ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಸುಳ್ಯ ಮತ್ತು ಸಾರ್ವಜನಿಕ ಶ್ರೀ ದೇವತಾರಾದನಾ ಸಮಿತಿ ಸುಳ್ಯ ಇದರ 56 ನೆಯ ವರ್ಷದ ಗಣೇಶೋತ್ಸವ ಜಲಸ್ತಂಭನದೊಂದಿಗೆ ಸಂಪನ್ನಗೊಂಡಿತು.
ಸೆ.11 ರಂದು ಅಪರಾಹ್ನ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಹೊರಟು ವಾದ್ಯ ಘೋಷ ಗಳೊಂದಿಗೆ, ಗೊಂಬೆ ಬಳಗ, ಆಕರ್ಷಕ ಕುಣಿತ ಭಜನೆಯೊಂದಿಗೆ ಸುಳ್ಯದ ಮುಖ್ಯ ರಸ್ತೆಯಲ್ಲಿ ಯಾವುದೇ ಡಿಜೆ ಅಬ್ಬರವಿಲ್ಲದೆ ಶಾಂತ ರೀತಿಯಲ್ಲಿ ಸಾಂಪ್ರದಾಯಿಕ ಶೋಭಯಾತ್ರೆ ನಡೆಯಿತು. ಮೆರವಣಿಗೆಯು ನಗರದ ರಸ್ತೆಗಳಲ್ಲಿ ಸಾಗಿ ಪಯಸ್ವಿನಿ ನದಿಯಲ್ಲಿ ಗಣೇಶನ ವಿಗ್ರಹ ಜಲಸ್ತಂಭನ ಗೊಳಿಸಲಾಯಿತು. ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದು ಶೋಭಾಯಾತ್ರೆ ಕಣ್ತುಂಬಿಕೊಂಡರು.