Ad Widget

ಕವನ : ಬದುಕಿನ ವ್ಯಥೆಗಳು – ಭರವಸೆಯ ಹೆಜ್ಜೆಗಳು…

ಬರೆಯಲಿ ನಾ ಹೇಗೆ ಬದುಕಿನ ಕಥೆಯ, ನನ್ನ ಬದುಕೇ ಒಂದು ಕಾದಂಬರಿಯಂತೆ ಕಣ್ಮುಂದೆ ನಿಂತಿರುವಾಗ…
ವಿವರಿಸಲಿ ನಾ ಹೇಗೆ ಜೀವನದ ಪರೀಕ್ಷೆಗಳ, ಉತ್ತರಗಳೇ ಸಿಗದ ನೂರಾರು ಪ್ರಶ್ನೆಗಳು ನನ್ನ ಮನದೊಳಗೆ ಅತ್ತಿತ್ತ ಓಡಾಡುತ್ತಿರುವಾಗ…
ತಿಳಿಸಲಿ ನಾ ಹೇಗೆ ಕನಸಿನ ಅನುಭವಗಳ, ನಾ ಕಂಡ ಕನಸುಗಳೇ ನನಸಾಗದಿರುವಾಗ…
ಕಲಿಸಲಿ ನಾ ಹೇಗೆ ಕಷ್ಟ-ನೋವುಗಳಿಂದ ಹೊರಬರುವ ಪಾಠಗಳ, ನನ್ನ ಬದುಕಿನ ತುಂಬಾ ಕಷ್ಟ-ನೋವುಗಳೇ ತುಂಬಿರುವಾಗ…
ಹೇಳಲಿ ನಾ ಹೇಗೆ ನನ್ನ ಮನದ ಮಾತುಗಳ, ಕೇಳಲು ಯಾರಿಗೂ ಆಸಕ್ತಿಯೇ ಇಲ್ಲದಿರುವಾಗ…
ಇಲ್ಲಿ ನಾನೆಂದರೆ ನಾನಲ್ಲ, ನಾನೆಂದರೆ ನೀವೆಲ್ಲಾ, ಏಕೆಂದರೆ ನಮ್ಮೆಲ್ಲರ ಬದುಕಿನಲ್ಲೂ ಈ ರೀತಿಯ ಅನುಭವಗಳು ಆಗುತ್ತಲೇ ಇವೆಯಲ್ಲಾ…
ಆದರೂ “ಒಂದಲ್ಲಾ ಒಂದು ದಿನ ನಮಗೂ ಒಳ್ಳೆಯ ದಿನಗಳು ಬಂದೇ ಬರುತ್ತವೆ” ಎನ್ನುವ ನಂಬಿಕೆಯಿಂದ ಸಾಗುತ್ತಿರುವವರು ನಾವೆಲ್ಲಾ…✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading