ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಸಭೆಯನ್ನು ತಾಲೂಕು ಭಜನಾ ಪರಿಷತ್ ನ ಅಧ್ಯಕ್ಷರಾದ ಯತೀಶ್ ರೈ ದುಗಲಡ್ಕರವರು ದೀಪ ಬೆಳಗಿಸುವ ಮುಖೇನ ಚಾಲನೆಯನ್ನು ನೀಡಿದರು.
ಸುಳ್ಯ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯವರಾದ ಶ್ರೀ ಮಾಧವ ಗೌಡರವರು ಮಾತನಾಡುತ್ತ, ವಲಯ ಮಟ್ಟದಲ್ಲಿ ಮಕ್ಕಳಿಗೆ ಭಜನಾ ತರಬೇತಿಯನ್ನು ನೀಡಬೇಕು. ಮಕ್ಕಳಿಗೆ ಸಣ್ಣದಿರುವಾಗಲೇ ಸಂಸ್ಕೃತಿ, ಸಂಸ್ಕಾರವನ್ನು ಭಜನೆಯ ಮುಖೇನ ಕಲಿಸಬೇಕು. ವಲಯ ಮಟ್ಟದ ಭಜನಾ ಪರಿಷತ್ ನ ಸಭೆಗಳನ್ನು ನಡೆಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆಗಸ್ಟ್ ತಿಂಗಳ ಅಂತ್ಯದೊಳಗೆ ಮಾಡಬೇಕು. ಪ್ರಸ್ತುತ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟಕ್ಕೆ ತಾಲೂಕಿನ ಪ್ರತಿ ವಲಯದಿಂದ ಒಂದು ಭಜನಾ ಮಂಡಳಿಯಿಂದ 2 ಮಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸಿ ಕೊಡಬೇಕು. ಭಜನಾ ಮಂಗಲೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಭಜನಾ ಮಂಡಳಿಗಳ ಭಾಜಕರು ಭಾಗವಹಿಸಬೇಕು. ಪ್ರಸ್ತುತ ವರ್ಷದಲ್ಲಿ ಈ ಸಲ ಸಂಪಾಜೆ ವಲಯದಲ್ಲಿ ತಾಲೂಕು ಮಟ್ಟದ ಭಜನೋತ್ಸವ ಕಾರ್ಯಕ್ರಮ ನಡೆಯಲಿದ್ದು, ತಾಲೂಕಿನ ಎಲ್ಲಾ ಭಜನಾ ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಪುತ್ಯರವರು, ತಾಲೂಕು ಭಜನಾ ಪರಿಷತ್ ನ ಸ್ಥಾಪಕ ಅಧ್ಯಕ್ಷರಾದ ಶ್ರೀ ವಿಶ್ವನಾಥ ರೈ ಅರುಗುಡಿಯವರು, ತಾಲೂಕು ಭಜನಾ ಪರಿಷತ್ ನ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ ತೋಟ ಬೆಳ್ಳಿಪ್ಪಾಡಿರವರು, ತಾಲೂಕು ಭಜನಾ ಪರಿಷತ್ ನ ಕಾರ್ಯದರ್ಶಿಯವರಾದ ಶ್ರೀ ಸತೀಶ್ ಟಿ ಎನ್ ರವರು, ತಾಲೂಕು ಭಜನಾ ಪರಿಷತ್ ನ ಕೋಶಾಧಿಕಾರಿಯವರಾದ ಶ್ರೀ ಮಹೇಶ್ ಮೇಲ್ಕಜೆರವರು ಉಪಸ್ಥಿತರಿದ್ದರು.
ಈ ಸಭಾ ಕಾರ್ಯಕ್ರಮದಲ್ಲಿ ತಾಲೂಕಿನ ಭಜನಾ ಪರಿಷತ್ ನ ನಿರ್ದೇಶಕರುಗಳು, ವಲಯ ಭಜನಾ ಪರಿಷತ್ ನ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕಿನ ಭಜನಾ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರುಗಳು, ಎಲ್ಲಾ ವಲಯಗಳ ಮೇಲ್ವಿಚಾರಕರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಜಾಲ್ಸೂರು ವಲಯದ ಮೇಲ್ವಿಚಾರಕರಾದ ತೀರ್ಥರಾಮರವರು ಸ್ವಾಗತಿಸಿದರು. ನಿಂತಿಕಲ್ಲು ವಲಯದ ಮೇಲ್ವಿಚಾರಕರಾದ ಹೇಮಲತಾರವರು ಧನ್ಯವಾದವಿತ್ತರು. ಗುತ್ತಿಗಾರು ವಲಯದ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಕಾರ್ಯನಿರೂಪಿಸಿದರು.
- Wednesday
- December 4th, 2024