ಸುಬ್ರಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಎಚ್ ಆರ್ ಅಂಡ್ ಪ್ಲೇಸ್ಮೆಂಟ್ ಸೆಲ್, ರೋಟರಿ ಕ್ಲಬ್ ಸುಬ್ರಹ್ಮಣ್ಯ ಸಹಯೋಗದೊಂದಿಗೆ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ. ಚಂದ್ರಶೇಖರ ನಾಯರ್ ಅಧ್ಯಕ್ಷರು ರೋಟರಿ ಕ್ಲಬ್ ಸುಬ್ರಹ್ಮಣ್ಯ ಇವರು ವಹಿಸಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೊ. ವೆಂಕಟೇಶ್ ಎಚ್.ಎಲ್ . ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದಿನೇಶ P.T. ಉಪಸ್ಥಿತರಿದ್ದರು. ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ. ಡಾ. ಶ್ರೀ ಕೃಷ್ಣಮೂರ್ತಿ, ವ್ಯಕ್ತಿತ್ವ ವಿಕಸನ ತರಬೇತಿದಾರರು, ನಿವೃತ್ತ ಪ್ರಾಂಶುಪಾಲರು, ಎಸ್.ಡಿ.ಎಂ. ವಸತಿಯುತ ಪದವಿಪೂರ್ವ ಕಾಲೇಜು ಉಜಿರೆ ಇವರು ಉಪಸ್ಥಿತರಿದ್ದು ಒಂದು ದಿನದ ಅರ್ಥಪೂರ್ಣ ತರಬೇತಿಯನ್ನು ನಡೆಸಿಕೊಟ್ಟರು.
ವೇದಿಕೆಯಲ್ಲಿ ಮಹಾವಿದ್ಯಾಲಯದ IQAC ಸಂಯೋಜಕರಾದ ಶ್ರೀಮತಿ ಲತಾ B.T, ರೊ. ಚಿದಾನಂದ ಕುಳ , ಕಾರ್ಯದರ್ಶಿಗಳು ರೋಟರಿ ಕ್ಲಬ್ ಸುಬ್ರಹ್ಮಣ್ಯ ಉಪಸ್ತಿದ್ದರು. ವಿದ್ಯಾರ್ಥಿನಿ, ತೃತೀಯ ಪದವಿಯ ಕಲ್ಪನಾ ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಓದಿದರು, ಮಹಾವಿದ್ಯಾಲಯದ ಎಚ್ ಆರ್ ಅಂಡ್ ಪ್ಲೇಸ್ಮೆಂಟ್ ಸೆಲ್ ಸಂಯೋಜಕರಾದ ಶ್ರೀಮತಿ ಆರತಿ ಕೆ ಧನ್ಯವಾದ ಸಮರ್ಪಿಸಿದರು. ಈ ತರಬೇತಿ ಕಾರ್ಯಕ್ರಮದಲ್ಲಿ ರೊಟೆರಿಯನ್ ಸದಸ್ಯ ಶ್ರೀ ಲೋಕೇಶ್ ,ಪೂರ್ವ ವಿದ್ಯಾರ್ಥಿ ಸಂಘದ ಸದಸ್ಯೆ, ಶ್ರೀಮತಿ ವಿಮಲಾ ರಂಗಯ್ಯ ಭಾಗವಹಿಸಿದರು.