Ad Widget

ಸುಳ್ಯ : ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಸಭೆ ,ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳಲು ಸೂಚನೆ

ಹಾನಿಯ ಪರಿಹಾರ ಬಾರದೇ ಇದ್ದಲ್ಲಿ ಶಾಸಕರ ಅನುದಾನ ನೀಡುತ್ತೇನೆ, ಸಾರ್ವಜನಿಕರಿಗೆ ತೊಂದರೆಯಾಗಬಾರದು – ಭಾಗೀರಥಿ ಮುರುಳ್ಯ

. . . . .

ಪ್ರತಿ ಗ್ರಾಮ ಪಂಚಾಯತ್ ಗಳಿಗೆ ಸರಕಾರದಿಂದ ತುರ್ತು ಪರಿಹಾರಕ್ಕೆ ಅನುದಾನ ಬಿಡುಗಡೆ – ರಾಜಣ್ಣ

ಸುಳ್ಯ: ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಯ ಸಭೆಯು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು .

ಸಭೆಯಲ್ಲಿ ಅಧಿಕಾರಿಗಳಿಂದ ಇಲಾಖಾವಾರು ಮಾಹಿತಿಗಳನ್ನು ಪಡೆದಿದ್ದು ಸರಕಾರದಿಂದ ಬಂದಿರುವ ಮತ್ತು ತುರ್ತು ದುರಸ್ತಿ ಪಡಿಸಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದರು. ತಾಲೂಕಿನ ಪ್ರತಿ ಶಾಲೆ , ಅಂಗನವಾಡಿ , ಅಕ್ಷರ ದಾಸೋಹ ಕಟ್ಟಡ ಸೇರಿದಂತೆ ಬರೆ ಕುಸಿತ ಮತ್ತು ವಿದ್ಯುತ್ ಕಂಬಗಳು ಸೇರಿದಂತೆ ಇತರೆ ಆಯಾ ಇಲಾಖೆಗಳು ಪ್ರತ್ಯೇಕವಾಗಿ ಪಟ್ಟಿಗಳನ್ನು ತಯಾರು ಪಡಿಸಿ ನೀಡಬೇಕು ಎಂದು ಸೂಚಿಸಿದರು . ಅಲ್ಲದೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಮಾತನಾಡಿ ಪ್ರತಿ ಗ್ರಾಮ ಪಂಚಾಯತ್ ಗಳಿಗೆ ತುರ್ತು ಪರಿಹಾರವಾಗಿ ಇಪ್ಪತೈದು ಸಾವಿರ ರೂ.ಗಳನ್ನು ಖಾತೆಗೆ ಜಮಾವಣೆ ಮಾಡಲಾಗಿದೆ.‌ ಇದನ್ನು ಬರೆ ಕುಸಿತದ ಮಣ್ಣುಗಳ ತೆರವು ಕಾರ್ಯಚರಣೆಗೆ ಬಳಸಿಕೊಳ್ಳಲು ಸರಕಾರ ಸೂಚಿಸಿದೆ ಎಂದರು. ಅಲ್ಲದೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಇದೀಗ ತುರ್ತು ಸಮಸ್ಯೆಗಳ ಸ್ಪಂದನೆಗೆ ತಂಡವನ್ನು ರಚಿಸಲಾಗಿದ್ದು ಇದರಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಇರಲಿದ್ದಾರೆ ಎಂದು ಶಾಸಕಿಯವರ ಗಮನಕ್ಕೆ ತಂದರು. ಇಲಾಖಾವಾರು ಮಾಹಿತಿಯಲ್ಲಿ ಮೆಸ್ಕಾಂ ಸುಳ್ಯ ವಿಭಾಗದಲ್ಲಿ 750 ಕಂಬಗಳು ಮತ್ತು 50 ವಿದ್ಯುತ್ ಪರಿವರ್ತಕಗಳು ಹಾನಿಯಾಗಿದೆ ಮತ್ತು ಸುಬ್ರಹ್ಮಣ್ಯ ವಿಭಾಗದಲ್ಲಿ 390 ಕಂಬಗಳು ಹಾನಿಯಾಗಿದೆ ಎಂದು ತಿಳಿಸಿದರು . ಶಿಕ್ಷಣ ಇಲಾಖೆಯಲ್ಲಿ ಮೂರು ಶಾಲೆಗಳು ತೀರಾ ಶಿಥಿಲಾವ್ಯಸ್ಥೆಯಲ್ಲಿದ್ದು ಅಲ್ಲಿಂದ ಮಕ್ಕಳನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದ್ದು ಅವರಿಗೆ ದೇಗುಲದ ಸಭಾಂಗಣ ಮತ್ತು ಇತರೆಡೆಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಅಲ್ಲದೇ ಕಲ್ಮಕಾರು ಶಾಲೆಗೆ ಅನುದಾನ ಯಾವುದು ಬಂದಿಲ್ಲ ಎಂದು ಪ್ರಭಾರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು. ಉಳಿದಂತೆ ಅರಣ್ಯ , ಸಾಮಾಜ ಕಲ್ಯಾಣ , ಆರೋಗ್ಯ , ನಗರ ಪಂಚಾಯತ್ , ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಪಿ ಡಬ್ಲು ಡಿ ಇಲಾಖೆಯಲ್ಲಿ ಎಂಜಿನಿಯರ್ ಕೊರತೆ ಇದ್ದು ನಮಗೆ ಕಷ್ಟವಾಗುತ್ತಿದೆ ಅಲ್ಲದೇ ಇದೇ ಸಂದರ್ಭದಲ್ಲಿ ಮುಖ್ಯರಸ್ತೆಗಳಲ್ಲಿ ನೀರು ಹರಿದು ಹೋಗುತ್ತಿದ್ದು ಇವುಗಳ ಚರಂಡಿಗಳನ್ನು ಶುಚಿಗೊಳಿಸುವ ಕಾರ್ಯಗಳು ಆಗಬೇಕು ಎಂದು ಸೂಚಿಸಿದಾಗ ಕೇವಲ ಎರಡು ಮೂರು ದಿನಗಳಲ್ಲಿ ಚರಂಡಿ ಮತ್ತು ಲೋಕೋಪಯೋಗಿ ಇಲಾಖೆಯ ರಸ್ತೆಗಳನ್ನು ತುರ್ತು ಕ್ರಮ ಜರುಗಿಸುವುದಾಗಿ ತಿಳಿಸಿದರು.

