Ad Widget

ಜಟ್ಟಿಪಳ್ಳ ಆಟಿಡೊಂಜಿ ದಿನ ಆಚರಣೆ



ಜಟ್ಟಿಪಳ್ಳ ಮಾನಸ ಮಹಿಳಾ ಮಂಡಲ (ರಿ) ಜಟ್ಟಿಪಳ್ಳ ಮತ್ತು ಕಪಿಲ ಯುವಕ ಮಂಡಲದ ಜ0ಟಿ ಆಶ್ರಯದಲ್ಲಿ ಆಟಿಡೊಂಜಿ ದಿನ
ಆಚರಣೆಯು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಯುವಸದನದಲ್ಲಿ ಜುಲೈ4 ರ0ದು
ಜರುಗಿತು.ಸಮಾರ0ಭವನ್ನು ಶ್ರೀಮತಿ ಶಾರದಾ ದಿವಾಕರ್ ರಾವ್ ಅವರು ಚೆನ್ನೆ ಮಣೆ ಆಡುವುದರ ಮೂಲಕ ಉದ್ಘಾಟಿಸಿ, ಆಟಿ
ಆಚರಣೆಯ ವಿಶೇಷತೆ ಬಗ್ಗೆ ತಿಳಿಸಿ ಶುಭ ಹಾರೈಸಿದರು. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಪೂರ್ವಾಧ್ಯಕ್ಷರಾದ ಶ್ರೀಮತಿ
ಹರಿಣಿ ಸದಾಶಿವ ರವರು ಆಟಿ ಆಚರಣೆಯ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿ ಆಟಿ ಆಚರಣೆಯ ವೈಜ್ನಾನಿಕ ಕಾರಣಗಳನ್ನು ತಿಳಿಸಿದರು. ಅಲ್ಲದೆ ಕೆಲವೊ0ದು ಆಚಾರ ವಿಚಾರಗಳ ಮಹತ್ವವನ್ನು ಮು0ದಿನ ಪೀಳಿಗೆಯವರು
ಅರಿಯುವುದರ ಮಹತ್ವವನ್ನು ತಿಳಿಸಿದರು. ಯುವಕ ಮ0ಡಲದ ಅಧ್ಯಕ್ಷ ಹರೀಶ್ ಜಟ್ಟಿಪಳ್ಳ ಮುಖ್ಯ ಅತಿಥಿಯಾಗಿ
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸ0ದರ್ಭದಲ್ಲಿ ಸಮಾಜ
ಸೇವಕರೂ, ಜಿಲ್ಲಾ ಮಹಿಳಾ ಮ0ಡಲಗಳ ಒಕ್ಕೂಟದ ಪೂರ್ವಾಧ್ಯಕ್ಷರಾದ ಶ್ರೀಮತಿ ಹರಿಣಿ ಸದಾಶಿವ ರವರನ್ನು ಮಹಿಳಾ
ಮ0ಡಲದ ವತಿಯಿ0ದ ಗೌರವಿಸಲಾಯಿತು.
ಗೌರವಾಧ್ಯಕ್ಷೆ ಶ್ರೀಮತಿ ಚ0ದ್ರಾಕ್ಷಿ ಜೆ ರೈ ಸ್ವಾಗತಿಸಿ,
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾರ್ಯಕ್ರಮದಲ್ಲಿ
ಕಾರ್ಯದರ್ಶಿ ಶ್ರೀಮತಿ ಅನನ್ಯ ಅನಿಲ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಿಹಬ್ಬ ಆಚರಣಾ ಸಮಿತಿ ಕಾರ್ಯದರ್ಶಿ ಸುನೀತಾ
ರಾಮಚ0ದ್ರ ವ0ದಿಸಿದರು. ಶ್ರೀಮತಿ ಸವಿತ ಲಕ್ಷ್ಮಣ್ ಮತ್ತು ಶ್ರೀಮತಿ ರ0ಜಿನಿ ಸ0ಜೀವ ಪ್ರಾರ್ಥಿಸಿದರು. ಆಟಿಯ ವಿಶೇಷ
ಆಕರ್ಷಣೆಯಾಗಿ ಶ್ರೀ ಮಾಯಿಲ ಅಜಿಲ ಮತ್ತು ತ0ಡದವರಿ0ದ ಆಟಿ ಕಳ0ಜ ಪ್ರದರ್ಶನಗೊ0ಡಿತು. ಆಟಿಯ ಒಳಾ0ಗಣ ಆಟಗಳಾದ ಚೆನ್ನೆಮಣೆ, ಕಲ್ಲಾಟ ಮತ್ತು ಕವಡೆ ಆಟ ಸ್ಪರ್ಧೆಗಳು ನಡೆದವು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading