ಜೆಸಿಐ ಸಪ್ತಾಹ 2024ನ್ನು ಈ ವರ್ಷ ಡೈಮಂಡ್ jc ವೀಕ್ ಆಗಿ ಒಂದು ವಾರಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಜೇಸಿಐ ಸುಳ್ಯ ಪಯಸ್ವಿನಿ(ರಿ) ಆಚರಿಸಿದ್ದು, ಸೆಪ್ಟೆಂಬರ್ 15ರಂದು ಸುಳ್ಯದ ಜ್ಯೋತಿ ವೃತ್ತದ ಬಳಿ ಇರುವ ಅಮೃತ ಭವನ ಸಭಾಂಗಣದಲ್ಲಿ ಜೇಸಿ ಸಪ್ತಾಹ ಸಮಾರೋಪ ಸಮಾರಂಭ, ಕಲಾಶ್ರೀ, ಪಯಸ್ವಿನಿಶ್ರೀ, ಕಮಲಪತ್ರ ಪ್ರಶಸ್ತಿ ಪ್ರದಾನ ಹಾಗೂ ಜೇಸಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜೇಸಿಐ ಪಯಸ್ವಿನಿಯ ಪೂರ್ವಾದ್ಯಕ್ಷರೂ, ರಾಷ್ಟ್ರೀಯ ತರಬೇತುದಾರರೂ ಆಗಿರುವ ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜು ಸವಣೂರು ಇಲ್ಲಿನ ಪ್ರಾಂಶುಪಾಲ ರಾಗಿರುವ ಜೇಸಿ ಹೆಚ್.ಜಿ.ಎಫ್. ಸೀತಾರಾಮ ಕೇವಳ ಅಭಿನಂದನ ಭಾಷಣ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ. ಗುರುಪ್ರಸಾದ್ ನಾಯಕ್ ಅಧ್ಯಕ್ಷರು ಜೆಸಿಐ ಸುಳ್ಯ ಪಯಸ್ವಿನಿ (ರಿ) ಸುಳ್ಯ ಇವರು ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಪೂರ್ವಾದ್ಯಕ್ಷರೂ, ಪಯಸ್ವಿನಿ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಅಧ್ಯಕ್ಷರಾಗಿರುವ ಜೇಸಿ ಹೆಚ್.ಜಿ.ಎಫ್. ಜಯಪ್ರಕಾಶ್ ಕೆ., ಹಾಗೂ ಜೇಸಿಐ ಪಯಸ್ವಿನಿಯ ಪೂರ್ವಾದ್ಯಕ್ಷರೂ ಜೇಸಿ ಸಿನೀಯರ್ ಛೆಂಬರ್ ಇಂಟರ್ನ್ಯಾಷನಲ್ ಸುಳ್ಯ ಪಯಸ್ವಿನಿ ಲೀಜನ್ ನ ಅಧ್ಯಕ್ಷ ರಾಗಿರುವ ಜೇಸಿ ಹೆಚ್.ಜಿ.ಎಫ್ ಚಂದ್ರಶೇಖರ್ ನಂಜೆ ಭಾಗವಹಿಸಿ ಶುಭ ಹಾರೈಸಿದರು.
ಜೇಸಿಐ ಸುಳ್ಯ ಪಯಸ್ವಿನಿಯ 2024ರ ಕಲಾಶ್ರೀ ಪ್ರಶಸ್ತಿಯನ್ನು ಖ್ಯಾತ ಪೆನ್ಸಿಲ್ ಆರ್ಟ್ ಕಲಾ ಪ್ರತಿಭೆ ಸುಳ್ಯ ಬೆಟ್ಟಂಪ್ಪಾಡಿಯ ಕು. ಪೂಜಾ ಬೋರ್ಕರ್ ರವರಿಗೆ ಪಯಸ್ವಿನಿ ಶ್ರೀ ಪ್ರಶಸ್ತಿಯನ್ನು ಸುಳ್ಯದ ಹಳೆಗೇಟಿನಲ್ಲಿರುವ ಡಿ.ಆರ್ ಗಾರ್ಮೆಂಟ್ಸ್ ನ ಮಾಲಕರಾದ ಶ್ರೀ. ರಾಮಚಂದ್ರ ಯಂ ಅವರಿಗೆ ಹಾಗೂ
ಕಮಲ ಸಹರನ್ ಅವರ ಸವಿನೆನಪಿನಲ್ಲಿ ಕೊಡಮಾಡುವ ಕಮಲಪತ್ರ ಪುರಸ್ಕಾರವನ್ನು ಜೇಸಿಐ ಪಯಸ್ವಿನಿಯ ಪೂರ್ವಾದ್ಯಕ್ಷರಾಗಿರುವ ಜೇಸಿ ಹೆಚ್. ಜಿ.ಎಫ್ ಮಂಜುನಾಥ್ ಹೊಳ್ಳ ರಿಗೆ ಪ್ರಧಾನ ಮಾಡಲಾಯಿತು. ಸನ್ಮಾನ ಪತ್ರ ವನ್ನು ಜೇಸಿಐ ಸುಳ್ಯ ಪಯಸ್ವಿನಿಯ ಪದಾಧಿಕಾರಿಗಳಾದ ಜೇಸಿ. ಶೋಭಾ ಅಶೋಕ್ ಚೂಂತಾರು, ಜೇಸಿ. ತಾರಾ ಚೂಂತಾರು, ಜೇಸಿ. ಶಶ್ಮಿ ಭಟ್ ವಾಚಿಸಿದರು.
ವೇದಿಕೆಯಲ್ಲಿ ಸಪ್ತಾಹ ನಿರ್ದೇಶಕರಾದ ಸುರೇಶ್ ಕಾಮತ್,
ಜೇಸಿಐ ಪಯಸ್ವಿನಿಯ ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ಹೆಚ್.ಜಿ.ಎಫ್ ನವೀನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಜೇಸಿಐಯ ಪೂರ್ವಾದ್ಯಕ್ಷರುಗಳು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದರು.
ಸಭಾ ಕಾರ್ಯಕ್ರಮದಲ್ಲಿ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಫರ್ಧೆ ಹಾಗೂ ಚದುರಂಗ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನಿತರ ಪಟ್ಟಿಯನ್ನು ಜೇಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ಜೇಸಿ ಅಕ್ಷತ್ ಕುಮಾರ್ ವಾಚಿಸಿದರು.
ಜೇಸಿಐ ಸುಳ್ಯ ಪಯಸ್ವಿನಿಯ ಮಹಿಳಾ ಅಧ್ಯಕ್ಷೆ ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಜೊತೆ ಕಾರ್ಯದರ್ಶಿ ಪ್ರಸನ್ನ ಎಂ. ಆರ್. ಜೇಸಿವಾಣಿ ವಾಚಿಸಿ, ಜೇಸಿ. ಸುರೇಶ್ ಕಾಮತ್ ಸಪ್ತಾಹ ವರದಿ ವಾಚಿಸಿ, ವಂದಿಸಿದರು.