ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಆಟಿ 2024ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು. ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಸಲಹೆಗಾರರಾದ ಪ್ರೊ ಕೆ.ವಿ.ದಾಮೋದರ ಗೌಡ ಅವರು ದೀಪ ಬೆಳಗಿಸಿ,ಉದ್ಘಾಟನೆ ನೆರವೇರಿಸಿದರು .ಹಾಗೂ ಅತಿಥಿಯಾಗಿ ಆಗಮಿಸಿದ್ದ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಶೋಭಾ ಚಿದಾನಂದ ಅವರು ಹಿಂಗಾರ ಅರಳಿಸಿದರು. ಅತಿಥಿಗಳು ಚೆನ್ನಮಣೆ ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು., ಆಡಳಿತ ಮಂಡಳಿಯ ಕಾರ್ಯದರ್ಶಿ ಹೇಮನಾಥ್ ಕೆ.ವಿ., ಗವರ್ನಿಂಗ್ ಕೌನ್ಸಿಲ್ ಸದಸ್ಯರು ಹಾಗೂ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ್ ಅಡ್ತಲೆ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆಸಿ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ನೀಲಾoಬಿಕಾಯ್ ನಟರಾಜನ್, ಎನ್ನೆoಸಿ ಪ್ರಾಚಾರ್ಯರು ಡಾ ರುದ್ರ ಕುಮಾರ್ ಎಂ ಎಂ, ಪಪೂ ವಿಭಾಗದ ಪ್ರಾಚಾರ್ಯರಾದ ಮಿಥಾಲಿ ಪಿ ರೈ,ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ ಸಂದೇಶ್ ರೈ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಎಚ್ ಆರ್ ಡಿಪಾರ್ಟ್ಮೆಂಟ್ ಮುಖ್ಯಸ್ಥ ಶಿವಪ್ರಸಾದ್ ಹಾಗೂ ಪಿಯು ವಿಭಾಗದ ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ, ಬೋಧಕ, ಬೋಧಕೇತರ ವೃಂದ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಬಿ ಎಸ್ ಡಬ್ಲ್ಯೂ ವಿಭಾಗದ ಮುಖ್ಯಸ್ಥೆ ಕೃಪಾ, ಉಪನ್ಯಾಸಕಿ ಶೋಭಾ ತೀರ್ಪುಗಾರರಾಗಿ ಆಗಮಿಸಿದ್ದರು. ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ವಿದ್ಯಾರ್ಥಿಗಳ 4ಹೌಸ್ ಗಳಿಗೆ ನಡೆದ ಸ್ಪರ್ಧೆಗಳಲ್ಲಿ ಹಳೆಯ ಉಪಕರಣ,ಜಾನಪದ ನೃತ್ಯ, ಆಟಿ ಖಾದ್ಯಗಳು,ಉಪಯುಕ್ತ ಸಸ್ಯಗಳನ್ನು ಇನ್ನೂ ಅನೇಕ ವೈಶಿಷ್ಟತೆಗಳನ್ನು ಪ್ರದರ್ಶಿಸಲಾಯಿತು.ಕಾರ್ಯಕ್ರಮ ಅರ್ಥ ಪೂರ್ಣವಾಗಿ ಮೂಡಿ ಸಂಭ್ರಮದಿಂದ ನಡೆಯಿತು.
- Saturday
- November 23rd, 2024