(ಚಿತ್ರ: ಪ್ರಕೃತಿ ಗುತ್ತಿಗಾರು) ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆಯು ಇಂದು ಸಂಘದ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು. ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷ ರಾದ ವೆಂಕಟ್ ದಂಬೆಕೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ. ವರದಿ ಮಂಡಿಸಿದರು.
ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮಾತನಾಡಿ 2023-24ನೇ ಸಾಲಿನಲ್ಲಿ 1 ಕೋಟಿಯ 64 ಲಕ್ಷದ 18 ಸಾವಿರ ನಿವ್ವಳ ಲಾಭ ಬಂದಿದೆ. ಸದಸ್ಯರಿಗೆ ಶೇ8.5 ಡಿವಿಡೆಂಡ್ ವಿತರಿಸಲಾಗುವುದು ಎಂದು ಘೋಷಿಸಿದರು. .
ಈ ಸಂದರ್ಭದಲ್ಲಿ ಸಹಕಾರಿ ಸಂಘದಲ್ಲಿ ಉಪಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಒಟ್ಟು 41 ವರ್ಷದಿಂದ ಸೇವೆ ಸಲ್ಲಿಸಿ ನಿವೃತ್ತ ಹೊಂದಿರುವ ಕುಮಾರ್ ಸಿ.ಎಚ್. ದಂಪತಿಗಳನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.
ಹಾಗೂ ಸಂಸ್ಥೆಯಲ್ಲಿ ಅತಿ ಹೆಚ್ಚು ಅಡಿಕೆ ಮಾರಾಟ ಮಾಡಿದ ಕೇಶವ ಭಟ್ ಮುಳಿಯ, ರತ್ನಾ ಎಂ.ಡಿ. ಮುಂಡೋಡಿ, ಮುಳಿಯ ತಿಮ್ಮಪ್ಪಯ್ಯ, ಅತೀ ಹೆಚ್ಚು ಕೊಕ್ಕೊ ಮಾರಾಟ ಮಾಡಿದ ಕಮಲಾಕ್ಷ ಸಂಪ್ಯಾಡಿ, ತಿರುಮಲೇಶ್ವರ ಭಟ್ ಚನಿಲ, ರಘುನಾಥ ಮುತ್ತಾಜೆ, ಅತಿ ಹೆಚ್ಚು ಗೊಬ್ಬರ ಖರೀದಿ ಮಾಡಿದ ಮುಳಿಯ ತಿಮ್ಮಪ್ಪಯ್ಯ, ರಾಮಚಂದ್ರ ಪಳಂಗಾಯ, ರತ್ನಾವತಿ ಡಿ.ಆರ್., ಅತೀ ಹೆಚ್ಚು ಡಿಸೇಲ್ ಮತ್ತು ಪೆಟ್ರೋಲ್ ಖರೀದಿಸಿದ ರಾಧಾಕೃಷ್ಣ ಎಲಿಮಲೆ, ಚಲನ್ ಕೊಪ್ಪಡ್ಕ, ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ ಹಾಗೂ ಅತೀ ಹೆಚ್ಚು ದಿನಸಿ ಖರೀದಿಸಿದ ಶಿವಪ್ರಕಾಶ್ ಕಡಪಳ, ಶ್ಯಾಮ್ ಪ್ರಸಾದ್ ಎಂ., ದಯಾನಂದ ಮುತ್ಲಾಜೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇವರನ್ನು ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕಿಶೋರ್ ಕುಮಾರ್ ಅಂಬೆಕಲ್ಲು, ನಿರ್ದೇಶಕ ರಾದ ಬೆಳ್ಯಪ್ಪ ಗೌಡ ಬಿ.ಕೆ., ಎ.ವಿ.ತೀರ್ಥರಾಮ, ಮುಳಿಯ ಕೇಶವ ಭಟ್ , ಮಂಜುಳಾ ಮುತ್ಲಾಜೆ, ರವಿಪ್ರಕಾಶ್ ಬಳ್ಳಡ್ಕ, ಕೃಷ್ಣಯ್ಯ ಮೂಲೆತೋಟ, ಜಯಪ್ರಕಾಶ್ ಮೊಗ್ರ, ನವೀನ್ ಬಾಳುಗೋಡು, ಚಂದ್ರಾವತಿ ಮುಂಡೋಡಿ, ಕುಂಞ ಬಳ್ಳಕ, ಆನಂದ ಹಲಸಿನಡ್ಕ ಉಪಸ್ಥಿತರಿದ್ದರು. ಕಿಶೋರ್ ಕುಮಾರ್ ಪೈಕ ನಿರೂಪಿಸಿದರು.