ಸುಳ್ಯದ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಎಸ್.ಎಸ್. ಎಲ್.ಸಿ ವಿದ್ಯಾರ್ಥಿಗಳ ಪೋಷಕರ ಸಭೆಯು ಆಗಸ್ಟ್ 3 ರಂದು ನಡೆಯಿತು.
ಸಮಾರಂಭದ ಸಭಾಧ್ಯಕ್ಷತೆಯನ್ನು ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ’ಸೋಜ ವಹಿಸಿ ಮಾತನಾಡುತ್ತಾ, ಮಕ್ಕಳನ್ನು ಈಗಿನಿಂದಲೇ ಪರೀಕ್ಷೆಗಳಿಗೆ ಯಾವ ರೀತಿ ತಯಾರಿ ಗೊಳಿಸಬೇಕು, ದೈನಂದಿನ ಚಟುವಟಿಕೆ, ಶಿಸ್ತು, ಗೌರವ ತಾಳ್ಮೆ ಈ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸುವಂತೆ ಹೆತ್ತವರು ತಮ್ಮ ಮಕ್ಕಳಿಗೆ ಉತ್ತೇಜಿಸಬೇಕು ಎಂದರು.ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ, ಪ್ರೌಢಶಾಲಾ ಪೋಷಕರ ಸಮಿತಿಯ ಸದಸ್ಯರಾದ ವಿಜಯ್ ಕುಮಾರ್ ಹಾಗೂ ದಿನೇಶ್ವರಿ ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಸವಿತಾ ರವರು ಈ ವರ್ಷದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆಗಳು, ಮತ್ತು ಹೆತ್ತವರಿಗೆ ಅಗತ್ಯವಿರುವ ಸಲಹೆ ಸೂಚನೆಗಳ ಬಗ್ಗೆ ತಿಳಿಸಿದರು. ಸಹ ಶಿಕ್ಷಕಿ ರೀಟಲತಾ ಡಿ’ಸಿಲ್ವ ಸ್ವಾಗತಿಸಿದರು.
- Saturday
- November 23rd, 2024