ಒಂದೇ ಒಂದು ಅಭಿವೃದ್ಧಿಗೆ ಗುದ್ದಲಿ ಪೂಜೆ ಮಾಡದ ಸರಕಾರ ಅಂದರೆ ಸಿದ್ಧರಾಮಯ್ಯ ಸರಕಾರ – ಬ್ರಿಜೇಶ್ ಚೌಟ

ಅಧಿಕಾರಿಗಳ ಸಭೆ ನಡೆಸುವುದರಲ್ಲೆ ಕಾಲ ಕಳೆಯುತ್ತಿರುವ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ ಜನತೆ, ಕಾರ್ಯಕರ್ತರು – ಚೌಟ

. . . . . . . . .

ಲೋಕಸಭಾ ಚುನಾವಣೆಯಲ್ಲಿ ನೋಟ ಅಭಿಯಾನದಾರರಿಗೆ ಟಕ್ಕರ್

. . . . . . .

ಯಾವುದೇ ಅನುದಾನ ನೀಡದೇ ಗುದ್ದಲಿ ಪೂಜೆ ಮಾಡದ ಸರಕಾರ ಎಂದರೇ ಅದು ಸಿದ್ಧರಾಮಯ್ಯ ಸರಕಾರ ಎಂದು ಕಾಂಗ್ರೆಸ್ ವಿರುದ್ದ ಸಂಸದ ಕ್ಯಾ ಬ್ರಿಜೇಶ್ ಚೌಟ ಕಿಡಿಕಾರಿದರು.
ಅವರು ಸುಳ್ಯದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಸರಕಾರದ ಕಾಂಗ್ರೆಸ್ ಶಾಸಕರಿಗೆ ಕೂಡ ಪ್ರಶ್ನೆಗಳು ಉದ್ಭವಿಸಿದೆ ಎಂದು ಹೇಳಿದರು. ಸರಕಾರದ ಇಂತಹ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸಗಳು ಆಗಬೇಕು ಎಂದು ಹೇಳಿದರು. ರಾಜ್ಯದಲ್ಲಿ ಅನುದಾನಗಳ ಕೊರತೆ ಇದೆ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಹೇಳಿದರು. ಕೇವಲ ಅಧಿಕಾರಿಗಳ ಸಭೆ ಮತ್ತು ಈ ಹಿಂದಿನ ಸರಕಾರಗಳ ಅಧಿಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ರಿಬ್ಬನ್ ಕತ್ತರಿಸುವ ಮೂಲಕ ಮಾಡುತ್ತಿದ್ದಾರೆ ಎಂದು ಹೇಳಿದರು . ಮಾಜಿ ಸಂಸದರಾದ ಕಟೀಲ್ ಅವರು ತಂದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವುದು ನನ್ನ ಆದ್ಯತೆ ಎಂದು ಹೇಳಿದರು. ಹೆದ್ದಾರಿ ಕಾಮಗಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು. ಜಿಲ್ಲೆಯ ಯುವಜನತೆಗೆ ಉದ್ಯೋಗ ನೀಡುವ ದೃಷ್ಟಿಯಲ್ಲಿ ಅದಕ್ಕೆ ಬೇಕಾಗುವ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇನೆ. ಅದರ ಪೂರ್ವ ತಯಾರಿಯ ಮೊದಲ ಸಭೆ ಕೆಲವೇ ದಿನಗಳಲ್ಲಿ ನಡೆಯಲಿದೆ ಎಂದು ಹೇಳಿದರು . ಕೇಂದ್ರದ ಯೋಜನೆಯಲ್ಲಿ ಸುಳ್ಯಕ್ಕೂ ಅನುದಾನ ನೀಡಲಾಗಿದೆ ಎಂದು ಹೇಳಿದರು. ಸಂಸದರಿಗೆ 5 ಕೋಟಿ ಅನುದಾನ ನೀಡಲಾಗುತ್ತಿದೆ. ಒಂದು ಮಂಡಲಕ್ಕೆ ೬೦ ಲಕ್ಷಗಳ ಅನುದಾನವನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಸಿಎಸ್ಆರ್ ಫಂಡ್ ಕೂಡ ಪಕ್ಷದ ಅಧ್ಯಕ್ಷರ ಗಮನಕ್ಕೆ ತಂದು ಮಾಡೋಣ ಎಂದು ಹೇಳಿದರು. ಮೇಕ್ ಮಾತಾ ಅಭಿಯಾನದಲ್ಲಿ ತಾಯಿಯ ಜೊತೆಗೆ ನಿಂತು ಗಿಡಗಳನ್ನು ನೆಡುವ ಮೂಲಕ ಮಾಡಬೇಕು ಎಂದು ಹೇಳಿದರು. ಪ್ರತಿಯೊಬ್ಬ ಜನಪ್ರತಿನಿಧಿಯು ಕೂಡ ಅಧಿಕಾರಿಗಳನ್ನು ಪ್ರಶ್ನಿಸುವ ಕೆಲಸ ಮಾಡಬೇಕು. ನಾವುಗಳು ಕೂಡ ಆಡಳಿತ ಪಕ್ಷಗಳ ಕಾರ್ಯಕರ್ತರಂತೆ ಇರಬೇಕು ಎಂದು ಸಲಹೆ ನೀಡಿದರು. ಅಧಿಕಾರಿಗಳು ಕಾಂಗ್ರೆಸ್ ಆಡಳಿತದ ಮಾನಸಿಕತೆಯಿಂದ ಹೊರ ಬಂದಿದ್ದಾರೆ ಈಗ ಆಡಳಿತದಲ್ಲಿ ಇರುವುದು ನರೇಂದ್ರ ಮೋದಿ ಎಂದು ಹೇಳಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳಿಗೆ ಅಧ್ಯಕ್ಷರ ನಡೆ ಎಂಬ ವಿನೂತನ ಕಾರ್ಯಕ್ರಮ ನಡೆಯುವಂತೆ ಮಾಡಬೇಕು ಎಂದು ಹೇಳಿದರು ಅಲ್ಲದೇ ಪಕ್ಷದ ಸದಸ್ಯತ್ವ ಕಾರ್ಯಕ್ರಮವನ್ನು ಪ್ರತಿಯೊಬ್ಬರು ಮಾಡಿಸಬೇಕು ಎಂದು ಹೇಳಿದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲವರು ಮತದಾನ ಬಹಿಷ್ಕಾರ ನೋಟ ಅಭಿಯಾನ , ಜಾತಿ ಅಭಿಯಾನ ಎಂದೆಲ್ಲ ಮಾಡಿದರು ಆದರೆ ಜಿಲ್ಲೆಯ ಜನತೆ ಮತ್ತು ಕಾರ್ಯಕರ್ತರು ನನ್ನ ಗೆಲುವಿಗೆ ಕಾರಣಿಭೂತರಾಗಿದ್ದಾರೆ ಎಂದು ಹೇಳಿದರು.

ಬಲಿಷ್ಟ ಭಾರತ ನಿರ್ಮಾಣಕ್ಕೆ ಡ್ರಗ್ಸ್ ನ ವಿರುದ್ದ ನಾವೆಲ್ಲಾ ಹೋರಾಡಬೇಕಾಗಿದೆ. ಅಲ್ಲದೇ ಪೋಲಿಸ್ ಅಧಿಕಾರಿಗಳನ್ನು ಮಾತ್ರ ನಂಬಿಕೊಂಡು ಕುಳಿತುಕೊಳ್ಳದೇ ಡ್ರಗ್ಸ್ ವಿರುದ್ದ ಹೋರಾಟಕ್ಕೆ ನಾವೆಲ್ಲಾ ಕೈ ಜೋಡಿಸಬೇಕು. ಅಲ್ಲದೆ ಹಿಂದುತ್ವ ಮತ್ತು ಸಮಾಜಕ್ಕಾಗಿ ಪ್ರಾಮಾಣಿಕ ಕೆಲಸಗಳನ್ನು ಮಾಡುತ್ತೆನೆ ಎಂದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading