Ad Widget

ಮಂಡೆಕೋಲು: ಯಾದವ ಪ್ರಾದೇಶಿಕ ಸಮಿತಿ ಹಾಗೂ ಯಾದವ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಯಾದವ ಸಭಾ ಪ್ರಾದೇಶಿಕ ಸಮಿತಿ ಮಂಡೆಕೋಲು ಹಾಗೂ ಯಾದವ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಡೆಕೋಲು ಇದರ ಸಹಯೋಗದೊಂದಿಗೆ ಆ.26 ರಂದು ಶ್ರೀ ಕೃಷ್ಣ ಜನಾಷ್ಟಮಿ ಕಾರ್ಯಕ್ರಮವು ಯಾದವ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮವು ಪ್ರಾತಃಕಾಲದಲ್ಲಿ ಶ್ರೀ ಗಣಪತಿ ಹವನ ಮತ್ತು ಶ್ರೀಕೃಷ್ಣ ಕಲ್ಫೋತ್ತ ಪೂಜೆಯೊಂದಿಗೆ ಪ್ರಾರಂಭವಾಯಿತು ಬೆಳಿಗ್ಗೆ ಗಂಟೆಗೆ 10ರಿಂದ 11ಗಂಟೆಯವರೆಗೆ ಭಜನಾ ಸಂಕೀರ್ತನೆ ಆ ಬಳಿಕ ಸಾರ್ವಜನಿಕ ಮಕ್ಕಳ ಮುದ್ದು ಕೃಷ್ಣ ವೇಷ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಅಪರಾಹ್ನ ಗಂಟೆ 12 ರಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ವಿಧ್ಯಾರ್ಥಿಗಳಿಗೆ ದತ್ತಿನಿಧಿ ವಿತರಣಾ ಕಾರ್ಯಕ್ರಮ ನಡೆಯಿತು. ಯಾದವ ಸಭಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಶ್ರೀ ಅಪ್ಪಯ್ಯ ಮಣಿಯಾಣಿ ಅಕ್ಕಪ್ಪಾಡಿ ಸಭೆಯ ಅಧ್ಯಕ್ಷತೆ‌ ವಹಿಸಿದ್ದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ಅನಂತಕೃಷ್ಣ ಚಾಕೋಟೆ, ನಿವೃತ್ತ ಅಂಚೆ ಪಾಲಕರಾದ ವೆಂಕಪ್ಪ ನಾಯ್ಕ ಈಶ್ವರ ಮೂಲೆ,ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ , ಯಾದವ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ರಾಮಚಂದ್ರ ಮಾಸ್ಟರ್ ಕೇನಾಜೆ, ಯಾದವ ಮಹಿಳಾ ವೇದಿಕೆ ಅಧ್ಯಕ್ಷೆ ಉಷಾ ಗಂಗಾಧರನ್ ಮಾವಂಜಿ, ಯಾದವ ಸಭಾ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಪ್ರಕಾಶ್ ಕಣೆಮರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಅರೆಭಾಷಾ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಸದಾನಂದ ಮಾವಜಿಯವರನ್ನು ಯಾದವ ಸಮುದಾಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು, ಶಿಕ್ಷಣ ತಜ್ಞ ದಿ.ಮಾವಂಜಿ ಕುಂಞಿರಾಮ ಮಾಸ್ಟರ್ ಸ್ಮರಣಾರ್ಥ ನೀಡಲಾಗುವ ದತ್ತಿನಿಧಿ-ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಡಿಯಲ್ಲಿ ಈ ಬಾರಿಯ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿವೇತನ ವಿತರಿಸಲಾಯಿತು, ಎಲ್ಲಾ ಮುದ್ದುಕೃಷ್ಣ ವೇಷದಾರಿ ಮಕ್ಕಳನ್ನು ಪ್ರಮಾಣಪತ್ರ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಭಿಷೇಕ್ ಕಣೆಮರಡ್ಕರಿಂದ‌ ದೇವರ ಸ್ತುತಿಯೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಯಾದವ್ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಸುರೇಶ್ ಕಣೆಮರಡ್ಕ ಸ್ವಾಗತಿಸಿದರು, ಟ್ರಸ್ಟ್ ನ ಕಾರ್ಯದರ್ಶಿ ರಾಮಚಂದ್ರ ಯಧುಗಿರಿ ವಂದಿಸಿದರು. ಯಾದವ ಯುವವೇದಿಕೆ ತಾಲೂಕು ಉಪಾಧ್ಯಕ್ಷೆ ಸಾವಿತ್ರಿ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!