Ad Widget

ಕೊಲ್ಲಮೊಗ್ರದ ಯುವತಿ ಕಾಣೆ – ಪ್ರಕರಣ ಭೇದಿಸಿದ ಪೋಲೀಸರು – ಯುವತಿ ಮರಳಿ ಪೋಷಕರ ಮಡಿಲಿಗೆ

ಕೊಲ್ಲಮೊಗ್ರ ಗ್ರಾಮದ ಕೊಂದಾಳದ ಯುವತಿಯೋರ್ವಳು ಇಂದು ನಾಪತ್ತೆಯಾದ ಘಟನೆ ವರದಿಯಾದ ಬೆನ್ನಲ್ಲೇ ಪ್ರಕರಣವನ್ನು ಫೋಲೀಸರು ಭೇದಿಸಿದ್ದು ಯುವತಿ ಫೋಷಕರ ಮಡಿಲು ಸೇರಿದ್ದಾಳೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರಿನ ಏರ್ ಪೋರ್ಟ್ ನಿಂದ ಯುವತಿ ನಾಪತ್ತೆಯಾದ ಬಗ್ಗೆ ಮನೆಯವರು ಪೋಲೀಸರಿಗೆ ದೂರು ನೀಡಿದ್ದರು. ಪ್ರಕರಣ ಭೇದಿಸಿದ ಪೋಲೀಸರು ಈ ಬಗ್ಗೆ ತನಿಖೆ ನಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಯುವತಿ ನಾಪತ್ತೆ ವಿಚಾರ ಗಮನಕ್ಕೆ ಬರುತ್ತಿದ್ದಂತೆ ನಾಪತ್ತೆಯಾದ ಯುವತಿ ತನ್ನ ಅಕ್ಕನ ಮನೆಯಿಂದ ನಾಪತ್ತೆಯಾದ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಠಾಣೆಗೆ ಮಾಹಿತಿ ನೀಡಿದ್ದು ಅಲ್ಲಿ ಯುವತಿಯನ್ನು ಪತ್ತೆಹಚ್ಚಲಾಗಿದೆ ಮತ್ತು ನಮ್ಮಲ್ಲಿಗೆ ದೂರುಗಳು ಬಂದಾಗ ನಾವು ಸ್ವೀಕರಿಸದೇ ಕಳಿಸಿಲ್ಲ ಮತ್ತು ಯುವತಿ ನಾಪತ್ತೆಯ ವಿಚಾರಕ್ಕೆ ಬೇಕಾದ ಕಾನೂನು ರೀತಿಯ ಸೂಚನೆಗಳನ್ನು ಮತ್ತು ಕ್ರಮಗಳನ್ನು ಕೈಗೊಂಡಿದ್ದೆವೆ ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!