ಮರ್ಕಂಜ ಗ್ರಾಮದ ಬೊಮ್ಮಾರು ದಿವ್ಯಾಜ್ಯೋತಿ ನವೋದಯ ಸ್ವ ಸಹಾಯ ಗುಂಪಿನ ಸದಸ್ಯೆ ಲಲಿತಾ ರವರು ಇತ್ತೀಚೆಗೆ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದು ಅವರಿಗೆ ನವೋದಯ ಚೈತನ್ಯ ವಿಮಾ ಯೋಜನೆಯಿಂದ ಮಂಜೂರಾದ ರೂಪಾಯಿ 1ಲಕ್ಷದ ಚೆಕ್ ನ್ನು ಅವರ ವಾರಿಸುದಾರರಾದ ಬಾಬು ಮೂಲ್ಯ ರವರಿಗೆ ಮರ್ಕಂಜ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ದೇಲಂಪಾಡಿ ರವರು ವಿತರಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷರಾದ ಲಿಂಗಪ್ಪ ನಾಯ್ಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನಯಕುಮಾರ್, ತಾಲೂಕು ನವೋದಯ ಮೇಲ್ವಿಚಾರಕರಾದ ಶ್ರೀಧರ ಮಾಣಿಮರ್ಧು, ಪ್ರೇರಕಿ ಅನಿತಾ, ಫಲಾನುಭವಿಯವರ ಮಗ ಅಖಿಲ್ ಹಾಗೂ ಸಹಕಾರಿ ಸಂಘದ ಎಲ್ಲ ನಿರ್ದೇಶಕರು,ಗುಂಪಿನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
- Sunday
- November 24th, 2024