ಅಜ್ಜಾವರ : ಅಜ್ಜಾವರ ಗ್ರಾಮದ ಸ.ಹಿ ಪ್ರಾ ಶಾಲೆ ಅಜ್ಜಾವರ ಸುಮಾರು ನೂರು ವರ್ಷಗಳ ಇತಿಹಾಸವನ್ನು ಕಂಡಿದ್ದು ಸುಮಾರು ನಾಲ್ಕು ಸಾವಿರಕ್ಕು ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿ ಇದೀಗ ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿದೆ. ಆ.05 ರಂದು ನಡೆದ ಪೋಷಕರ ಸಭೆಯಲ್ಲಿ ನೂತನ ಎಸ್.ಡಿ.ಎಂ.ಸಿ.ರಚಿಸಲಾಯಿತು.
ನೂತನ ಸಮಿತಿ ಅಧ್ಯಕ್ಷರಾಗಿ ಪುಷ್ಪ ಕರ್ಲಪ್ಪಾಡಿ , ಉಪಾಧ್ಯಕ್ಷರಾಗಿ ಶರೀಫ್ ಪಿ ಎ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ರಾಜು , ಪದ್ಮ , ಸರೋಜಿನಿ , ನಮಿತ , ರೋಹಿಣಿ , ಅಬ್ದಲ್ಲ ಎ , ಹನೀಫ್ , ಬಶೀರ್ , ನೆಸಿಯಾ , ಸಿಯಾಬು , ಲಲಿತ , ಮೋಹಿನಿ ಕೆ , ಸುಗುಣ , ಸವಿತ , ಜಯಂತ ಆಯ್ಕೆಯಾದರು. ಒಟ್ಟು ಈ ಸಮಿತಿಯಲ್ಲಿ 24 ಮಂದಿ ಇರಲಿದ್ದು ಉಳಿದ ಸ್ಥಾನಗಳಿಗೆ ನಾಮನಿರ್ದೇಶನ ನಡೆಸಲಿದ್ದು ಗ್ರಾಮ ಪಂಚಾಯತ್ ಸ್ಥಳೀಯ ಸದಸ್ಯರು ಮತ್ತು ಶಾಲಾ ಮುಖ್ಯ ಶಿಕ್ಷಕಿ ಹಾಗೂ ವಿದ್ಯಾರ್ಥಿ ನಾಯಕ ಸೇರ್ಪಡೆಯಾಗಲಿದ್ದು ಇನ್ನುಳಿದ ಸ್ಥಾನಗಳಿಗೆ ಶಿಕ್ಷಣ ಇಲಾಖೆಯು ಅಂಗನಾಡಿ ಶಿಕ್ಷಕಿ , ಆಶಾ ಕಾರ್ಯಕರ್ತೆಯರನ್ನು ಸೇರ್ಪಡೆ ಗೊಳಿಸಲಿದ್ದಾರೆ. ಈ ಸಭೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೆಳ್ಯಪ್ಪ ಮುಡೂರು , ಸ್ಥಳದಾನಿಗಳಾದ ಬಾಸ್ಕರ ರಾವ್ ಬಯಂಬು , ಗ್ರಾ.ಪಂ ಸದಸ್ಯರಾದ ಶ್ವೇತ ಪುರುಷೋತ್ತಮ , ದಿವ್ಯ ಹಾಗೂ ಶಾಲಾ ಶಿಕ್ಷಕ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು.