ಪ್ರತಿಷ್ಠಿತ ಸುಳ್ಯ ವಕೀಲರ ಸಂಘದ ಆಡಳಿತ ಸಮಿತಿಯ ಅಧ್ಯಕ್ಷತೆಗೆ ಸುಕುಮಾರ ಕೋಡ್ತುಗುಳಿ ಹಾಗೂ ಭಾಸ್ಕರ್ ರಾವ್‌ರವರು ನಾಮಪತ್ರ ಸಲ್ಲಿಸಿದ್ದರು. ಭಾಸ್ಕರ್ ರಾವ್ ರವರು ನಾಮಪತ್ರ ಹಿಂಪಡೆದಿದ್ದರಿಂದ ಮುಂದಿನ ಎರಡು ವರ್ಷದ ಅವಧಿಗೆ ಅಧ್ಯಕ್ಷರಾಗಿ ಸುಕುಮಾರ್ ಕೋಡ್ತುಗುಳಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷತೆಗೆ ಮಾತ್ರ ಚುನಾವಣೆ : ಉಪಾಧ್ಯಕ್ಷತೆಯ ಸ್ಥಾನಕ್ಕೆ 4 ಮಂದಿ ವಕೀಲರು ನಾಮಪತ್ರ ಸಲ್ಲಿಸಿದ್ದರು. ಕಾರ್ಯದರ್ಶಿ ಸೇರಿದಂತೆ ಉಳಿದೆಲ್ಲಾ ಹುದ್ದೆಗಳಿಗೆ ಒಂದೊಂದೆ ನಾಮಪತ್ರ ಬಂದಿದ್ದರಿಂದ ಅವಿರೋಧ ಆಯ್ಕೆಯಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ದಿಲೀಪ್ ಬಾಬ್ಲುಬೆಟ್ಟು, ಚರಣ್ ರಾಜ್ ಕಾಯರ, ಪುಷ್ಪರಾಜ ಗಾಂಭೀರ್ ಹಾಗೂ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಸಿದ್ದರು. ಚರಣ್ ಕಾಯರ ನಾಮಪತ್ರ ವಾಪಸ್ ಪಡೆದು ಮೂರು ಮಂದಿ ವಕೀಲರು ಕಣದಲ್ಲಿದ್ದುದರಿಂದ ಚುನಾವಣೆಗೆ ನಿರ್ಧರಿಸಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದಿಲೀಪ್ ಬಾಬ್ಲುಬೆಟ್ಟು ಭರ್ಜರಿ ಗೆಲುವು ಆಯ್ಕೆಯಾದರು. ಪ್ರಧಾನ ಕಾರ್ಯ ದರ್ಶಿಯಾಗಿ ಜಗದೀಶ್ ಡಿ.ಪಿ., ಸಹ ಕಾರ್ಯದರ್ಶಿಯಾಗಿ ಕಾರ್ಯದರ್ಶಿಯಾಗಿ ಅನಿತಾ ಆರ್. ನಾಯಕ್, ಕೋಶಾಧಿಕಾರಿಯಾಗಿ ಹರ್ಷಿತ್ ಕಾರ್ಜ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಮ ಕೆ.ಎಸ್., ಕ್ರೀಡಾ ಕಾರ್ಯದರ್ಶಿಯಾಗಿ ಕುಸುಮಾಧರ ಕೆ.ಎಸ್., ಗ್ರಂಥಾಲಯ ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಖ್ಯ ಚುನಾವಣಾಧಿಕಾರಿಯಾಗಿ ಚಂದ್ರಶೇಖರ ನರಿಯೂರು ಹಾಗೂ ಸಹಾಯಕ ಚುನಾವಣಾಧಿಕಾರಿ ಹರೀಶ್ ಬೂಡುಪನ್ನೆ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.