Ad Widget

ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ – ಶೇ 12 ಡಿವಿಡೆಂಡ್ ನೀಡಲು ತೀರ್ಮಾನ

ಸೆ.01 ಆದಿತ್ಯವಾರದಂದು ಕ್ರೈಸ್ತ ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರಿ ಸಂಘದ 2023-24ನೇ ಸಾಲಿನ 15ನೇ ವಾರ್ಷಿಕ ಮಹಾಸಭೆಯು ದೇವಮ್ಮ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಬಿಟ್ಟಿ ಬಿ ನೆಡುನಿಲಂ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. 2023-24ನೇ ಸಾಲಿನಲ್ಲಿ ಸಂಘವು ಉತ್ತಮ ವ್ಯವಹಾರ ನಡೆಸಿರುತ್ತದೆ. ಮತ್ತು ಸಂಘದ ಸದಸ್ಯರಿಗೆ 12% ಡಿವಿಡೆಂಡ್ ನೀಡುವುದೆಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಪಾ ಆದರ್ಶ್ ಜೋಸೆಫ್, ಶ್ರೀ ಚಾಕೋ ಫೀಲಿಫ್ ಮತ್ತು ಜಾನಿ.ಕೆ.ಪಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮತ್ತು ತಾಲೂಕಿನಲ್ಲಿ 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗೆ ಕೊಡಲ್ಪಡುವ ಪ್ರೋತ್ಸಾಹ ಧನವನ್ನು ರೋಯನ್ ಪ್ರಿನ್ಸೆಸ್ ಡಿಸೋಜಾ ರವರಿಗೆ ಕೊಡಲಾಯಿತು.
ಆಡಳಿತ ಮಂಡಳಿ ವರದಿಯನ್ನು ಶ್ರೀಮತಿ ಸುನಿತಾ.ಎಂ ಡಿಸೋಜಾ ಮಂಡಿಸಿದ್ದು, ಲೆಕ್ಕ ಪತ್ರ ಮಂಡನೆಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾದ  ಅಜಿತ್.ಪಿಜೆ ನಿರ್ವಹಿಸಿದರು.
ಸಂಘದ ಅಧ್ಯಕ್ಷರಾದ ಬಿಟ್ಟಿ ಬಿ ನೆಡುನಿಲಂ ರವರ ಸ್ವಾಗತಿಸಿ ನಿರ್ದೇಶಕ ಲಿಯೋ ಜೋಸ್ ವಂದಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!