ಸುಳ್ಯ ತಾಲೂಕಿನ 12 ಶಾಲೆಗಳಲ್ಲಿ ಶೂನ್ಯ ಶಿಕ್ಷಕರು ಇದ್ದಾರೆ ಅದನ್ನು ಸರಕಾರದ ಗಮನಕ್ಕೆ ತರುವ ಕೆಲಸಗಳನ್ನು ಮಾಡುತ್ತೇನೆ. ಅಲ್ಲದೇ ಅತಿಥಿ ಶಿಕ್ಷಕರ ವೇತನದಲ್ಲಿ ಇದೀಗ ಸರಿಯಾಗಿ ವೇತನ ನಿರ್ದಿಷ್ಟ ದಿನದಂದು ಪಾವತಿಯಾಗದೇ ಇದೆ ಇದನ್ನು ಅಧಿಕಾರಿಗಳಲ್ಲಿ ಮಾತಾನಾಡಿ ಸರಿ ಪಡಿಸುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು. ಸರಕಾರಿ ಶಾಲೆಗಳಿಗೆ ಅನುದಾನ ನೀಡದೇ ಇದ್ದರೆ ಶಾಲೆಗಳ ಬಳಿಯಲ್ಲಿ ಬೋರ್ಡ್ ಗಳನ್ನು ಅಳವಡಿಸಿ ಜನಪ್ರತಿನಿಧಿಗಳು ಬಾರದಂತೆ ಮಾಡಬೇಕು ಆಗ ಅವರು ಅನುದಾನ ಕೊಟ್ಟೆ ಕೊಡುತ್ತಾರೆ.
ಎಂದು ಹೇಳಿದರು. ಬ್ಯಾಂಕ್ ಗಳಲ್ಲಿ ಕನ್ನಡ ತಿಳಿದವರು ಇಲ್ಲದೇ ಸಮಸ್ಯೆಯಾಗುತ್ತಿದೆ. ಒಬ್ಬರಾದರೂ ಕನ್ನಡಿಗರು ಇರಬೇಕು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಬೇಕಾದ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದರು.
- Saturday
- November 23rd, 2024