Ad Widget

ಮೊಗೇರ ಯುವ ವೇದಿಕೆ ವತಿಯಿಂದ ಟಿ.ಎಂ ಶಹೀದ್ ತೆಕ್ಕಿಲ್ ರವರಿಗೆ ಸನ್ಮಾನ

ಆ.11 ರಂದು ಅರಂತೋಡು- ಸಂಪಾಜೆ ಮೊಗೇರ ಯುವ ವೇದಿಕೆ ವಲಯ ಸಮಿತಿ ವತಿಯಿಂದ ನಡೆದ ಆಟಿ ಸಂಭ್ರಮ ಹಾಗೂ ಅಭಿನಂಧನಾ ಕಾರ್ಯಕ್ರಮದಲ್ಲಿ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರನ್ನು ಖ್ಯಾತ ಕ್ಯಾನ್ಸರ್ ತಜ್ಞ ಡಾ| ರಘು ಶಾಲು ಹೊದಿಸಿ ಪೇಟ ತೊಡಿಸಿ ಹಣ್ಣು-ಹಂಪಲುದೊಂದಿಗೆ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಟಿ.ಎಂ ಶಹೀದ್ ತೆಕ್ಕಿಲ್ ರವರು ಮೊಗೇರ ಸಮುದಾಯದ ಯುವಕರು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಮುಂದೆ ಬರಬೇಕು,ನಮ್ಮಲ್ಲಿ ಯಾವ ಭೇದ ಭಾವ ಇರಬಾರದು ನಾವೆಲ್ಲರೂ ಒಂದಾಗಿ ಬಾಳಬೇಕು, ಪರಸ್ಪರ ಸೌಹಾರ್ಧತೆಯಿಂದ ಸಹ ಬಾಳ್ವೆ ನಡೆಸಬೇಕೆಂದರು ತಮ್ಮ ಎಲ್ಲಾ ಕಾರ‍್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ. 80 ವರ್ಷದ ಹಿಂದೆ ಪೇರಡ್ಕದಲ್ಲಿ ಕೊರಗಜ್ಜ ಎಂಬ ಹಿರಿಯರು ಇದ್ದರು. ಅವರ ಕೈಯಿಂದ ನೆಟ್ಟ ಎಲ್ಲಾ ಗಿಡಗಳು ಫಲವತ್ತಾಗಿರುತ್ತದೆ, ಮತ್ತು ಸನ್ಮಾನವನ್ನು ಮಾಡಿದ ವೇದಿಕೆಯ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

. . . . .


ಅಧ್ಯಕ್ಷತೆಯನ್ನು ಯುವ ವೇದಿಕೆಯ ಅಧ್ಯಕ್ಷ ಕರುಣಾಕರ ಪಲ್ಲತಡ್ಕ ವಹಿಸಿದರು. ಗ್ರಾ.ಪಂ ಅಧ್ಯಕ್ಷ ಕೇಶವ ಅಡ್ತಲೆ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಲಕ್ಷ್ಮಣ ಪಾರೆ, ಕೇಶವ ಮಾಸ್ತರ್ ಡಾ| ಮಾಧವ ಪೆರಾಜೆ, ಲೋಕೇಶ್ ಪಲ್ಲತಡ್ಕ, ಪ್ರಕಾಶ್ ಬಂಗ್ಲೆಗುಡ್ಡೆ, ದೈವ ಆರಾಧಕ ಬಾಬು ಪಚ್ಲಂಪಾರೆ, ಕೊಡಗು ಮುಗೇರ ಸಂಗದ ಜಿಲ್ಲಾಧ್ಯಕ್ಷ ರವಿ ಪಿ.ಎಂ, ಗ್ರಾ. ಪಂ. ಸದಸ್ಯ ಶಶಿಧರ ದೊಡ್ಡಕುಮೇರಿ, ಮಹೇಶ್ ಬಂಗ್ಲೆಗುಡ್ಡೆ, ದೇವಪ್ಪ ಹೈದಂಗೂರು, ಹರ್ಷಿತ್ ದಂಡೆಕಜೆ, ವಲಯ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಅಡ್ಕಬಳೆ, ಚಿದಾನಂದ ಕಟ್ಟಕೋಡಿ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!