ಜಾಗೃತಿ ಸುಳ್ಯ ವಿದ್ಯಾರ್ಥಿ ತಂಡದ ವತಿಯಿಂದ ಸರ್ಕಾರಿ ಪ್ರೌಢಶಾಲೆ ಐವರ್ನಾಡು ಇಲ್ಲಿ ಆ.18ರಂದು ವಿವಿಧ ರೀತಿಯ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಲು ಮಾಹಿತಿ ಕಾರ್ಯಾಗಾರ ನಡೆಯಿತು. ಶ್ರಾವಣ್ ಶೇಡಿಕಜೆ, ಅಮರ್ ಕೆ.ಪಿ ಮತ್ತು ಭುವನಶ್ರೀ ಸೈಬರ್ ಅಪರಾಧಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಜಾಗೃತಿ ತಂಡದ ಸದಸ್ಯೆ ಗಗನ ಎಂ ಆರ್ ತಂಡದ ಚಟುವಟಿಕೆಗಳು ಹಾಗೂ ರೂಪುರೇಷೆ ಬಗ್ಗೆ ಮಾಹಿತಿ ನೀಡಿದರು. ಐವರ್ನಾಡು ಸರಕಾರಿ ಪ್ರೌಢಶಾಲೆ ಸಹ ಶಿಕ್ಷಕರಾದ ನಾರಾಯಣ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಜಾಗೃತಿ ತಂಡದ ಕಾರ್ಯಕ್ರಮಗಳಿಗೆ ಶ್ಲಾಘನೆಯನ್ನು ವ್ಯಕ್ತಪಡಿಸಿ, ತಂಡದ ಮುಂದಿನ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಸಾಮಾಜಿಕ ಜವಾಬ್ದಾರಿಯ ಉದ್ದೇಶದಿಂದ ಜಾಗೃತಿ ಸುಳ್ಯದ ವಿದ್ಯಾರ್ಥಿಗಳ ತಂಡ ಕಳೆದ 1 ವರ್ಷದಿಂದ ಸುಳ್ಯ ತಾಲೂಕಿನ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯನ್ನು ಬೀರುವ ಮೂಲಕ ಜಾಗೃತಿ ಮತ್ತು ಅರಿವು ಮೂಡಿಸಲು ಪ್ರಯತ್ನಿಸುತ್ತಿದೆ.
- Wednesday
- December 4th, 2024