ವಿಶ್ವ ಹಿಂದೂ ಪರಿಷದ್ ಅಯೋಧ್ಯೆ ಶಾಖೆ ಎಲಿಮಲೆ ಇದರ
ಮಾತೃ ಶಕ್ತಿ ಮತ್ತು ದುರ್ಗಾ ವಾಹಿನಿ ಘಟಕ ಉದ್ಘಾಟನೆ ಆ.08 ರಂದು ಜ್ಞಾನದೀಪ ಶಾಲಾ ಸಭಾಂಗಣದಲ್ಲಿ ನಡೆಯಿತು. ಘಟಕದ ಉದ್ಘಾಟನೆ ಯನ್ನು ಮಾತೃ ಶಕ್ತಿ ಜಿಲ್ಲಾ ಸಂಯೋಜಕರಾದ ಶ್ರೀಮತಿ ಗೀತಾ ಕಡಬ ಉದ್ಘಾಟಿಸಿದರು.
ವೇದಿಕೆ ಯಲ್ಲಿ ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸೋಮಶೇಖರ ಪೈಕ, ತಾಲೂಕು ಸಂಯೋಜಕ ಹರಿಪ್ರಸಾದ್ ಎಲಿಮಲೆ, ಮಾತೃ ಶಕ್ತಿ ತಾಲೂಕು ಸಂಯೋಜಕ ರಾದ ಶ್ರೀಮತಿ ರೀನಾ ಚಂದ್ರಶೇಖರ ಜೋಡಿಪಣೆ, ದುರ್ಗಾ ವಾಹಿನಿ ತಾಲೂಕು ಸಂಯೋಜಕರಾದ ಶ್ರೀಮತಿ ವಿಶಾಲ ಅಜ್ಜಾವರ, ವಿ.ಹಿಂ.ಪ. ಅಯೋದ್ಯೆ ಶಾಖೆಯ ಅಧ್ಯಕ್ಷ ಭೋಜಪ್ಪ ಗೌಡ ಹರ್ಲಡ್ಕ, ತಾಲೂಕು ಸತ್ಸಂಗ ಪ್ರಮುಖ ಸತೀಶ ಟಿ ಯನ್, ಬಾನುಪ್ರಕಾಶ್ ಪೆಲ್ತಡ್ಕ, ಮಂಜುನಾಥ್ ಕಾಟೂರು, ಎಲಿಮಲೆ ಘಟಕದ ಪದಾಧಿಕಾರಿಗಳಾದ ಜಯಂತ್ ಹರ್ಲಡ್ಕ, ಸುನಿಲ್ ಸುಳ್ಳಿ, ಪ್ರಶಾಂತ್ ಅಂಬೆಕಲ್ಲು, ಉದಯ ಚಳ್ಳ, ಮಣಿಕಂಠ ಎಲಿಮಲೆ, ತಾರಾನಾಥ್ ಅಡಿಗೈ ಉಪಸ್ಥಿತರಿದ್ದರು. ನೂತನ ಜವಾಬ್ದಾರಿ ಘೋಷಣೆ ಯನ್ನು ತಾಲೂಕು ಸಹ ಕಾರ್ಯದರ್ಶಿ ಬಾನುಪ್ರಕಾಶ್ ಪೆರುಮುಂಡ ಘೋಷಿಸಿದರು.
ಮಾತೃ ಶಕ್ತಿ ಘಟಕದ ಸಂಯೋಜಕಿಯಾಗಿ ಶಶಿಕಲಾ ಕಾಡುಜಬಳೆ, ಸಹ ಸಂಯೋಜಕಿಯಾಗಿ ಲೇಖಾ ಸತೀಶ್ ಗುಡ್ಡೆ ಸತ್ಸಂಗ ಪ್ರಮುಖ್ ಆಗಿ ಚೈತ್ರ ಹಿಮಕರ ಕಜೆ, ಸಹ ಸತ್ಸಂಗ ಪ್ರಮುಖ್ ಆಗಿ ವನಿತಾ ಜಯಂತ್ ಚಿಕ್ಮುಳಿ, ಮಾತೃ ಸೇವಾ ಪ್ರಮುಖ್ ಆಗಿ ದಿವ್ಯಾ ಎಲಿಮಲೆ, ಸಹ ಸೇವಾ ಪ್ರಮುಖ್ ಆಗಿ ಹೇಮಾವತಿ ಪುರುಷೋತ್ತಮ್ ಚಿತ್ತಡ್ಕ, ಸದಸ್ಯರಾಗಿ ಸವಿತ ಕೇಶವ ಕಾಯರ, ಉಷಾ ಚಂದ್ರಶೇಖರ ಕೇಪ್ಲಕಜೆ, ಲೀಲಾವತಿ ಎಲಿಮಲೆ, ಅಶ್ವಿನಿ ಕಡ್ಯ, ನಯನ ಜಯಂತ್ ಹರ್ಲಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ದುರ್ಗಾ ವಾಹಿನಿ ಘಟಕದ ಸಂಯೋಜಕಿಯಾಗಿ ಜಯಂತಿ ಮನೋಹರ್ ಎಲಿಮಲೆ, ಸಹ ಸಂಯೋಜಕಿಯಾಗಿ ದಿವ್ಯಾ ಪರ್ಲಡಿ, ವಿದ್ಯಾರ್ಥಿ ಪ್ರಮುಖ್ ಆಗಿ ವೇದವಾಣಿ ಎಲಿಮಲೆ, ಸಹ ವಿದ್ಯಾರ್ಥಿ ಪ್ರಮುಖ್ ಆಗಿ ಪುಷ್ಪಾವತಿ, ಸಾಪ್ತಾಹಿಕ ಮಿಲನ್ ಆಗಿ ಕಾವ್ಯ ಹರಿಪ್ರಸಾದ್ ಮಂದ್ರಪ್ಪಾಡಿ
ಸಹ ಸಾಪ್ತಾಹಿಕ ಪ್ರಮುಖ್ ಆಗಿ ಸುನಿತಾ ಚಂದ್ರಶೇಖರ ಚಳ್ಳ, ಶಕ್ತಿ ಸದಾನ ಪ್ರಮುಖ್ ಆಗಿ ವೇಣಿ ಪುರುಷೋತ್ತಮ್ ಸುಳ್ಳಿ
ಸಹ ಶಕ್ತಿ ಸದಾನ ಪ್ರಮುಖ್ ಆಗಿ ದಿವ್ಯ ಪ್ರಸನ್ನ ಎಲಿಮಲೆ, ಬಾಲ ಸಂಸ್ಕಾರ ಪ್ರಮುಖ್ ಆಗಿ ಗೌತಮಿ ಕೃಷ್ಣ ಎಲಿಮಲೆ, ಸಹ ಬಾಲ ಸಂಸ್ಕಾರ ಪ್ರಮುಖ್ ಆಗಿ ಉಷಾ ರವಿಕಿರಣ್ ಎ.ಕೆ., ಸದಸ್ಯರಾಗಿ ಲೋಕೇಶ್ವರಿ ವಲಿಕಜೆ, ಶಾಲಿನಿ ಎ.ಎಚ್., ತೀರ್ಥಕ್ಷಿ ಹರಿಶ್ಚಂದ್ರ ಪಟ್ಟೆ, ದಕ್ಷಿತಾ ಪ್ರಶಾಂತ್ ಅಂಬೆಕಲ್ಲು, ಭವ್ಯ ವೆಂಕಟ್ ಕಲ್ಲುಪಣೆ, ಸವಿತಾ ಚಾಕಟೇಮೂಲೆ ಆಯ್ಕೆಯಾದರು.