ಯುವಕ ಮಂಡಲ (ರಿ ) ಚೊಕ್ಕಾಡಿ ಮತ್ತು ಮಯೂರಿ ಯುವತಿ ಮಂಡಲ(ರಿ) ಚೊಕ್ಕಾಡಿ ಗಳ ಜಂಟಿ ಆಶ್ರಯದಲ್ಲಿ ಕೆಸರುಡೊಂಜಿ ದಿನ 2024 ಕೆಸರುಗದ್ದೆ ಕ್ರೀಡಾಕೂಟವು ಅಮರಮಡ್ನೂರು ಗ್ರಾಮದ ಚೆನ್ನಪರಿ ಎಂಬಲ್ಲಿಯ ಅಚ್ಚಿಪಳ್ಳ ಗದ್ದೆಯಲ್ಲಿ ಇತ್ತೀಚೆಗೆ ಅತ್ಯಂತ ಸಂಭ್ರಮದಿಂದ ಜರುಗಿತು.
ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಆಟೋಟ ಸ್ಪರ್ಧೆಗಳು, ಗುಂಪು ಆಟಗಳು ಮತ್ತು ವಿವಿಧ ಮನೋರಂಜನಾ ಆಟಗಳು ನಡೆದವು.
ಚೊಕ್ಕಾಡಿ ಉಳ್ಳಾ ಕುಲು ಯಾನೆ ನಾಯರ್ ದೈವಸ್ಥಾನ ನಾಯರ್ ಪೂಜಾರಿಗಳು ಕುಸುಮಧರ ಕೊಳಂಬೆಯವರ ದಿವ್ಯ ಹಸ್ತದಿಂದ ದೀಪಾ ಪ್ರಜ್ವಲನೆಯೊಂದಿಗೆ ಉದ್ಘಾಟನಾ ಸಮಾರಂಭ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಕು. ಸ್ವಾತಿ ಪದವು ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶಿವಪ್ರಸಾದ್ ಅಡ್ಪಂಗಾಯ ಗುರುಸ್ವಾಮಿ, ಧರ್ಮದರ್ಶಿಗಳು ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿದಾನ, ಯುವಜನಾ ಸಂಯುಕ್ತ ಮಂಡಳಿಯ ಗೌರವಾಧ್ಯಕ್ಷರು ತೇಜಸ್ವಿ ಕಡಪಲ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಮುಖ್ಯ ಶಿಕ್ಷಕರಾದ ಶ್ರೀ ಸಂಕಿರ್ಣ ಚೊಕ್ಕಾಡಿ, ಉಪಸ್ಥಿತರಾಗಿ ಶ್ರೀಧರ ಕರ್ಮಾಜೆ ಸ್ಥಾಪಕಾಧ್ಯಕ್ಷರು ಗರುಡ ಯುವಕ ಮಂಡಲ (ರಿ) ಚೊಕ್ಕಾಡಿ ಮತ್ತು ಗದ್ದೆಯ ಮಾಲಕರಾದ ಶ್ರೀಮತಿ ಬೊಳಿಯಮ್ಮ ಅಚ್ಚಿಪಳ್ಳ ಇವರು ಉಪಸ್ಥಿತರಿದ್ದರು.
ಶಿವಪ್ರಸಾದ್ ಅಡ್ಪಂಗಾಯರವರು ಮಾತನಾಡಿ ಚೊಕ್ಕಾಡಿಯ ಯುವಕ-ಯುವತಿ ಮಂಡಲಗಳು ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಯುವಕ ಯುವತಿ ಮಂಡಲಗಳು ಕ್ರಿಯಾಶೀಲವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ ಯುವ ಜನತೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸಮಾಜದ ಸ್ವಾಸ್ಥ್ಯ ಕಾಪಾಡಲು ನೆರವಾಗುತ್ತದೆ ಎಂದರು.
