Ad Widget

ಅರಂತೋಡು :  ಭಜನಾ ಪರಿಷತ್ತಿನ ವಲಯ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ತೀರ್ಥರಾಮ ಆಡ್ಕಬಳೆ, ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಕಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  ಸುಳ್ಯ ತಾಲೂಕು ಸಂಪಾಜೆ ವಲಯ, ಭಜನಾ ಪರಿಷತ್  ಸುಳ್ಯ ತಾಲೂಕು ಸಂಪಾಜೆ ವಲಯ ಮಟ್ಟದ ಸಭೆಯು ಆ.27 ರಂದು  ಅರಂತೋಡು ಗ್ರಾಮ ಪಂಚಾಯತ್ ನ ಅಮೃತ ಸಭಾಭವನದಲ್ಲಿ ನಡೆಯಿತು. ಸಭೆಯನ್ನು ಶ್ರೀ ದುರ್ಗಾ ಮಾತಾ ಭಜನಾ ಮಂದಿರದ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ ಅಧ್ಯಕ್ಷರಾದ  ಕೆ ಆರ್ ಪದ್ಮನಾಭ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.                                      

. . . . . . . . .

ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿಯಾದ ಟಿ ಎನ್ ಸತೀಶ್ ಮಾತನಾಡಿ ಭಜನಾ ಕಮ್ಮಟದ ಬಗ್ಗೆ ಹಾಗೂ ವಲಯದಲ್ಲಿ ನಡೆಯುವ ಭಜನೋತ್ಸವ ಬಗ್ಗೆ ಮಾಹಿತಿಯನ್ನು ನೀಡಿದರು.  ನಂತರ ವಲಯದ ಭಜನಾ ಪರಿಷತ್ತಿನ ಪದಾಧಿಕಾರಿಯವರ ಆಯ್ಕೆ ಮಾಡಲಾಯಿತು.  ಅಧ್ಯಕ್ಷರಾಗಿ ತೀರ್ಥರಾಮ ಆಡ್ಕಬಳೆ,  ಉಪಾಧ್ಯಕ್ಷರಾಗಿ ಯತೀಶ್ ಕಂಜಿಪಿಲಿ, ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಕಜೆ, ಜೊತೆ ಕಾರ್ಯದರ್ಶಿಯಾಗಿ ರತ್ನಾಕರ ರೈ ಅರಂಬೂರು,ಕೋಶಾಧಿಕಾರಿಯಾಗಿ  ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು ಇವರನ್ನು ಆಯ್ಕೆ ಮಾಡಲಾಯಿತು.  ತಾಲೂಕು ಭಜನಾ ಪರಿಷತ್ತಿನ ನಿರ್ದೇಶಕರಾದ ಸೋಮಶೇಖರ ಪೈಕ ಮಾತನಾಡಿ ಭಜನೆಯ ಮಹತ್ವ ಹಾಗೂ ಮುಂದಿನ ದಿನದಲ್ಲಿ ವಲಯದಲ್ಲಿ ನಡೆಯುವ  ಕಾರ್ಯಕ್ರಮಗಳ ಬಗ್ಗೆ ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸುವ ಬಗ್ಗೆ ಮಾಹಿತಿ ನೀಡಿದರು.

. . . . . . .

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತೀರ್ಥರಾಮ  ಅಡ್ಕಬಳೆ ಮಾತನಾಡಿ  ಎಲ್ಲರೂ ಸಂಘಟಿಕರಾಗಿ ಕಾರ್ಯಕ್ರಮವನ್ನು ಮುನ್ನಡೆಸೋಣ ಎಂದರು.                                        ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಭಜನಾ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ನಿತ್ಯಾನಂದ ಸ್ವಾಗತಿಸಿ, ಸೇವಾ ಪ್ರತಿನಿಧಿಯಾದ ಶ್ರೀಮತಿ ತಾರಾ ವಂದಿಸಿದರು. ವಲಯದ ಮೇಲ್ವಿಚಾರಕರಾದ ಗಂಗಾಧರ ರವರು ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading