ಕೇನ್ಯ ಶಾಲೆಯ ಬಳಿಯ ನಿವಾಸಿ ಬಾಬು ಪೂಜಾರಿ ಎಂಬವರು ಇಂದು ಮುಂಜಾನೆ 3.30ರ ವೇಳೆಗೆ ಮನೆಯಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ. ಮನೆಯವರು ಹುಡುಕಾಟ ನಡೆಸಿದಾಗ ಕೇನ್ಯ ಸ.ಕಿ.ಪ್ರಾ. ಶಾಲಾ ಬಾವಿ ಕಟ್ಟೆಯಲ್ಲಿ ಬಾಬು ಪೂಜಾರಿಯವರ ಲುಂಗಿ, ಟಾರ್ಚ್ ಮತ್ತು ಚಪ್ಪಲಿ ಪತ್ತೆಯಾಯಿತು.
ಬಾವಿ ಹಾರಿರಬಹುದೆಂಬ ಶಂಕೆಯಿಂದ ಸ್ಥಳೀಯರು ಬಾವಿಗೆ ದೋಟಿ ಇಳಿಸಿ ಶೋಧ ನಡೆಸಿದಾಗ ಶವ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.