Ad Widget

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಪಂಚಗವ್ಯ ಚಿಕಿತ್ಸಾ ಶಿಬಿರ

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , ಪಾದೆ , ನರಿಮೊಗರು, ಪುತ್ತೂರು ಇದರ ಆಶ್ರಯದಲ್ಲಿ ,ಗೋಸೇವಾ ಗತಿ ವಿಧಿ,ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅರೋಗ್ಯ ಭಾರತಿ , ಪುತ್ತೂರು ಜಿಲ್ಲೆ ಇದರ ಸಹಯೋಗದಲ್ಲಿ”Answer for cancer ” ಖ್ಯಾತಿಯ ಡಾ .ಡಿ .ಪಿ .ರಮೇಶ್ , ಆಯುರ್ವೇದ ತಜ್ಞ ವೈದ್ಯರು ಹಾಗೂ ಪಂಚಗವ್ಯ ಚಿಕಿತ್ಸಾ ತಜ್ಞರು, ಬೆಂಗಳೂರು.ಇವರಿಂದ ಪಂಚಗವ್ಯ ಚಿಕಿತ್ಸಾ ಶಿಬಿರ
ಹಾಗೂ ಪಂಚಗವ್ಯ ಚಿಕಿತ್ಸೆ ವಿಚಾರ ಗೋಷ್ಠಿ , ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , ಪಾದೆ , ಗ್ರಾಮ ಪಂಚಾಯತ್ ಸಮೀಪ ,ನರಿಮೊಗರು, ಪುತ್ತೂರು ಇಲ್ಲಿ ,ಆಗಸ್ಟ್ 11, ಆದಿತ್ಯವಾರದಂದು ಜರುಗಲಿರುವುದು . ಬೆಳಿಗ್ಗೆ 9.30 ಗಂಟೆಗೆ ಉದ್ಘಾಟನೆಯನ್ನು ಗಂಗಾಧರ ಪೆರ್ಮಂಕಿ,ಸಂಯೋಜಕರು,ಗೋಸೇವಾ ಗತಿವಿಧಿ ಮಂಗಳೂರು ವಿಭಾಗ ಹಾಗೂ ಅಧ್ಯಕ್ಷತೆಯನ್ನು ಶ್ರೀ ಅರುಣ್ ಕುಮಾರ್ ಪುತ್ತಿಲ , ಸಾಮಾಜಿಕ ಮುಂದಾಳು , ಪುತ್ತೂರು ಇವರು ವಹಿಸಿಕೊಳ್ಳಲಿದ್ದಾರೆ . ಮೊದಲ ಗೋಷ್ಠಿಯಲ್ಲಿ ಡಾ . ಡಿ .ಪಿ .ರಮೇಶ್ ಇವರು
“ಪಂಚಗವ್ಯ ಚಿಕಿತ್ಸೆಗೆ ಮಣಿಯುವ ಕಾಯಿಲೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದರ ಮಹತ್ವ “ದ ಬಗ್ಗೆ,
ಎರಡನೆಯ ಗೋಷ್ಠಿಯಲ್ಲಿ ಡಾ .ಅವಿನಾಶ್ ಸಲ್ಗರ್,
ಸೈಕೋನ್ಯೂರೋ ಇಮ್ಮ್ಯೂನೊಲೊಜಿಸ್ಟ್ ಹಾಗೂ ಪರ್ಯಾಯ ಚಿಕಿತ್ಸಾ ವಿಧಾನಗಳ ತಜ್ಞರು , ಬೆಂಗಳೂರು
ಇವರು “ಪಂಚಗವ್ಯ ಚಿಕಿತ್ಸೆ – ಸಂಶೋಧನೆ, ಅಧ್ಯಯನ ಮತ್ತು ಪ್ರಸ್ತುತತೆ ಬಗ್ಗೆ , ಮೂರನೆಯ ವಿಚಾರ ಗೋಷ್ಠಿ ಯಲ್ಲಿ ಮಧ್ಯಾಹ್ನದ ನಂತರ ಡಾ .ಅವಿನಾಶ್ ಸಲ್ಗರ್ ಇವರು “ಮನೋದೈಹಿಕ ಕಾಯಿಲೆಗಳು & ತಡೆಗಟ್ಟುವಿಕೆ ಮತ್ತು ಪಂಚಗವ್ಯದಂತಹ ನೈಸರ್ಗಿಕ ಪರಿಹಾರೋಪಾಯ “ದ ಬಗ್ಗೆ ವಿಚಾರಗಳನ್ನು ತಿಳಿಸಲಿದ್ದಾರೆ .
ವಿಚಾರಗೋಷ್ಠಿಗೆ ಹಾಗೂ ತಪಾಸಣೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ .ಯಾವುದೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಈಗ ಗುಣ ಹೊಂದಿದವರು ಅದು ಮರುಕಳಿಸದಂತೆ, ಕ್ಯಾನ್ಸರ್ ಎಂದು ಈಗ ತಾನೇ ಪತ್ತೆಯಾದ ಹಂತದಲ್ಲಿ ಇರುವವರು , ಚಿಕಿತ್ಸೆ ಪಡೆಯುತ್ತಾ ಇರುವವರು ಸಂದರ್ಶಿಸಿ ಚಿಕಿತ್ಸೆ ಪಡೆಯಬಹುದು . ಚಿಕಿತ್ಸೆಗೆ ಬರುವವರು ಹಳೆಯ ಎಲ್ಲಾ ರಿಪೋರ್ಟ್ ಗಳನ್ನು ತರಬೇಕು .ಹೆಚ್ಚಿನ ಮಾಹಿತಿಗೆ
ವಾಟ್ಸಪ್ ಸಂಖ್ಯೆ 90192 73522, ಹರ್ಷಿತ್ ಬೆಟ್ಟಂಪಾಡಿ ( 90199 34581) , ಗಣೇಶ್ ಮುವ್ವಾರು ( 94490 09499 ),
ಜಯಾನಂದ . ಕೆ . (94484 45828 ) ಇವರುಗಳನ್ನು ಸಂಪರ್ಕಿಸಲು ಆಸ್ಪತ್ರೆಯ ಆಡಳಿತ ನಿರ್ದೇಶಕ , ಆಯುರ್ವೇದ ತಜ್ಞ ವೈದ್ಯ ಡಾ . ರಾಘವೇಂದ್ರ ಪ್ರಸಾದ್ ಬಂಗಾರಡ್ಕ ವಿನಂತಿಸಿಕೊಂಡಿದ್ದಾರೆ .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!