ಪಂಜ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜಹೋಬಳಿ ಘಟಕದ ವತಿಯಿಂದ ಸ್ವಾತಂತ್ರ್ಯ ನಂತರ ನಾಡಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯರ ಸಂಸ್ಮರಣೆ ಕಾರ್ಯಕ್ರಮವು ಆ.15 ರಂದು ಹೋಬಳಿ ಘಟಕದ ಅಧ್ಯಕ್ಷರಾದ ಬಾಬುಗೌಡ ಅಚ್ರಪ್ಪಾಡಿಯವರ ಅಧ್ಯಕ್ಷತೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಸುಳ್ಯ ತಾಲೂಕು ಕ.ಸಾ.ಪ.ಅಧ್ಯಕ್ಷರಾದ ಚಂದ್ರಶೇಖರ ಪೇರಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ” ಈ ನಾಡು.ನುಡಿ.ಮಣ್ಣಿಗಾಗಿ ದುಡಿದವರನ್ನು ಸ್ಮರಿಸುವುದು ಉತ್ತಮ ಕಾರ್ಯ. ನಮ್ಮಮುಂದಿನ ಬದುಕು ಕಟ್ಟಲು ಅವರು ನಮಗೆ ಪ್ರೇರಣೆ ಅದು ಪಾರಂಪರಿಕವಾಗಿ ಬೆಳೆಯಲಿ” ಎಂದರು. ಕಾರ್ಯಕ್ರಮದಲ್ಲಿ ಅವಿಭಜಿತ ಪುತ್ತೂರು ತಾಲೂಕು ಮಾಜಿ ಶಾಸಕ ದಿ! ಕೂಜುಗೋಡು ವೆಂಕಟ್ರಮಣ ಗೌಡ, ಸುಳ್ಯತಾಲೂಕು ಬೋರ್ಡ್ ಇದರ ಮಾಜಿ ಅಧ್ಯಕ್ಷ ದಿ!ಜಾಕೆ ಪರಮೇಶ್ವರ ಗೌಡ.ಹಿರಿಯ ಧುರೀಣರಾದ ದಿ!ಕೇನ್ಯ ಸುಬ್ಬಯ್ಯ ಶೆಟ್ಟಿ, ಸುಳ್ಯ ತಾಲೂಕು ಬೋರ್ಡ್ ಇದರ ಮಾಜಿ ಅಧ್ಯಕ್ಷ ದಿ! ಮುಂಡೋಡಿ ಬೆಳ್ಯಪ್ಪ ಗೌಡ ಇವರುಗಳನ್ನು ಸ್ಮರಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ಪ್ರಭಾಕರ ಕಿರಿಭಾಗ, ಹಿರಿಯ ಸಹಕಾರಿ ಧುರೀಣ ಪಿ. ಸಿ. ಜಯರಾಮ, ಮುಖ್ಯ ಶಿಕ್ಷಕ ಯಶವಂತ ರೈ, ಆರಾಧನಾ ಸಮಿತಿಯ ಅಧ್ಯಕ್ಷ ಸವಿತಾರ ಮುಡೂರು ಇವರುಗಳು ಹಿರಿಯರ ಬಗ್ಗೆ ಸಂಸ್ಮರಣೆ ಮಾಡಿದರು. ಸಮಾರಂಭದ ವೇದಿಕೆಯಲ್ಲಿ ಸುಳ್ಯತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಮಾದವಗೌಡ ಜಾಕೆ, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಸಂಚಾಲಕರಾದ ಸೀತಾರಾಮ ರೈ,ಪ್ರಗತಿಪರ ಕೃಷಿಕ ಕೆ.ವಿ.ಸುಧೀರ್ ಕೂಜುಗೋಡು ಕಟ್ಟೆಮನೆ,ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪೂರ್ವಾಧ್ಯಕ್ಷರಾದ ನಿತ್ಯಾನಂದ ಮುಂಡೋಡಿ,ಕೇನ್ಯ ರವೀಂದ್ರನಾಥ ಶೆಟ್ಟಿ, ಜಿ .ಪಂ.ಮಾಜಿ ಸದಸ್ಯಭರತ್ ಮುಂಂಡೋಡಿ.ಪ್ರಾಂಶುಪಾಲರಾದ ವೆಂಕಪ್ಪ ಗೌಡ ಕೇನಾಜೆ.ಮುಖ್ಯ ಶಿಕ್ಷಕ ದೇವಿಪ್ರಸಾದ್ ಉಪಸ್ಥಿತರಿದ್ದರು.ಘಟಕದ ಅಧ್ಯಕ್ಷರಾದ ಬಾಬುಗೌಡ ಅಚ್ರಪ್ಪಾಡಿ ಎಲ್ಲರನ್ನು ಸ್ವಾಗತಿಸಿ ಸಂಘಟನಾಕಾರ್ಯದರ್ಶಿ ಕುಶಾಲಪ್ಪ ತುಂಬತ್ತಜೆ ವಂದಿಸಿದರು.ಉಪನ್ಯಾಸಕರಾದ ಉಮೇಶ್ ಹಾಗೂ ಲತಾಶ್ರೀ ಕಾರ್ಯಕ್ರಮ ನಿರೂಪಿಸಿದರು.
- Saturday
- November 23rd, 2024