ಸುಬ್ರಹ್ಮಣ್ಯ ಆಗಸ್ಟ್ 8 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಗುರುವಾರ ನಡೆದ ಸಪ್ತಾಹಿಕ ಸಭೆಯಲ್ಲಿ ಹಣ್ಣುಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಯಿತು. ಪಂಜ ಸಾನಿಕ ಫಾರಂ ಮಾಲಕರು ಪಂಚಶ್ರೀ ಜಿಸಿಐನ ಪೂರ್ವಾಧ್ಯಕ್ಷರಾದ ದಯಾಪ್ರಸಾದ ಚಿಮುಳ್ಳು ಅವರು ವಿವಿಧ ಜಾತಿಯ ತಿನ್ನುವ ಹಣ್ಣುಗಳು ಗಿಡಗಳನ್ನ ನೆಡುವ ಬಗ್ಗೆ ಫಲ ಕೊಡುವ ಬಗ್ಗೆ ಅದನ್ನ ಪೋಷಿಸುವ ಬೆಳೆಸುವ ಬಗ್ಗೆ ಸಚಿತ್ರವಾದ ಮಾಹಿತಿಗಳನ್ನು ನೀಡಿದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ನಾಯರ್ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜೊನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಚಿದಾನಂದ ಕುಳ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷರುಗಳಾದ ಕಿಶೋರ್ ಕುಮಾರ್ ಕೂಜುಗೋಡು, ಶಿವರಾಮ ಎನೆಕಲ್, ರಾಮಕೃಷ್ಣ ಮಲ್ಲಾರ, ಗಿರಿಧರ ಸ್ಕಂದ ,ಭರತ್ ನೆಕ್ರಾಜೆ, ಗೋಪಾಲ್ ಎಣ್ಣೆ ಮಜಲ್ ಹಾಗೂ ಸದಸ್ಯರುಗಳಾದ ರವಿ ಕಕ್ಕೆಪದವು, ದಿನೇಶ್ ಎಣ್ಣೆಮಜಲ್, ಭವಾನಿ ಶಂಕರ ಪೈಲಾಜೆ ಹಾಜರಿದ್ದು ವಿವಿಧ ಪ್ರಶ್ನೆಗಳೊಂದಿಗೆ ಮಾಹಿತಿದಾರರಿಂದ ಉತ್ತರಗಳನ್ನ ಪಡೆದರು. ಇದೇ ಸಂದರ್ಭದಲ್ಲಿ ತರಬೇತುದಾರ ದಯಪ್ರಸಾದ ಚೀಮುಳ್ಳು ಅವರನ್ನು ರೋಟರಿ ಕ್ಲಬ್ ವತಿಯಿಂದ ಗೌರವಿಸಲಾಯಿತು.