Ad Widget

ಯೂತ್ ಕಾಂಗ್ರೆಸ್ ಗೆ ಚುನಾವಣಾ ಪ್ರಕ್ರಿಯೆ ಆರಂಭ : ರಾಜ್ಯ ಪ್ರ.ಕಾರ್ಯದರ್ಶಿಗೆ ಸುಳ್ಯದಿಂದ ಒಂದು ನಾಮಪತ್ರ – ಸುಳ್ಯ ಕ್ಷೇತ್ರಕ್ಕೆ ಮೂರು ನಾಮಪತ್ರ – ಸುಳ್ಯ ಬ್ಲಾಕ್ ಗೆ ಎರಡು ನಾಮಪತ್ರ

ಯೂತ್ ಕಾಂಗ್ರೆಸ್ ಹಾಲಿ ಪದಾಧಿಕಾರಿಗಳ ಅಧಿಕಾರಾವಧಿ ಮುಕ್ತಾಯಗೊಂಡಿದ್ದು ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ.ಈ ಬಾರಿ ಆನ್ ಲೈನ್ ಮೂಲಕ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆ ಅವಧಿ ಆ.2ರಂದು ಮುಕ್ತಾಯಗೊಂಡಿದೆ.

ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸುಳ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಶಾಹುಲ್ ಹಮೀದ್ ಕುತ್ತಮೊಟ್ಟೆ ನಾಮಪತ್ರ ಸಲ್ಲಿಸಿದ್ದಾರೆ, ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ರಂಜಿತ್ ರೈ ಮೇನಾಲ ಸುಳ್ಯ ಬ್ಲಾಕ್ ನಿಂದ ಹಾಗೂ ಕಡಬ ಬ್ಲಾಕ್ ನಿಂದ ಫೈಝಲ್ ಕಡಬ ಹಾಗೂ ಅಬ್ದುಲ್ ಸಿದ್ದೀಕ್ ಮುನೀರ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.

ಸುಳ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷತೆಗೆ ಚೇತನ್ ಕಜೆಗದ್ದೆ ಹಾಗೂ ಆಶಿಕ್ ಅರಂತೋಡು ನಾಮಪತ್ರ ಸಲ್ಲಿಸಿದ್ದಾರೆ.

ಈಗಾಗಲೇ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು ಆ.16ರಿಂದ ಸೆ.16 ರ ತನಕ ಚುನಾವಣೆ ನಡೆಯಲಿದೆ. ಯೂತ್ ಕಾಂಗ್ರೆಸ್ ಗೆ ಸದಸ್ಯತ್ವ ಅಭಿಯಾನ ಮಾಡುವುದರ ಜತೆಗೆ, ಪದಾಧಿಕಾರಿಗಳ ಆಯ್ಕೆಗೂ ಓಟಿಂಗ್ ಮಾಡುವ ಅವಕಾಶ ಈ ಬಾರಿ ಒದಗಿಸಲಾಗಿದೆ ಎಂದು ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!