Ad Widget

ಸುಳ್ಯ : ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಸನ್ಮಾನ

2023-24 ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 100 ಪ್ರತಿಶತ ಫಲಿತಾಂಶ ಪಡೆದ ಸುಳ್ಯ ರೋಟರಿ ಸಂಸ್ಥೆಯ ಪ್ರಾಂಶುಪಾಲರನ್ನು ಮತ್ತು ಉಪನ್ಯಾಸಕರನ್ನು ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ (ರಿ) ಮಂಗಳೂರು ವತಿಯಿಂದ ಸೆಪ್ಟೆಂಬರ 22 ರಂದು ಆಳ್ವಾಸ್ ಪ.ಪೂ,ಕಾಲೇಜು ಮೂಡುಬಿದಿರೆ ಇಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಅಭಿನಂದಿಸಿ, ಸನ್ಮಾನಿಸಲಾಯಿತು.

ಉಪನ್ಯಾಸಕ ವೊಮನ್ ದಾಸ್ ಅರ್ ಎ., ಗಣಿತಶಾಸ್ತ್ರ ಉಪನ್ಯಾಸಕಿ ಸಂಧ್ಯಾ ಡಿ ಎಂ., ಜೀವಶಾಸ್ತ್ರ ಉಪನ್ಯಾಸಕಿ ಕೀರ್ತಿ ಕೆ, ಗಣಕಶಾಸ್ತ್ರ ಉಪನ್ಯಾಸಕ ಹರ್ಷಿತ್ ಜಿ ಜೆ., ಅರ್ಥಶಾಸ್ತ್ರ ಉಪನ್ಯಾಸಕಿ ಜ್ಯೋತ್ಸ್ನಾ ಕೆ., ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಸಪ್ನ ಪಿ., ಸಂಖ್ಯಾಶಾಸ್ತ್ರ ಉಪನ್ಯಾಸಕಿ ಮೌಸಮಿ ಎಂ ಎಸ್., ಇಂಗ್ಲೀಷ್ ಉಪನ್ಯಾಸಕಿ ದೀಕ್ಷಿತಾ ಎ., ಕನ್ನಡ ಉಪನ್ಯಾಸಕಿ ಜಯಮಾಲ ಕೆ ವಿ., ಹಿಂದಿ ಉಪನ್ಯಾಸಕಿ ಸರಿತಾ ಕೆ. ಸನ್ಮಾನ ಸ್ವೀಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!