ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಸೆ.07 ಮತ್ತು ಸೆ. 08 ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮ : ಸೆ. 07 ಶನಿವಾರ ಬೆಳಿಗ್ಗೆ ಗಂಟೆ 9-00ಕ್ಕೆ ಗಣಪತಿ ಪ್ರತಿಷ್ಠೆ, ಬೆಳಿಗ್ಗೆ ಗಂಟೆ 9-15ರಿಂದ ಸಾಮೂಹಿಕ ಗಣಪತಿ ಹವನ, ಬೆಳಿಗ್ಗೆ ಗಂಟೆ 10-00ರಿಂದ ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವ ಕಾರ್ಯಕ್ರಮ ನಡೆಯಲಿದೆ
ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಸಂಜೆ ಗಂಟೆ 6-00ರಿಂದ 7-00ರ ತನಕ ಶ್ರೀ ಶಂಖಪಾಲ ಭಜನಾ ಸೇವಾ ಸಮಿತಿ ವಳಲಂಬೆ ಹಾಗೂ ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 7-00ರಿಂದ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವಿನೋದಾವಳಿಗಳು, ರಾತ್ರಿ ಗಂಟೆ 8-30ರಿಂದ ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಮಂಗಳೂರು ವಿಭಾಗದ ಸಾಮರಸ್ಯ ಸಹ ಸಂಯೋಜಕರಾದ ಶಿವಪ್ರಸಾದ ಮಲೆಬೆಟ್ಟು ಇವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ರಾತ್ರಿ 9.30 ರಿಂದ ನೃತ್ಯ ಸಾರಂಗ ಕಲಾ ಕುಟೀರ ವಳಲಂಬೆ ಗುತ್ತಿಗಾರು ನೃತ್ಯಗುರು ರಚಿತಾ ಗೌಡ ಇಜ್ಜೇಲುಮಕ್ಕಿ ತಂಡದಿಂದ “ಸಾಂಸ್ಕೃತಿಕ ನೃತ್ಯ ವೈಭವ” ಪ್ರದರ್ಶನಗೊಳ್ಳಲಿದೆ.
ಸೆ. 08 ಆದಿತ್ಯವಾರ ಬೆಳಿಗ್ಗೆ ಗಂಟೆ 8-30ರಿಂದ ಶ್ರೀ ಶಂಖಪಾಲ ಭಜನಾ ಸೇವಾ ಸಮಿತಿ ವಳಲಂಬೆ, ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು, ಶ್ರೀ ದುರ್ಗಾ ಭಜನಾ ಮಂಡಳಿ ನಡುಗಲ್ಲು, ಶ್ರೀ ದೇವಿ ಭಜನಾ ಮಂಡಳಿ ಮೆಟ್ಟಿನಡ್ಕ, ಸ್ಪೂರ್ತಿ ಜ್ಞಾನವಿಕಾಸ ಭಜನಾ ಮಂಡಳಿ ಮೊಗ್ರ ಹಾಗೂ ಶ್ರೀ ದುರ್ಗಾಶಕ್ತಿ ಮಹಿಳಾ ಭಜನಾ ಮಂಡಳಿ, ಹಾಲೆಮಜಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 12-00ರಿಂದ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸೆ.08 ರಂದು ಆದಿತ್ಯವಾರ ಸಂಜೆ ಗಂಟೆ 3.00 ರಿಂದ ಶ್ರೀ ಗಣೇಶನ ಭವ್ಯ ಶೋಭಾಯಾತ್ರೆ ನಡೆಯಲಿದೆ.
ಸ್ಪರ್ಧೆಗಳು : ಸೆ.07 ರಂದು ಸಾರ್ವಜನಿಕ ಪುರುಷರಿಗೆ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಹಾಗೂ ಒಂದು ನಿಮಿಷದ ಸ್ಪರ್ಧೆ ನಡೆಯಲಿದೆ. ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ರೂ. 4001, ದ್ವಿತೀಯ ರೂ. 3001, ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ ತಂಡಗಳಿಗೆ ತಲಾ ರೂ. 1000/- ಮತ್ತು ಶಾಶ್ವತ ಫಲಕ ಬಹುಮಾನ ನೀಡಲಾಗುವುದು.
ಸೆ.07 ರಂದು ಸಾರ್ವಜನಿಕ ಮಹಿಳೆಯರಿಗೆ ಭಕ್ತಿಗೀತೆ, ಬಾಲ್ ಪಾಸಿಂಗ್, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ (ಮಹಿಳೆಯರ ಹಗ್ಗ ಜಗ್ಗಾಟಕ್ಕೆ ಸ್ಥಳದಲ್ಲೇ ತಂಡ ರಚನೆ ಮಾಡುವುದು) ಸ್ಪರ್ಧೆ ನಡೆಯಲಿದೆ. ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಭಕ್ತಿಗೀತೆ, ಗಣೇಶನ ಚಿತ್ರ ಬಿಡಿಸುವುದು ಹಾಗೂ ಲಕ್ಕಿಗೇಮ್ ಸ್ಪರ್ಧೆ ನಡೆಯಲಿದೆ. ಅಂಗನವಾಡಿ, ಎಲ್.ಕೆ.ಜಿ., ಯು.ಕೆ.ಜಿ. ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ ಹಾಗೂ ಇತರ ಸ್ಪರ್ಧೆ ಹಾಗೂ 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ವಿವಿಧ ಸ್ಪರ್ಧೆ ನಡೆಯಲಿದೆ.
ಸೆ. 08 ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10-00ರಿಂದ ಪುರುಷರ ಮುಕ್ತ ಹಗ್ಗಜಗ್ಗಾಟ ನಡೆಯಲಿದ್ದು ಪ್ರಥಮ ರೂ. 2001, ದ್ವಿತೀಯ ರೂ. 1001 ಮತ್ತು ಶಾಶ್ವತ ಫಲಕ ನೀಡಲಾಗುವುದು ಎಂದು ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಹರೀಶ್ಚಂದ್ರ ಕೇಪಳಕಜೆ ತಿಳಿಸಿದ್ದಾರೆ.