Ad Widget

ಡಾ|| ಮುರಲೀಮೋಹನ್ ಚೂಂತಾರು ರವರಿಗೆ ರೋಟರಿ ಸಂಸ್ಥೆಯಿಂದ ನೇಷನ್ ಬಿಲ್ಡರ್ ಅವಾರ್ಡ್

ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯ್ಯಾಪಕರಾಗಿ, ಸಹಸ್ರಾರು ವೈದ್ಯಕೀಯ ಲೇಖನಗಳ ಪತ್ರಿಕಾ ಅಂಕಣಕಾರರಾಗಿ, ಹತ್ತಾರು ವೈದ್ಯಕೀಯ ಜಾಗೃತಿ ಪುಸ್ತಕಗಳನ್ನು ಬರೆದು ಪ್ರಕಟಿಸಿ ವೈದ್ಯ ಸಾಹಿತಿಯೆಂದೆನಿಸಿ, ಸಾಹಿತ್ಯ, ಸಂಸ್ಕøತಿ, ಕಲೆ, ವೈದ್ಯಕೀಯ ಸೇವೆಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಹತ್ತು ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನ ಪಡೆದು ಒಂದು ದಶಕದಿಂದ ದ.ಕ.ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟನಾಗಿ ಯಶಸ್ವೀ ಸೇವೆ ಸಲ್ಲಿಸಿ, ರಾಷ್ಟ್ರಪತಿಗಳಿಂದ ಶ್ಲಾಘನೀಯ ಸೇವಾ ಪದಕ ಪಡೆದು ಪುರಸ್ಕøತರಾದ ಡಾ|| ಮುರಲೀಮೋಹನ್ ಚೂಂತಾರು ಇವರಿಗೆ ರೋಟರಿ ಸಂಸ್ಥೆಯಿಂದ ರಾಷ್ಟ್ರ ನಿರ್ಮಾಣದಲ್ಲಿ ಶ್ರಮಿಸಿದ ಸಾಧಕರಿಗೆ ಕೊಡಮಾಡುವ “ನೇಷನ್ ಬಿಲ್ಡರ್ ಅವಾರ್ಡ್-2024” ಅನ್ನು ನೀಡುವುದು ನಮಗೆಲ್ಲಾ ಅತೀ ಸಂತಸದ ವಿಷಯವೆಂದು ಕೆ.ಎಂ.ಸಿ. ಮಾಜಿ ಡೀನ್ ಡಾ|| ರಘುವೀರ್ ರವರು ದಿನಾಂಕ: 10-09-2024 ರಂದು ಮಂಗಳೂರು ನಗರದ ರೋಟರಿ ಬಾಲಭವನದಲ್ಲಿ ಜರಗಿದ ಗುರುವಂದನಾ ಕಾರ್ಯಕ್ರಮದಲ್ಲಿ ನುಡಿದರು. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದ ಈ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ ಡಾ|| ಮುರಲೀಮೋಹನ್ ಚೂಂತಾರು ರವರು ತನಗೆ ನೀಡಿದ ಈ ರಾಷ್ಟ್ರ ನಿರ್ಮಾಣ ಪ್ರಶಸ್ತಿಯ ಗೌರವವನ್ನು ಸ್ವೀಕರಿಸುತ್ತಾ, ಈ ಗೌರವ ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಮಹಾನ್‍ಚೇತನಗಳಿಗೆ ಅರ್ಪಣೆಯೆಂದರು ಹಾಗೂ ಈ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಯಶೋದಾ, ಶ್ರೀಮತಿ ಫ್ಲಾವಿ ಮಸ್ಕರೇನಸ್, ಶ್ರೀಮತಿ ಇಂದ್ರಾವತಿ ಮತ್ತು ಶ್ರೀಮತಿ ಜೆಸಿಂತಾ ರಾಡ್ರಿಗಸ್ ರವರನ್ನು ರೋಟರಿ ಪರವಾಗಿ ಸನ್ಮಾನಿಸಿ ಗೌರವಿಸಿದರು. ಈ ಸನ್ಮಾನ ಕಾರ್ಯಕ್ರಮವನ್ನು ರೋಟರಿ ಮಾಜಿ ಗವರ್ನರ್, ರೋ. ಕೆ. ಕೃಷ್ಣ ಶೆಟ್ಟಿ, ರೋಟರಿ ಜಿಲ್ಲಾ ಕಾರ್ಯದರ್ಶಿ (ತರಬೇತಿ) ಡಾ|| ಶಿವಪ್ರಸಾದ್, ರೋಟರಿ ಸಹಾಯಕ ಗವರ್ನರಾದ ವಿಶ್ವನಾಥ ಶೆಟ್ಟಿ ಇವರು ನೆರವೇರಿಸಿದರು.ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷ ಮೋಹನ್ ನಾಯರ್, ಗಣೇಶ ಕೃಷ್ಣ ಭಟ್, ನಿಯೋಜಿತ ಅಧ್ಯಕ್ಷ, ಡಾ|| ಅರುಣ್ ಕುಮಾರ್ ಶೆಟ್ಟಿ, ಶಿಕ್ಷಕರನ್ನು ಪರಿಚಯಿಸಿದ ಬುಲೆಟಿನ್ ಸಂಪಾದಕ ಅಜಿತ್ ರಾವ್, ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಡಾ|| ರಘುವೀರ್, ಅತಿಥಿ ಪರಿಚಯ ಡಾ|| ಶಿವಪ್ರಸಾದ್ ಹಾಗೂ ಶಿಕ್ಷಕರ ಪರಿಚಯವನ್ನು ಅಜಿತ್ ರಾವ್ ನೆರವೇರಿಸಿದರು. ಡಾ|| ಸತೀಶ್ ಕುಮಾರ್ ಶೆಟ್ಟಿ ವಂದನಾರ್ಪಣೆಗೈದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!