ಭಾರತೀಯ ಜನತಾ ಪಾರ್ಟಿಯ ಮುಂದಿನ ಆರು ವರ್ಷಗಳ ಅವಧಿಯ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ದೆಹಲಿಯಲ್ಲಿ ಚಾಲನೆ ನೀಡಿದ್ದು ಈ ಸಂದರ್ಭದಲ್ಲಿ ಸುಳ್ಯದಲ್ಲೂ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಯಿತು. ಸುಳ್ಯದ ಬಿಜೆಪಿಯ ಹಿರಿಯರಾದಂತಹ ಸೀತ ಅಶೋಕ್ ಪ್ರಭುಗಳ ಮನೆಯಲ್ಲಿ ಅಶೋಕ್ ಪ್ರಭುಗಳು 8800002024 ಸಂಖ್ಯೆಗೆ ಮಿಸ್ ಕಾಲ್ ನೀಡುವ ಮೂಲಕ ಬಿಜೆಪಿಯ ಸದಸ್ಯತ್ವವನ್ನು ಪಡೆದುಕೊಂಡರು. ಭಾರತೀಯ ಜನತಾ ಪಾರ್ಟಿಯ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕರವರು ಮುಂದಿನ ಒಂದು ತಿಂಗಳ ಕಾಲ ನಡೆಯುವಂತಹ ಸದಸ್ಯತ್ವ ಅಭಿಯಾನದ ಸಂಪೂರ್ಣ ಮಾಹಿತಿಯನ್ನು ನೀಡಿದರು. ಮಾನ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಸದಸ್ಯತ್ವವನ್ನು ನೋಂದಾಯಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿಯ ಪೂರ್ವ ಮಂಡಲಾಧ್ಯಕ್ಷರುಗಳಾದ ಹರೀಶ್ ಕಂಜಿಪಿಲಿ, ಏ ವಿ ತೀರ್ಥರಾಮ, ಎಸ್ ಎನ್ ಮನ್ಮಥ, ನಗರ ಪಂಚಾಯತ್ ಅಧ್ಯಕ್ಷ ಶ್ರೀಮತಿ ಶಶಿಕಲಾ ಉಪಾಧ್ಯಕ್ಷರಾದಂತ ಬುದ್ಧನಾಯ್ಕ್, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾದರ ಕಾರ್ಯದರ್ಶಿ ನಾರಾಯಣ, ನಪಂ ಸದಸ್ಯರುಗಳಾದ ಸುಧಾಕರ್ , ಶೀಲ ಕುರಂಜಿ, ಶಿಲ್ಪಾಸುದೇವ್ ಸರೋಜಿನಿ ಪೆಲತಡ್ಕ, ಕಿಶೋರಿ ಶೇಟ್, ಪ್ರಮುಖರಾದ ಜಿನ್ನಪ್ಪ ಪೂಜಾರಿ, ಶೇಖರ್ ಮಡ್ತಿಲ, ಪ್ರಸಾದ್ ಕಾಟೂರು ಮತ್ತಿತರರು ಭಾಗವಹಿಸಿದ್ದರು. ಕುಸುಮಾಧರ್ ಎ ಟಿ ಅವರು ಧನ್ಯವಾದ ಸಮರ್ಪಿಸಿದರು.
- Thursday
- November 21st, 2024