ಆಲೆಟ್ಟಿ ಗ್ರಾಮದ ಕೋಲ್ಚಾರು ಸ. ಉ. ಹಿ. ಪ್ರಾ. ಶಾಲೆಗೆ ಹೆಚ್.ಜಿ. ಗೋವಿಂದೇಗೌಡ ರವರ ಹೆಸರಿನಲ್ಲಿ ಕೊಡ ಮಾಡಲ್ಪಡುವ ರಾಜ್ಯಮಟ್ಟದ ಅತ್ಯುತ್ತಮ ಕನ್ನಡ ಶಾಲೆ ಎಂಬ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ನಗರ ಮಹಿಳಾ ಘಟಕದ ಸದಸ್ಯೆಯಾಗಿರುವ ಶಾಲಾ ಸಹ ಶಿಕ್ಷಕಿ ಜಲಜಾಕ್ಷಿ ರವರಿಗೆ ಸುಳ್ಯ ನಗರ ಮಹಿಳಾ ಗೌಡ ಘಟಕದಿಂದ ಅವರ ನಿವಾಸಕ್ಕೆ ಸೆ. 16 ರಂದು ತೆರಳಿ ಶಾಲು ಹೊದಿಸಿ, ಫಲ ಪುಷ್ಪ ನೀಡಿ ಸನ್ಮಾನಿಸಲಾಯಿತು.
ಘಟಕದ ಪೂರ್ವಾಧ್ಯಕ್ಷೆ ಶೀಲಾ ಕುರುಂಜಿ ಸನ್ಮಾನಿತರ ಕುರಿತು ಪರಿಚಯಿಸಿದರು.
ಕರ್ನಾಟಕ ರಾಜ್ಯ ಅರೆ ಭಾಷೆ ಸಾಹಿತ್ಯ & ಸಂಸ್ಕೃತಿ ಅಕಾಡೆಮಿ ಯ ಸದಸ್ಯ ಎನ್ .ಎ. ಜ್ಞಾನೇಶ್ ಮುಖ್ಯ ಅತಿಥಿಯಾಗಿ ಆಗಮಿಸಿ, ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಜಲಜಾಕ್ಷಿ ಯವರು ಪ್ರಶಸ್ತಿ ಲಭಿಸಲು ಶಾಲೆಗಾಗಿ ಈ ಹಿಂದೆ ಪಟ್ಟ ಶ್ರಮದ ಕುರಿತು ಮಾತನಾಡಿದರು.
ಘಟಕದ ಅಧ್ಯಕ್ಷೆ ಹರ್ಷ ಕರ್ಣಾಕರ ಸ್ವಾಗತಿಸಿ, ಕರ್ನಾಟಕ ರಾಜ್ಯ ಅರೆ ಭಾಷೆ ಸಾಹಿತ್ಯ & ಸಂಸ್ಕೃತಿ ಅಕಾಡೆಮಿಯ ಸದಸ್ಯೆ ಲತಾಪ್ರಸಾದ್ ಕುದ್ಪಾಜೆ ಕಾರ್ಯಕ್ರಮ ನಿರ್ವಹಿಸಿದರು. ಸೈಂಟ್ ಜೋಸೆಫ್ ಶಾಲಾ ಶಿಕ್ಷಕಿ ಶೋಭಾ ಕಿರ್ಲಾಯ ವಂದಿಸಿದರು.
ಈ ಸಂದರ್ಭದಲ್ಲಿ ಜಲಜಾಕ್ಷಿಯವರ ಪತಿ ಚೆನ್ನಪ್ಪ ಕುಕ್ಕುಜೆ, ಪುತ್ರ ಶ್ರೇಯಸ್ ಸಿ ಕುಕ್ಕುಜೆ ಹಾಗೂ ಸುಳ್ಯ ನಗರ ಗೌಡ ಮಹಿಳಾ ಘಟಕದ ಸದಸ್ಯರಾದ ಉಷಾ ರಮಾನಂದ ಕಾನತ್ತಿಲ, ಮೀನಾಕ್ಷಿ ಸುಂದರ ರಾಮಕಜೆ, ಹೇಮಲತಾ ದೇಂಗೋಡಿ, ಕೃಪಾ ಚಂದ್ರಶೇಖರ್ ,ಪೂಜಾಶ್ರೀ ವಿತೇಶ್ ಕೋಡಿ, ಗೀತಾ ಗಣಪತಿ ಬೀರಮಂಗಲ , ಕುಸುಮ ಜನಾರ್ಧನ ಕೊಳಂಜಿಕೋಡಿ ಉಪಸ್ಥಿತರಿದ್ದರು.