ಶ್ರೀ ಸಂಕೀರ್ಣ ಚೊಕ್ಕಾಡಿರವರು ಮಾತನಾಡಿ ನಮ್ಮ ಊರಿನಲ್ಲಿ ಕೆಲವೇ ಕೆಲವು ಗದ್ದೆಗಳು ಉಳಿದುಕೊಂಡಿವೆ. ಅವುಗಳನ್ನು ಉಳಿಸಿಕೊಂಡು ಮುಂದಿನ ಜನಾಂಗಕ್ಕೆ ನಮ್ಮ ತುಳುನಾಡಿನ ಶ್ರೀಮಂತ ಜಾನಪದವನ್ನು ಪರಿಚಯಿಸುವ ಕಾರ್ಯವಾಗಬೇಕು ಕ್ರೀಡೆಯ ಜೊತೆಗೆ ವ್ಯವಸಾಯದ ಬಗ್ಗೆ ಅರಿವು ಮೂಡಿಸುವ ರಸಪ್ರಶ್ನೆಯಂತಹ ಕಾರ್ಯಕ್ರಮಗಳು ನಡೆಯಬೇಕು ಎಂದರು.
ತೇಜಸ್ವಿ ಕಡಪಳರವರು ಗರುಡ ಯುವಕ ಮಂಡಲ ಮತ್ತು ಮಯೂರಿ ಯುವತಿ ಮಂಡಲಗಳ ಸಾಮಾಜಿಕ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗರುಡ ಯುವಕ ಮಂಡಲದ ಗೌರವಾಧ್ಯಕ್ಷ ಮನೋಜ್ ಪಡ್ಪುರವರು ಸ್ವಾಗತಿಸಿ, ಶ್ರೀಮತಿ ಉಷಾಲತಾ ಪಡ್ಪು ವಂದನಾರ್ಪಣೆಗೈದರು.
ಸಂಜೆ ಸಭಾಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು. ಗರುಡ ಯುವಕ ಮಂಡಲದ ಅಧ್ಯಕ್ಷರಾದ ಯತಿನ್ ಕೊಳಂಬೆರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಸಿದರು, ಮುಖ್ಯ ಅತಿಥಿಗಳಾಗಿ ರಜನಿಕಾಂತ್ ಉಮ್ಮಡ್ಕ, ವ್ಯವಸ್ತಾಪಕರು “ಬೆಳಕು” ವಿಕಲಚೇತನರ ತಂತ್ರಜ್ಞಾನ ಕಚೇರಿ ಸುಳ್ಯ, ಶ್ರೀಧರ ಕರ್ಮಾಜೆ ಸ್ಥಾಪಕಧ್ಯಕ್ಷರು, ಗರುಡ ಯುವಕ ಮಂಡಲ ಚೊಕ್ಕಾಡಿ, ಶ್ರೀಮತಿ ಉಷಾಲತಾ ಪಡ್ಪು ಸ್ಥಾಪಕಾಧ್ಯಕ್ಷರು ಮಯೂರಿ ಯುವತಿ ಮಂಡಲ ಚೊಕ್ಕಾಡಿ ಹಾಗೂ ಯತೀಶ್ ಪೂಮಲೆ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಅಗ್ನಿಪಥ್ ಗೆ ಆಯ್ಕೆಯಾದ ಜಿತೇಶ್ ಡಿ ಯವರ ಹೆತ್ತವರು ಮತ್ತು 10 ನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ನಿರೀಕ್ಷಾ ಪಡ್ಪು, ರೇಣುಕಾ ಏನ್, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕು. ಸ್ವಾತಿ ಪದವು ರವರು ಸ್ವಾಗತಿಸಿ, ಶರಣ್ ಕರ್ಮಾಜೆ ಯವರು ವಂದಿಸಿದರು. ಜಯರಾಮ ಚೆನ್ನಮಲೆ ಯವರು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನವನ್ನು ಪ್ರಯೋಜಿಸಿದರು. ಇಡೀ ದಿನದ ಕಾರ್ಯಕ್ರಮವನ್ನು ನವೀನ್ ಬಾಂಜಿಕೋಡಿ ಮತ್ತು ಪ್ರಸಾದ್ ಕಾಟೂರ್ ರವರು ನಿರೂಪಿಸಿ ನಡೆಸಿಕೊಟ್ಟರು.