Ad Widget

ಬಾಳಿಲ:ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಬಾಳಿಲ ವಿದ್ಯಾಬೋಧಿನೀ ಸಂಸ್ಥೆಯಲ್ಲಿ ಜರುಗಿತು. ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀಯುತ ಪಿ ಜಿ ಎಸ್ ಎನ್ ಪ್ರಸಾದ್ ರವರು ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಶ್ರೀಮತಿ ಸಂಧ್ಯಾಕುಮಾರಿ ಶಿಕ್ಷಣ ಸಂಯೋಜಕಿ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ಶ್ರೀಯುತ ಜಯಂತ್ ಸಿ.ಆರ್.ಪಿ ಸಮೂಹ ಸಂಪನ್ಮೂಲ ಕೇಂದ್ರ ಎಣ್ಮೂರು ಉಪಸ್ಥಿತರಿದ್ದರು. ಸುಳ್ಯ ತಾಲೂಕಿನ ಸುಮಾರು 19 ಪ್ರೌಢಶಾಲೆಗಳ 58 ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡರು. ಅಪರಾಹ್ನ ಸಮಾರೋಪ ಸಮಾರಂಭ ಜರುಗಿತು. ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಕೋಶಾಧಿಕಾರಿಗಳಾದ ಶ್ರೀ ಕೈಂತಜೆ ರಾಮ ಭಟ್ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಕೆ ಪಿ ಎಸ್ ಬೆಳ್ಳಾರೆ ಪ್ರೌಢಶಾಲೆ ಪ್ರಥಮ, ಸರಕಾರಿ ಪ್ರೌಢಶಾಲೆ ಎಣ್ಮೂರು ದ್ವಿತೀಯ, ಸರಕಾರಿ ಪ್ರೌಡಶಾಲೆ ಏನೆಕಲ್ಲು ತೃತೀಯ ಬಹುಮಾನವನ್ನು ಗಳಿಸಿತು. ಗುಂಪು ವಿಭಾಗದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಪ್ರೌಢಶಾಲೆ ಪ್ರಥಮ ಬಹುಮಾನ ಗಳಿಸಿತು. ಕುಮಾರಸ್ವಾಮಿ ಪ್ರೌಢಶಾಲೆ ಸುಬ್ರಮಣ್ಯ ದ್ವಿತೀಯ ಬಹುಮಾನ ಗಳಿಸಿತು. ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ತೃತೀಯ ಬಹುಮಾನ ಗಳಿಸಿತು. ವಿದ್ಯಾಬೋಧಿನೀ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಯಶೋಧರ ಎನ್ ಇವರು ಸ್ವಾಗತಿಸಿದರು. ವಿದ್ಯಾಬೋಧಿನೀ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಶ್ರೀಯುತ ಉದಯಕುಮಾರ್ ಇವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಸಹನಾ ಬಿ ಬಿ ಇವರು ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading