
ಕನ್ನಡ ಪೆರಾಜೆ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ರಚನೆಯು ಸೆ.15 ರಂದು ಸಂಘದ ಅಧ್ಯಕ್ಷರಾದ ಉನೈಸ್ ಪೆರಾಜೆ ಇವರ ನೇತೃತ್ವದಲ್ಲಿ ನಡೆಯಿತು. ವೇದಿಕೆಯಲ್ಲಿ ಮಾಜಿ ಪಂಚಾಯತ್ ಸದಸ್ಯರಾದ ಅಬೂಬಕರ್.ಪಿ.ಎನ್, ಮಹಮ್ಮದ್ ಪೆರಾಜೆ ಉಪಸ್ಥಿತರಿದ್ದರು.
ನೂತನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉನೈಸ್ ಪೆರಾಜೆ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ರವಿಚಂದ್ರ.ಕೆ.ಜೆ, ಕೋಶಾಧಿಕಾರಿಯಾಗಿ ಅಶೋಕ್ ಪೀಚೆಮನೆ, ಗೌರವಾಧ್ಯಕ್ಷರಾಗಿ ಅಬೂಬಕರ್.ಪಿ.ಎನ್, ಉಪಾಧ್ಯಕ್ಷರುಗಳಾಗಿ ಕಿರಣ್ ಬಿಳಿಯಾರು, ನಾಸಿರ್.ಎನ್.ಎ, ಶಾಹಿನ್.ಪಿ.ಎಂ, ಜೊತೆ ಕಾರ್ಯದರ್ಶಿಗಳಾಗಿ ಶಿಹಾಬ್ ಪೆರಾಜೆ, ತಮೀದ್ ಕಲ್ಟರ್ಪೆ, ಕ್ರೀಡಾ ಸಂಚಾಲಕರಾಗಿ ಅರ್ಷಾಕ್.ಕೆ.ಎ, ಶಹನ್ ಪೆರಾಜೆ, ಖಲಂದರ್.ಪಿ.ಎಂ, ಸಾಮಾಜಿಕ ಜಾಲತಾಣದ ಪ್ರಮುಖರಾಗಿ ಶಿಹಾಬ್ ದಾಸರಹಿತ್ಲು, ಸಲಹಾ ಸಮಿತಿ ಸದಸ್ಯರಾಗಿ ಮಹಮ್ಮದ್ ಪೆರಾಜೆ, ಹಮೀದ್.ಪಿ.ಎಂ, ಅಶ್ರಫ್ ಪೆರಾಜೆ, ಲತೀಫ್ ಪೆರಾಜೆ, ಸಿದ್ಧಿಕ್.ಪಿ.ಎನ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಶಾಲೆಯ ಪ್ರಮುಖ ಬೇಡಿಕೆಗಳಾದ ಶುದ್ಧ ಕುಡಿಯುವ ನೀರಿನ ಘಟಕ, ಸಿಸಿ ಕ್ಯಾಮೆರಾ ಅಳವಡಿಕೆ, ಸ್ಮಾರ್ಟ್ ಕ್ಲಾಸ್ ಮಾಡುವ ಬಗ್ಗೆ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಶೋಕ್ ಪೀಚೆಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
