Ad Widget

ಹರಿಹರಪಲ್ಲತ್ತಡ್ಕ: ಮನೆ ಮೇಲೆ ಬೃಹದಾಕಾರದ ಮರ ಬಿದ್ದು ಮನೆ ಮಂದಿ ಆಸ್ಪತ್ರೆಗೆ ದಾಖಲು! 24 ಗಂಟೆಗಳ ಸನಿಹವಾದರು ಬಾರದ ಅಧಿಕಾರಿ ಜನಪ್ರತಿನಿಧಿ ವರ್ಗ ?

ಹರಿಹರಪಲ್ಲತ್ತಡ್ಕ : ಹರಿಹರ ಪಲ್ಲತ್ತಡ್ಕದ ಕಾಲಾನಿ ನಿವಾಸಿ ರವಿ ಎಂಬವರ ಮನೆ ಮೇಲೆ ಕಳೆದ ರಾತ್ರಿ ಮರ ಬಿದ್ದು ಸಂಪೂರ್ಣ ಹಾನಿಗೊಂಡಿದೆ. ಮನೆಯಲ್ಲಿದ್ದವರಿಗೆ ಗಾಯಗಳಾಗಿದ್ದು ಇದೀಗ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರನ್ನು ಐತಾ, ಮಾಲಕಿ , ರವಿ , ಶೇಖರ್ , ಗುರುವ , ಆದರ್ಶ್ ಸುಳ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಇನ್ನೋರ್ವ ಪುತ್ರಿ ಯಕ್ಷಿತಾರವರು ಗಾಯಗೊಂಡು

ಮನೆಯಲ್ಲೆ ಇದ್ದಾರೆ ಎಂದು ತಿಳಿದುಬಂದಿದ್ದು, ಗಾಯಗೊಂಡವರು ಮಾತನಾಡುತ್ತಾ ನಾವು ಈ ಹಿಂದಿನಿಂದಲೇ ಮರಗಳನ್ನು ತೆರವುಗೊಳಿಸಲು ಆಗ್ರಹಿಸಿದ್ದರು ಸ್ಥಳೀಯ ಆಡಳಿತ ಎಚ್ಷೆತ್ತುಕೊಳ್ಳದೇ ಇದ್ದು ಈ ದುರ್ಘಟನೆಗೆ ಕಾರಣವಾಗಿದೆ ಎಂದು ಮನೆಯವರು ಹೇಳುತ್ತಿದ್ದು. ಸ್ಥಳೀಯರಾದ ವಿಶ್ವನಾಥ್ ಮುಂಡೋಡಿ ಎಂಬುವವರು ಈ ಘಟನೆ ಬಗ್ಗೆ ಮಾತನಾಡುತ್ತಾ ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಸೌಜನ್ಯಕ್ಕಾದರು ಭೇಟಿ ನೀಡಿ ಆರೋಗ್ಯ ವಿಚಾರಣೆ ನಡೆಸಿಲ್ಲಾ, ಇದಲ್ಲದೇ ಇದು ಅರಣ್ಯ ಇಲಾಖೆ ಪಂಚಾಯತ್ ರವರ ಬೇಜಾವಬ್ದಾರಿಯಾಗಿದೆ ಮತ್ತು ಮನೆಯ ಮೇಲೆ ಮರ ಬಿದ್ದ ಸಂದರ್ಭದಲ್ಲಿ ವಿಧ್ಯುತ್ ತಂತಿಗಳು ಕೂಡ ಕಡಿತಗೊಂಡಿದ್ದು ಅದರ ಮೇಲೆ ನೀರು ಹರಿಯುತ್ತಿತ್ತು, ಆಫ್ ಮಾಡಿಸಲು ಕರೆ ಮಾಡಿದಾಗ ಅವರು ಕರೆ ಸ್ವೀಕರಿಸದೇ ಇಂದು ಮುಂಜಾನೆ ವರದಿಗಳು ಬಂದ ಬಳಿಕ ವಿಧ್ಯುತ್ ತಂತಿಗಳಲ್ಲಿನ ವಿಧ್ಯುತ್ ಹರಿವುಗಳನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು.

ಘಟನೆ ಕುರಿತು ವರದಿಯಾಗುತ್ತಿದ್ದಂತೆ ಪುತ್ತೂರು ವಿಭಾಗಿಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!