Ad Widget

ಟಾಟಾ ಮೋಟರ್ಸ್ ಆಟೋ ಮ್ಯಾಟ್ರಿಕ್ ಸಂಸ್ಥೆಗೆ ದಂಡ ವಿಧಿಸಿದ ಮಂಗಳೂರಿನ ಜಿಲ್ಲಾ ಗ್ರಾಹಕರ ನ್ಯಾಯಾಲಯ

ಮಂಗಳೂರು ಬಿಜಯ್‌ನ ಟಾಟಾ ಮೋಟರ್ಸ್ ಆಟೋಮ್ಯಾಟ್ರಿಕ್ಸ್ ಹಾಗೂ ಪುತ್ತೂರು ಬೊಳುವಾರಿನ ಟಾಟಾ ಮೋಟರ್ಸ್ ಆಟೋಮ್ಯಾಟಿಕ್ಸ್ ಕಾರ್ ಸಂಸ್ಥೆಯಿಂದ ಪುತ್ತೂರಿನ ಪಶು ವೈದ್ಯರಾಗಿರುವ ಡಾ|| ಉಷಾ ರವರು ಕಾರನ್ನು ಖರೀದಿಸಿದ್ದರು ಸದರಿ ಕಾರಿನ ಗ್ಯಾರೆಂಟಿ ಅವಧಿಯ ಒಳಗೆ ಕಾರಿನ ಬ್ಯಟರಿಯಲ್ಲಿ ಸಮಸ್ಯೆ ಉದ್ಭವವಾಗಿದ್ದು, ಸದರಿ ವಿಚಾರವನ್ನು ಟಾಟಾ ಮೋಟರ್ಸ್ ಪರವರ ಗಮನಕ್ಕೆ ತಂದರೂ ಸಮಂಜಸವಾಗಿ ಸ್ಪಂದಿಸಿರುವುದಿಲ್ಲ ಮತ್ತು ಮೊದಲು ಪ್ರಾರಂಭವಾದ ಬ್ಯಾಟರಿ ಸಮಸ್ಯೆಯಿಂದ ಮೈಲೇಜ್, ಪಿಕಪ್ ಹಾಗೂ ಇತರ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಸದರಿ ಸಮಸ್ಯೆಗೆ ಕೂಡ ಟಾಟಾ ಮೋಟರ್ಸ್ ಆಟೋಮ್ಯಾಟ್ರಿಕ್ಸ್ ರವರು ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ ಮತ್ತು ಕಾರಿನ ಸಮಸ್ಯೆಯನ್ನು ಬಗೆಹರಿಸಿಕೊಡದ ಕಾರಣ ಡಾ॥ ಉಷಾ ರವರು ಮೈಸೂರು ನ್ಯಾಯವಾದಿ ವಿಶ್ವನಾಥ್ ದೇವಶ್ಯ ರವರ ಮೂಲಕ ಟಾಟಾ ಮೋಟರ್ಸ್ ಆಟೋಮ್ಯಾಟ್ರಿಕ್ಸ್ ರವರ ಮೇಲೆ ಮಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಮಾನ್ಯ ನ್ಯಾಯಾಲಯವು ಎದುರುದಾರರು ಟಾಟಾ ಮೋಟರ್ಸ್ ಆಟೋಮ್ಯಾಟ್ರಿಕ್ಸ್ ರವರು ಅರ್ಜಿದಾರರಾದ ಡಾ|| ಉಷಾ ರವರಿಗೆ ಪರಿಹಾರ ನೀಡುವಂತೆ ಆದೇಶ ಮಾಡಿರುತ್ತದೆ

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading