ಆಗಸ್ಟ್30 ರಂದು ಸುಳ್ಯದ ಕೆ.ವಿ.ಜಿ. ಇಂಜಿನಿಯರಿ0ಗ್ ಕಾಲೇಜಿನಲ್ಲಿ ಜಪಾನೀಸ್ ಭಾಷಾಕಾರ್ಯಾಗಾರವು ಕಾಲೇಜಿನ ಆಡಳಿತ ಮಂಡಳಿ ಮತ್ತು ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿ0ಗ್‌ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್‌ಯು.ಜೆ. ಇವರ ಮಾರ್ಗದರ್ಶನದ ಮೇರೆಗೆ ಇಂಜಿನಿಯರಿ0ಗ್ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ನಡೆಯಿತು.
ಶ್ರೀಮತಿ ಚರಿತಾ ಮಧುಕರ್, ಜಪಾನೀ ಭಾಷೆಯ ಸಲಹೆಗಾರರು ಹಾಗೂ ತರಬೇತುದಾರರು, ಐ.ಐ.ಐ.ಟಿ., ಜಬಲ್‌ಪುರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ತರಬೇತಿಯನ್ನು ನೆರವೇರಿಸಿಕೊಟ್ಟರು. ಇದು ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿ ಮತ್ತು ಭಾಷಾಜ್ಞಾನದಅಭಿವೃದ್ಧಿಗೆ ಉಪಯುಕ್ತವಾಗಿದೆ. ಪ್ರಾಂಶುಪಾಲರಾದ ಡಾ. ಸುರೇಶ ವಿ ತನ್ನಅಧ್ಯಕ್ಷೀಯ ನೆಲೆಯಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಾ. ಯಶೋದಾರಾಮಚಂದ್ರ ಆಡಳಿತ ಮಂಡಳಿಯ ಈ ಕಾರ್ಯಕ್ರಮಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿಪ್ರಾAಶುಪಾಲರಾದ ಡಾ. ಸುರೇಶ ವಿ., ಡೀನ್‌ಅಕಾಡೆಮಿಕ್ಸ್ ಡಾ. ಪ್ರಜ್ಞಾಎಂ.ಆರ್., ಕೆ.ವಿ.ಜಿ. ಅಮರಜ್ಯೋತಿ ಪಿ.ಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋದಾರಾಮಚಂದ್ರ, ಕೆ.ವಿ.ಜಿ. ಐ.ಪಿ.ಎಸ್. ಪ್ರಾಂಶುಪಾಲರಾದ ಅರುಣ್‌ಕುಮಾರ್, ಕೆ.ವಿ.ಜಿ. ಐ.ಪಿ.ಎಸ್.ನ ಅಕಾಡೆಮಿಕ್ ಸಂಯೋಜಕಿ ಶ್ರೀಮತಿ ರೇಣುಕಾಉತ್ತಪ್ಪ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ಪ್ರಾಧ್ಯಾಪಕರುಗಳು ಹಾಗೂ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.