ವಿಕ್ರಮ ಯುವಕ ಮಂಡಲ(ರಿ.) ಬಾರ್ಪಣೆ ಇದರ ಆಶ್ರಯದಲ್ಲಿ ಮಿತ್ರ ಭಜನಾ ಮಂಡಳಿ(ರಿ.) ಬಾರ್ಪಣೆ, ಮಿತ್ರ ಕಲಾ ವೇದಿಕೆ ಬಾರ್ಪಣೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ಎ’ ಒಕ್ಕೂಟ ಆಲೆಟ್ಟಿ ಇವುಗಳ ಸಹಕಾರದೊಂದಿಗೆ ಸೆ.07 ರಂದು 20ನೇ ವರ್ಷದ ಶ್ರೀ ಗಣೇಶ ಚತುರ್ಥಿಯು ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿವಿಧ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಜೃಂಭಣೆಯ ಶೋಭಾ ಯಾತ್ರೆಯ ಮೂಲಕ ನಡೆಯಲಿದ್ದು, ಪ್ರಾತಃಕಾಲ 6:00 ಗಂಟೆಗೆ ಶ್ರೀ ಗಣಪತಿ ಹೋಮ, ಬೆಳಿಗ್ಗೆ 8:30ಕ್ಕೆ ಶ್ರೀ ಗಣಪತಿ ಮೂರ್ತಿ ಪ್ರತಿಷ್ಠಾಪನೆ, ಬೆಳಿಗ್ಗೆ 7:15 ರಿಂದ ಮಿತ್ರ ಭಜನಾ ಮಂಡಳಿ ಬಾರ್ಪಣೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 9:00 ಗಂಟೆಗೆ ಯುವ ಸಂಗಮ ಬಾರ್ಪಣೆ ಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದ್ದು, ನಿವೃತ್ತ ಮುಖ್ಯ ಗುರುಗಳಾದ ವೆಂಕಪ್ಪ ಮಾಸ್ತರ್ ಕುಂಚಡ್ಕ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿಕ್ರಮ ಯುವಕ ಮಂಡಲದ ಜೊತೆ ಕಾರ್ಯದರ್ಶಿ ಚೇತನ್ ಏಣಾವರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಕ್ರಮ ಯುವಕ ಮಂಡಲದ ಪೋಷಕಾಧ್ಯಕ್ಷರಾದ ಬಾಲಕೃಷ್ಣ ಕುಂಚಡ್ಕ ಹಾಗೂ ಮಿತ್ರ ಮಕ್ಕಳ ಭಜನಾ ಮಂಡಳಿ ಬಾರ್ಪಣೆ ಇದರ ಅಧ್ಯಕ್ಷರಾದ ಕು| ಪ್ರತೀಕ್ಷಾ ಪಾತಿಕಲ್ಲು ಉಪಸ್ಥಿತರಿರಲಿದ್ದಾರೆ.
ಗಣೇಶ ಚತುರ್ಥಿಯ ಅಂಗವಾಗಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 200ಮೀ ಓಟ, 10ನೇ ತರಗತಿ ಒಳಗಿನ ಮಕ್ಕಳಿಗೆ ಮನೋರಂಜನಾ ಕ್ರೀಡಾ ಸ್ಪರ್ಧೆ, ಮಹಿಳೆಯರಿಗೆ ಸಂಗೀತ ಕುರ್ಚಿ, ಮನೋರಂಜನಾ ಕ್ರೀಡಾ ಸ್ಪರ್ಧೆ ಹಾಗೂ ಪುರುಷರಿಗೆ ಗೂಟಕ್ಕೆ ರಿಂಗ್ ಹಾಕುವುದು, ದೂರ ಓಟ ಸ್ಪರ್ಧೆಗಳು ನಡೆಯಲಿದ್ದು, ಪೂರ್ವಾಹ್ನ 11:00 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಮದ್ಯಾಹ್ನ 12:30 ರಿಂದ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ 1:00 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 2:00 ಗಂಟೆಯಿಂದ ಖ್ಯಾತ ವಾಗ್ಮಿಗಳು ಹಾಗೂ ಸಮಾಜ ಸೇವಕರಾದ ಗಣರಾಜ್ ಭಟ್ ಕೆದಿಲ ರವರಿಂದ ಧಾರ್ಮಿಕ ಉಪನ್ಯಾಸ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ವಿಕ್ರಮ ಯುವಕ ಮಂಡಲದ ಖಜಾಂಜಿ ದೀಪಕ್ ಕುಂಚಡ್ಕ ಸಭಾಧ್ಯಕ್ಷತೆ ವಹಿಸಲಿದ್ದು, ಗೌರವ ಉಪಸ್ಥಿತರಾಗಿ ಶ್ರೀ ಸದಾಶಿವ ಕ್ಷೇತ್ರ ನಾಗಪಟ್ಟಣ ಅದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ದಿನೇಶ್ ಕೋಲ್ಚಾರು ಹಾಗೂ ಉಪಾಧ್ಯಕ್ಷರಾದ ಕಿರಣ್ ಕಲ್ಲೆಂಬಿ ಉಪಸ್ಥಿತರಿರಲಿದ್ದಾರೆ.
ಸಂಜೆ 4:00 ರಿಂದ ಮಹಾಮಂಗಳಾರತಿ ನಂತರ ಚೆಂಡೆ-ವಾಧ್ಯ ಘೋಷಗಳೊಂದಿಗೆ ವಿಜೃಂಭಣೆಯ ಸಾರ್ವಜನಿಕ ಶೋಭಾಯಾತ್ರೆಯು ಯುವ ಸಂಗಮದಿಂದ ಹೊರಟು ಬಾರ್ಪಣೆ-ಏಣಾವರ-ನಾರ್ಕೋಡು ಮಾರ್ಗವಾಗಿ ನಾಗಪಟ್ಟಣ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳ್ಳಲಿರುವುದು. ಶೋಭಾಯಾತ್ರೆಯ ಸಂದರ್ಭದಲ್ಲಿ ನಾರ್ಕೋಡು ಹಾಗೂ ನಾಗಪಟ್ಟಣದಲ್ಲಿ ಕುಣಿತ ಭಜನೆ ನಡೆಯಲಿರುವುದು. ಎಂದು ವಿಕ್ರಮ ಯುವಕ ಮಂಡಲದ ಅಧ್ಯಕ್ಷರಾದ ವಿನಯ್ ಕುಮಾರ್ ರೈ ಏಣಾವರ, ಗೌರವಾಧ್ಯಕ್ಷರಾದ ಪ್ರಶಾಂತ್ ಕೋಲ್ಚಾರು, ಕಾರ್ಯದರ್ಶಿ ಕಿಶೋರ್ ನಡುಮನೆ ಹಾಗೂ ಖಜಾಂಜಿ ದೀಪಕ್ ಕುಂಚಡ್ಕ ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)
- Wednesday
- November 27th, 2024