ ಪೇರಾಲು ಎಲ್ಲರನ್ನು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ವಿನಯ ಆಚಾರ್ಯ ವಂದಿಸಿದರು. ನಂತರ ತುಳುನಾಡಿನ ಸಾಂಪ್ರದಾಯಿಕ ಭೋಜನ ವ್ಯವಸ್ಥೆಯನ್ನು ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಲಾಯಿತು.
- Thursday
- November 21st, 2024