ಹಾನಿ ಪರಿಹಾರ ಬಾರದೇ ಇದ್ದಲ್ಲಿ ಶಾಸಕರ ಅನುದಾನ ನೀಡುವೆ ಸಾರ್ವಜನಿಕರಿಗೆ ತೊಂದರೆಯಾಗಬಾರದು – ಭಾಗೀರಥಿ ಮುರುಳ್ಯ .

ಸಭೆಯಲ್ಲಿ ಇಲಾಖೆವಾರು ಮಾಹಿತಿ ಸಂಗ್ರಹಿಸಿ ಸಲಹೆ ಸೂಚನೆಗಳು ನೀಡಿದ ಬಳಿಕ ಎಲ್ಲಾ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳ ಬಳಿಗೆ ಎಲ್ಲರು ಬರುತ್ತಾರೆ ಅವರ ಹೆಸರೇ ಸಾರ್ವಜನಿಕರಿಗೆ ಕಾಣುತ್ತದೆ ಹಾಗಾಗಿ ಎಲ್ಲಾ ಅಧಿಕಾರಿಗಳು ಸರಿಯಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು .ಇದೀಗ ತುರ್ತಾಗಿ ಸಾರ್ವಜನಿಕರಿಗೆ ತೊಂದರೆ ಆಗುವ ರಸ್ತೆಗಳ ಚರಂಡಿಗಳು ಮತ್ತು ತುರ್ತು ಕೆಲಸಗಳಿಗೆ ಅನುದಾನದ ಭಯವು ಅಧಿಕಾರಿಗಳಿಗೆ ಬೇಡ. ನಾನು ನನ್ನ ಶಾಸಕರ ಪ್ರದೇಶ ಅಭಿವೃದ್ಧಿಯ ಅನುದಾನವನ್ನು ನೀಡುತ್ತೇನೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು ಅಲ್ಲದೇ ಪ್ರತಿಯೊಬ್ಬ ಅಧಿಕಾರಿಯು ದೂರವಾಣಿ ಕರೆಗಳನ್ನು ಸ್ವೀಕರಿಸಬೇಕು ಮತ್ತು ಸಮಸ್ಯೆಗಳಾದ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.‌ ವೇದಿಕೆಯಲ್ಲಿ ತಹಾಶೀಲ್ದಾರ್ ಮಂಜುನಾಥ್ ಜಿ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!