Ad Widget

ದಾಸರಬೈಲು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಯುವಶಕ್ತಿ ಮಿತ್ರ ಬಳಗ ದಾಸರಬೈಲು ಮರ್ಕಂಜ ದ ವತಿಯಿಂದ ದ್ವಿತೀಯ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮತ್ತು ವಿವಿದ ಆಟೋಟ ಸ್ಪರ್ಧೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ರೆಂಜಾಳ ದೇವಸ್ಥಾನದ ಸಹ ಅರ್ಚಕ ರಾಜರಾಮ್ ಭಟ್ ಬಳ್ಳಕ್ಕಾನ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ಯನ್ನು ಮರ್ಕಂಜ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಸತೀಶ್ ರಾವ್ ವಹಿಸಿದ್ದರು. ವೇದಿಕೆಯಲ್ಲಿ ಮೋಹನ್ ದಾಸರಬೈಲು ಯುವಶಕ್ತಿ ಮಿತ್ರ ಮಂಡಳಿ ಅಧ್ಯಕ್ಷರು , ಹಿರಿಯ ಮಾರ್ಗದರ್ಶಕರಾದ ಐತಪ್ಪ ದಾಸರಬೈಲು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕುಸುಮ ಕುದ್ಕುಳಿ, ಶ್ರೀ ಕ್ಷೇತ್ರ ರೆಂಜಾಳದ ಅನ್ನಪೂರ್ಣ ಸಮಿತಿಯ ಅಧ್ಯಕ್ಷರಾದ ಚಿನ್ನಪ್ಪ ಗೌಡ ಬೇರಿಕೆ ಉಪಸ್ಥಿತರಿದ್ದು ಶುಭ ಹಾರೈಸಿದರು.

. . . . . . . . .

ಅಕ್ಷತಾ ದಾಸರಬೈಲು ಎಲ್ಲರನ್ನೂ ಸ್ವಾಗತಿಸಿ.ಹರಿಣಾಕ್ಷಿ ದಾಸರಬೈಲು ಧನ್ಯವಾದ ಸಮರ್ಪಿಸಿದರು.ವಿವಿದ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಯನ್ನು ನಡೆಸಲಾಯಿತು. ಪುಟಾಣಿ ಕೃಷ್ಣ ವೇಷದಾರಿ ಮಕ್ಕಳ ಕಲರವ ಕಣ್ಮನ ಸೆಳೆಯುತ್ತಿತ್ತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading