Ad Widget

ಸುಳ್ಯ : ಗುತ್ತಿಗೆ ಆಧಾರಿತ ಕೆ ಎಸ್ ಆರ್ ಟಿ ಸಿ ಬಸ್ ಚಾಲಕರ ಸಂಬಳ ಕಡಿತ – ಕರ್ತವ್ಯಕ್ಕೆ ಗೈರು – ಚಾಲಕರಿಂದ ಪ್ರತಿಭಟನೆಗೆ ನಿರ್ಧಾರ

ಸುಳ್ಯ ಕೆ.ಎಸ್.ಆ‌ರ್.ಟಿ.ಸಿ. ಘಟಕದಲ್ಲಿ ಈ ಮೊದಲು ಪನ್ನಗ ಸಂಸ್ಥೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 9 ಚಾಲಕರಿಗೆ 11 ತಿಂಗಳು ಸಮರ್ಪಕವಾಗಿ ಸಂಬಳ ನೀಡಲಾಗಿತ್ತು. ತಿಂಗಳ ಹಿಂದೆ ಆ ಸಂಸ್ಥೆಯ ಗುತ್ತಿಗೆ ಅವಧಿ ಮುಗಿದ ಬಳಿಕ ಇನ್ನೊಂದು ಸಂಸ್ಥೆ ಪೂಜ್ಯಾಯ ಸೆಕ್ಯೂರಿಟಿ ಸರ್ವಿಸ್‌ ಸಂಸ್ಥೆಯವರು ಗುತ್ತಿಗೆ ಪಡೆದು ಇವರನ್ನು ನೇಮಿಸಿಕೊಂಡಿದ್ದರು.

. . . . . . .

ಅವರು ನೇಮಿಸುವ ಸಂದರ್ಭದಲ್ಲಿ ಚಾಲಕರ ಬೇಡಿಕೆಯಂತೆ ಸಂಬಳ ಕಡಿತ ಮಾಡುವುದಿಲ್ಲ, ಮತ್ತಿತರ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ ಇದೀಗ ತಿಂಗಳ ಸಂಬಳದಲ್ಲಿ 5 ಸಾವಿರಕ್ಕೂ ಅಧಿಕ ಹಣ ಕಡಿತ ಮಾಡಲಾಗಿದ್ದು, ಕೆಲವರಿಗೆ 10 ಸಾವಿರದವರೆಗೆ ಕಡಿತ ಮಾಡಲಾಗಿದೆ. ಇನ್ನಿಬ್ಬರಿಗೆ ಸಂಬಳವೇ ಬಂದಿಲ್ಲ ಎಂದು ಚಾಲಕರು ಆರೋಪಿಸಿದ್ದಾರೆ.

ಸುಳ್ಯ ಘಟಕ ವ್ಯಾಪ್ತಿಯಲ್ಲಿ ಸುಮಾರು 9 ಚಾಲಕರಿಗೆ ಅನ್ಯಾಯ ಆಗಿದೆ ಎಂದು ಅವರು ಕೆಲಸಕ್ಕೆ ಗೈರಾಗಿ ಪ್ರತಿಭಟಿಸುತ್ತಿದ್ದಾರೆ‌. ಕೆ.ಎಸ್.ಆರ್.ಟಿಸಿ. ಅಧಿಕಾರಿಗಳು ಕೂಡ ಈ ಮೊದಲು ಭರವಸೆ ನೀಡಿದಂತೆ ನಡೆದುಕೊಂಡಿಲ್ಲ ಅದ್ದರಿಂದ ಪುತ್ತೂರು ಕೆ.ಎಸ್‌.ಆರ್.ಟಿ.ಸಿ. ಡಿಸಿ ಕಚೇರಿ ಮುಂಭಾಗ ಪ್ರತಿಭಟಿಸಲು ಮಡಿಕೇರಿ, ಸುಳ್ಯ, ಪುತ್ತೂರು ಘಟಕದ ಸಂತ್ರಸ್ತ ಚಾಲಕರು ತೀರ್ಮಾನಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!