Ad Widget

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಜೇಸಿ ಸಪ್ತಾಹ 2024 ಉದ್ಘಾಟನೆ

ಜೆಸಿಐ ಸಪ್ತಾಹ 2024ನ್ನು ಈ ವರ್ಷ ಡೈಮಂಡ್ ಜೆಸೀ ವೀಕ್ ಆಗಿ ಒಂದು ವಾರಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಆಚರಿಸಲಾಗುತ್ತಿದ್ದು
ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಒಂದು ವಾರಗಳ ಕಾಲ ನಡೆಯುವ ಜೇಸಿ ಸಪ್ತಾಹದ ಉದ್ಘಾಟನಾ ಸಮಾರಂಭವು ಸೆ.8ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಲಯ ಉಪಾಧ್ಯಕ್ಷರಾದ ಜೇಸಿಐ. ಸೆನೆಟರ್ ಅಭಿಷೇಕ್ ಜಿ.ಎಂ. ಉದ್ಘಾಟಿಸಿ, ಶುಭಹಾರೈಸಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷರಾದ ಜೇಸಿ ಗುರುಪ್ರಸಾದ್ ಮಾತನಾಡಿ ಒಂದು ವಾರಗಳ ಕಾಲ ನಡೆಯುವ ಜೇಸಿ ಸಪ್ತಾಹದ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿ ಗಳಾಗಿ ಪೂರ್ವ ವಲಯಾದ್ಯಕ್ಷರಾದ ಜೇಸಿಐ ಪಿಪಿಪಿ ಅಶೋಕ್ ಚೂಂತಾರ್, ಶಾಲಾ ಮುಖ್ಯ ಶಿಕ್ಷಕಿ ಸುನಂದಾ ಶೆಟ್ಟಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ರವಿರಾಜ್,
ಸಪ್ತಾಹ ನಿರ್ದೇಶಕರಾದ ಸುರೇಶ್ ಕಾಮತ್, ಜೊತೆ ಕಾರ್ಯದರ್ಶಿ ಜೇಸಿ ಪ್ರಸನ್ನ ಎಂ.ಆರ್., ಚಿತ್ರಕಲಾ ಶಿಕ್ಷಕರಾದ ಪ್ರಸನ್ನ ಐವರ್ನಾಡು, ಜೇಸಿಐ ಪಯಸ್ವಿನಿಯ ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ಹೆಚ್.ಜಿ.ಎಫ್ ನವೀನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಫರ್ಧೆಯನ್ನು ಆಯೋಜಿಸಿದ್ದು ನಮ್ಮೊಂದಿಗೆದಿಗೆ ಚಿತ್ರಕಲಾ ಶಿಕ್ಷಕರಾದ ಶ್ರೀ‌. ಶ್ರೀಹರಿ ಪೈಂದೋಡಿ ಹಾಗೂ ಶ್ರೀ. ಪ್ರಸನ್ನ ಐವರ್ನಾಡು ಸಹಕರಿಸಿದರು
ಈ ಕಾರ್ಯಕ್ರಮದಲ್ಲಿ ಜೇಸಿಐಯ ಪೂರ್ವಾದ್ಯಕ್ಷರುಗಳು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದರು.

ಜೇಸಿಐ ಸುಳ್ಯ ಪಯಸ್ವಿನಿಯ ಮಹಿಳಾ ಅಧ್ಯಕ್ಷೆ ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಖಜಾಂಚಿ ಜೇಸಿ. ಶೋಭಾ ಅಶೋಕ್ ಚೂಂತಾರು ಜೇಸಿವಾಣಿ ವಾಚಿಸಿ, ಜೇಸಿ. ಸುರೇಶ್ ಕಾಮತ್ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!