Ad Widget

ವಳಲಂಬೆ : ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ

ಗಣೇಶ ಚತುರ್ಥಿ ಪ್ರಯುಕ್ತ ಗುತ್ತಿಗಾರು ಗ್ರಾಮ ಪಂಚಾಯತ್ ಒಕ್ಕೂಟ ಮತ್ತು ದೇವಚಳ್ಳ ಗ್ರಾಮ ಪಂಚಾಯತ್ ಒಕ್ಕೂಟ ಜಂಟಿ ಆಶ್ರಯ ದಲ್ಲಿ ವಳಲಂಬೆ ದೇವಸ್ಥಾನ ಆವರಣ ದಲ್ಲಿ ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು.

ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬೆಳ್ಯಪ್ಪ ಗೌಡ ಕಡ್ತಲ್ ಕಜೆ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಸುಮಿತ್ರಾ ಮೂಕಮಲೆ ಚಾಲನೆ ನೀಡಿದರು. ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಹೊಸೊಳಿಕೆ ಮತ್ತಿತರರು ಉಪಸ್ಥಿತರಿದ್ದರು.

ಇಲ್ಲಿ 15 ಸ್ವ ಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಹೊಮ್ ಪ್ರಾಡಕ್ಟ ಗಳಾದ ಹಪ್ಪಳ, ಉಪ್ಪಿನಕಾಯಿ, ಗಡಿ ಮದ್ದು , ಬೆಂಡು ಕುಕ್ಕೆ, ಬುಟ್ಟಿ,ಮುಟ್ಟಾಳೆ, ವೀಳ್ಯ ಎಲೆ , ಬೇಕರಿ ತಿಂಡಿ, ಕ್ಯಾಂಡಲ್,ಚಾಪೆ, ಕ್ರಾಪ್ಟ್ ಐಟಂ,ತರಕಾರಿ, ದೀಪ ಬತ್ತಿ, ಜೇನು ತುಪ್ಪ, ಅಕ್ಕಿ ರೊಟ್ಟಿ, ಚಾಪೆ, ಗೆರಟೆ ಸೌಟು ಇನ್ನಿತರ ಯಾವುದೇ ಉತ್ಪನ್ನ ಮಾರಾಟ ಪ್ರದರ್ಶನ ನಡೆಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!