ಯಾದವ ಸಭಾ ಬೆಟ್ಟ ಪ್ರಾದೇಶಿಕ ಸಮಿತಿ ಇದರ ಆಶ್ರಯದಲ್ಲಿ ಸಾರ್ವಜನಿಕರಿಗೆ ಎರಡನೇ ವರ್ಷದ ‘ಆಟಿಡೊಂಜಿ ದಿನ ಹಾಗೂ ಗ್ರಾಮೀಣ ಕ್ರೀಡಾಕೂಟ ಆ. 11ರಂದು ಬೊಳ್ಳಾಜೆ ಶಾಲಾ ವಠಾರಲ್ಲಿ ನಡೆಯಿತು. ಮಂಗಳೂರಿನ ಖ್ಯಾತ ವೈದ್ಯರಾದ ಡಾ| ಶ್ರೀರಾಮ ಭಟ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಯಾದವ ಸಭಾ ಬೆಟ್ಟ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಕಿಲಾರ್ಕಜೆ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಶ್ರೀಮತಿ ಶ್ಯಾಮಲ ಎ.ವಿ. ವಿವೃತ್ತ ಮುಖ್ಯೋಪಾಧ್ಯಾಯರು ಬೊಳ್ಳಾಜೆ, ಶ್ರೀಮತಿ ಗೀತಾ ಶ್ರೀರಾಮ್ ಪ್ರಸೂತಿ ತಜ್ಞರು ಮಂಗಳೂರು. ಸೀತಾರಾಮ ಮುಖ್ಯೋಪಾಧ್ಯಾಯರು ಚೊಳ್ಳಾಜೆ ಶಾಲೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಉಪಸ್ಥಿತರಿದ್ದರು. ಶ್ರೀಮತಿ ಸುಮಿತ್ರಾ ಕಿಲಾರ್ಕಜೆ ಅಧ್ಯಕ್ಷರು ಯಾದವ ಮಹಿಳಾ ವೇದಿಕೆ ಬೆಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕು.ಗಾನವಿ ಮತ್ತು ಕು ಮಾನ್ವಿ ಪ್ರಾರ್ಥನೆ ಹಾಡಿದರು. ಶ್ರೀಮತಿ ಸವಿತಾ ಕಿಲಾರ್ಕಜೆ ಜತೆ ಕಾರ್ಯದರ್ಶಿ ಮಹಿಳಾ ವೇದಿಕೆ ಬೆಟ್ಟ ಅವರು ಸ್ವಾಗತಿಸಿ, ಪ್ರಮೋದ ಬೊಳ್ಳಾಜೆ ವಂದಿಸಿದರು. ಜಯರಾಮ ಹೈದಂಗೂರು ಕಾರ್ಯಕ್ರಮ ನಿರೂಪಿಸಿದರು. ಅಂಗನದಾಡಿ ಮಕ್ಕಳಿಗೆ, ಶಾಲಾ ಮಕ್ಕಳಿಗೆ, ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ನಿಧಿ ಶೋಧನೆ ಎಂಬ ವಿಶೇಷ ಸ್ಪರ್ಧೆಯನ್ನು ಎರ್ಪಡಿಸಲಾಗಿತ್ತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯಾದವ ಸಭಾ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ವಹಿಸಿ, ಕಾರ್ಯಕ್ರಮದ ಬಗ್ಗೆ ಶುಭಹಾರೈಸಿದರು ವೇದಿಕೆಯಲ್ಲಿ ರಾಜರಾಮ ಬೆಟ್ಟ ಸದಸ್ಯರು, ಭೂನ್ಯಾಯ ಮಂಡಳಿ ಸುಳ್ಯ ತಾಲೂಕು, ಉಮೇಶ ಇಂತಿಕಲ್ಲು ನಿವೃತ್ತ ಯೋಧ, , ರಾಜೇಶ್ ಬೇರಿಕೆ ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ, ಶ್ರೀಮತಿ ಸುಮಿತ್ರಾ ಕಿಲಾರ್ಕಜೆ ಉಪಸ್ಥಿತರಿದ್ದರು.. ಕು. ಮಾನ್ವಿ ಮತ್ತು ಈ ಗಾನವಿ ಪ್ರಾರ್ಥಿಸಿ, ಅಶೋಕ ಕಿಲಾರ್ಕಜೆ ಸ್ವಾಗತಿಸಿ, ಶ್ರೀಮತಿ ಸವಿತಾ ಕಿಲಾರ್ಕಜೆ ವಂದಿಸಿದರು.