Ad Widget

ಸುಳ್ಯ : ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನದ ಅಂಗವಾಗಿ ನಡೆಯುವ ಮೊಸರು ಕುಡಿಕೆ ಉತ್ಸವ ಸಮಿತಿ ರಚನೆ – ಅಧ್ಯಕ್ಷರಾಗಿ ಎ.ವಿ.ತೀರ್ಥರಾಮ, ಕಾರ್ಯದರ್ಶಿ ಪ್ರಕಾಶ್ ಯಾದವ್, ಕೋಶಾಧಿಕಾರಿ ನವೀನ್ ಎಲಿಮಲೆ

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷತ್ ನ ಸ್ಥಾಪನಾ ದಿನ ಅಂಗವಾಗಿ ಹಲವು ವರ್ಷಗಳಿಂದ ಸುಳ್ಯದಲ್ಲಿ ವಿಜೃಂಭಣೆಯಿಂದ ಮೊಸರು ಕುಡಿಕೆ ಉತ್ಸವ ಆಚರಣೆ ನಡೆಯುತ್ತಿದೆ. ಈ ಬಾರಿ ನಡೆಯುವ 11ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವದ ಬಗ್ಗೆ ಚೆನ್ನಕೇಶವ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು.

. . . . . . . . .

ನೂತನ ಸಮಿತಿಯ ಅಧ್ಯಕ್ಷರಾಗಿ ಎ.ವಿ.ತೀರ್ಥರಾಮ ಅಂಬೆಕಲ್ಲು, ಕಾರ್ಯದರ್ಶಿಯಾಗಿ ಪ್ರಕಾಶ್ ಯಾದವ್ ಹಾಗೂ ಕೋಶಾಧಿಕಾರಿಯಾಗಿ ನವೀನ್ ಎಲಿಮಲೆ ಆಯ್ಕೆಯಾದರು.

. . . . . . .

ಉಪಾಧ್ಯಕ್ಷರಾಗಿ ಸುನೀಲ್ ಕೇರ್ಪಳ, ರವಿಚಂದ್ರ ಕೊಡಿಯಾಲಬೈಲ್, ದೇವಿಪ್ರಸಾದ್ ಅತ್ಯಾಡಿ, ಸಹಕಾರ್ಯದರ್ಶಿಯಾಗಿ ಪಾರ್ವತಿ ಕುಂಚಡ್ಕ, ರಾಜೇಶ್ ಬೇರಿಕೆ, ವ್ಯವಸ್ಥಾ ಪ್ರಮುಖ್ ಆಗಿ ರಾಜೇಶ್ ಕಲ್ಲುಮುಟ್ಲು, ವಿನಯ ಪಾಡಾಜೆ ಆಯ್ಕೆಯಾದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ, ಮಾತೃಶಕ್ತಿಯ ಪ್ರಮುಖರು ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading